ಕುಶಾಲನಗರ, ಜು. ೨೯: ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಎತ್ತು ಸಾವಿಗೀಡಾಗಿರುವ ದುರ್ಘಟನೆ ಗುಡ್ಡೆಹೊಸೂರು ಗ್ರಾಮದಲ್ಲಿ ನಡೆದಿದೆ.

ಗುಡ್ಡೆಹೊಸೂರು ಗ್ರಾಮದ ರೈತ ಪುರುಷೋತ್ತಮ ಎಂಬವರಿಗೆ ಸೇರಿದ ಎತ್ತು ಬಿದ್ದಿದ್ದ ತಂತಿ ತಗುಲಿ ಸ್ಥಳದಲ್ಲಿ ಪ್ರಾಣ ಬಿಟ್ಟಿದೆ. ರೈತನಿಗೆ ಸಾವಿರಾರು ರೂಗಳ ನಷ್ಟ ಉಂಟಾಗಿದೆ. ನಷ್ಟಕ್ಕೆ ಒಳಗಾದ ರೈತನಿಗೆ ಸಂಬAಧಿಸಿದ ಇಲಾಖೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.