ಪ್ರಸ್ತುತ ವರ್ಷದಲ್ಲಿ ಒಂದೇ ರೀತಿಯ ಮಳೆ ಸುರಿಯದೇ ಇರುವುದರಿಂದ ಬಿಸಿಲು ಮತ್ತು ಮಳೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಫಿ ಗಿಡಗಳಿಗೆ ಕೊಳೆರೋಗ ಕಾಣಿಸಿಕೊಂಡಿದೆ. ಇದನ್ನು ಹತೋಟಿಗೆ ತರಲು ಮಳೆ ಬಿಡುವು ನೀಡಿದ ಸಂದರ್ಭದಲ್ಲಿ ೨೦೦ರಿಂದ ೨೫೦ ಎಂ.ಎಲ್. ಒಪೆರಾ ಔಷಧಿಯನ್ನು ಒಂದು ಬ್ಯಾರಲ್‌ಗೆ ಹಾಕಿ ಅದರೊಂದಿಗೆ ಅಂಟು ದ್ರಾವಣವನ್ನು ಬೆರೆಸಿ ಕಾಫಿಗಿಡಗಳಿಗೆ ಸಿಂಪಡಿಸಬೇಕು. ಜೊತೆಗೆ ೨೦೦ರಿಂದ ೨೫೦ ಎಂ.ಎಲ್.ಟಿಬ್ಯು ಕೊನೊಜಾಲ್ ಔಷಧಿಯನ್ನು ಒಂದು ಬ್ಯಾರಲ್‌ಗೆ ಬೆರೆಸಿ ಕಾಫಿ ಗಿಡಗಳಿಗೆ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಾಫಿ ಮಂಡಳಿಯನ್ನು ರೈತರು ಸಂಪರ್ಕಿಸಬಹುದಾಗಿದೆ.

-ಡಿ.ಎಸ್. ಮುಖಾರಿಬ್,

ಸಂಪರ್ಕ ಅಧಿಕಾರಿ ಕಾಫಿ ಮಂಡಳಿ ಅರುವತ್ತೋಕ್ಕಲು