ಸುಂಟಿಕೊಪ್ಪ, ಜು. ೩೦: ಅಂದಾಜು ೨೦ ವರ್ಷ ಪ್ರಾಯದ ಗಂಡಾನೆಯೊAದು ವಿದ್ಯುತ್ ಸ್ಪರ್ಶಗೊಂಡು ಸತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸುAಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮದ ಪರ್ಚಿಕೆರೆ ಎಂಬಲ್ಲಿ ಉದಯಕುಮಾರ್ ಎಂಬವರಿಗೆ ಸೇರಿದ ತೋಟದಲ್ಲಿ ಆನೆ ಸತ್ತು ಬಿದ್ದಿದೆ. ಆದರೆ ಕುತ್ತಿಗೆಯಲ್ಲಿ ಬೇಲಿ ಹಾಕಲು ಬಳಸುವ ಮುಳ್ಳು ತಂತಿಯು ಉರುಳಿನಂತೆ ಸುತ್ತಿಕೊಂಡಿರುವುದು ಕಂಡು ಬಂದಿ ಮೇಲ್ನೋಟಕ್ಕೆ ಇದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ಈ ಘಟನೆಯು ಶುಕ್ರವಾರ ರಾತ್ರಿ ಸಂಭವಿಸಿದೆ ಎನ್ನಲಾಗಿದ್ದು, ಆನೆಯ ಮೃತ ಶರೀರ ಸ್ಥಿತಿ ಇದಕ್ಕೆ ಪುಷ್ಟಿ ನೀಡುವಂತಿದೆ. ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ ಇಬ್ಬರು ಆರೋಪಿಗಳ ಸುಳಿವು ಲಭ್ಯವಾಗಿದ್ದು, ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಕುಶಾಲನಗರ ವಲಂiÀi ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ಡಿಸಿಎಫ್ ಪೂವಯ್ಯ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನದಳ ಸಹಿತ ಸ್ಥಳ ಪರಿಶೀಲನೆ ಮತ್ತು ಮಹಜರು ನಡೆಸಿದರು. ಮೃತ ಆನೆಯ ಮರಣೋತ್ತರ ಪರೀಕ್ಷೆಯನ್ನು ಡಾ.ಚಿಟ್ಟಿಯಪ್ಪ ನಡೆಸಿದ ಬಳಿಕ ಅಂತ್ಯಸAಸ್ಕಾರವನ್ನು ನೇರವೇರಿಸಲಾಯಿತು. ಅರಣ್ಯ ಇಲಾಖೆ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದೆ.