ಸಿದ್ದಾಪುರ, ಜು. ೩೦: ಅಮ್ಮತ್ತಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ನಡಿಕೇರಿಯಂಡ ಜ್ಯೋತಿ ಪೊನ್ನಪ್ಪ ಆಯ್ಕೆಯಾಗಿದ್ದಾರೆ.
ಅಮ್ಮತ್ತಿ ಕೊಡವ ಸಮಾಜದಲ್ಲಿ ೨೦೨೩-೨೪ ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಕಾರ್ಯದರ್ಶಿಯಾಗಿ ಎಸ್ ಎಸ್ ಪೂಣಚ್ಚ, ಖಜಾಂಚಿಯಾಗಿ ಮಚ್ಚಾರಂಡ ಚಂಗಪ್ಪ ಆಯ್ಕೆಯಾದರು. ಲಯನ್ಸ್ ಕ್ಲಬ್‌ನ ಪ್ರಾದೇಶಿಕ ಅಧಿಕಾರಿ ರತ್ನ ಚರ್ಮಣ ಪ್ರತಿಜ್ಞಾ ವಿಧಿ ಬೋಧಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜ್ಯೋತಿ ಪೊನ್ನಪ್ಪ ಮಾತನಾಡಿ ಅಮ್ಮತ್ತಿ ಲಯನ್ಸ್ ಕ್ಲಬ್ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಮುಂದೆಯು ಕೂಡ ಸಮಾಜಮುಖಿ ಕೆಲಸಗಳನ್ನು ಮುಂದುವರಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ ಪ್ರಮುಖರಾದ ಅಂಬೆಕಲ್ ನವೀನ್, ಪಟ್ಟಡ ವಿಶಾಲ್ ದೇವಯ್ಯ, ಬಾಲು ಇನ್ನಿತರರು ಹಾಜರಿದ್ದರು. ಕರುಣ್ ಕಾರ್ಯಪ್ಪ ಪ್ರಾರ್ಥಿಸಿದರು, ಸಬಿತಾ ಬೋಪಣ್ಣ ಸ್ವಾಗತಿಸಿ, ರಕ್ಷಿತ್ ಅಯ್ಯಪ್ಪ ವಂದಿಸಿದರು.