ಮಡಿಕೇರಿ, ಜು. ೩೦: ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಘಟಕದಿಂದ ನೂತನ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರನ್ನು ಭೇಟಿ ಮಾಡಲಾಯಿತು.

ಈ ಸಂದರ್ಭ ಜಿಲ್ಲಾ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು, ಜಿಲ್ಲೆಯಲ್ಲಿ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪಿಸಲು ಜಾಗ ನೀಡುವಂತೆ ಮನವಿ ಮಾಡಿದರು. ಜಾನಪದ ದಸರಾ ಹಾಗೂ ಇತರ ಜಾನಪದ ಚಟುವಟಿಕೆಗಳಿಗೆ ಸ್ಪಂದಿಸುವುದಾಗಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಭರವಸೆ ನೀಡಿದರು.

ಈ ಸಂದರ್ಭ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಜಿಲ್ಲಾ ಖಜಾಂಚಿ ಸಂಪತ್‌ಕುಮಾರ್, ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಸಮಿತಿ ಸದಸ್ಯರಾದ ನವೀನ್, ಎ.ಕೆ. ವೀಣಾಕ್ಷಿ ಹಾಗೂ ರೇವತಿ ಹಾಜರಿದ್ದರು. ಇದೇ ವೇಳೆ ಪರಷತ್ ನಿಯೋಗವು ಜಿಲ್ಲಾಧಿಕಾರಿಗಳಿಗೆ ಕೊಡಗಿನ ಖಾದ್ಯಗಳನ್ನು ನೀಡಿತು.