ಮಡಿಕೇರಿ, ಜು. ೨೯: ಚೆಯ್ಯಂಡಾಣೆ ನರಿಯಂದಡ ಗ್ರಾಮಸ್ಥರಿಗೆ ಯಾವುದೇ ಮುನ್ಸೂಚನೆಯನ್ನು ನೀಡದೆ ಏಕಾಏಕಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದ್ದರಿಂದ ಪೊಕ್ಕುಳಂಡ್ರ ಕುಶಾಲಪ್ಪ ರಮೇಶ್ ಅವರ ಗದ್ದೆ ಮತ್ತು ಬಾಳೆ ತೋಟ, ಕಾಫಿ ತೋಟ ಸಂಪೂರ್ಣ ಹಾಳಾಗಿದೆ. ಇದಕ್ಕೆ ಅರಣ್ಯ ಇಲಾಖೆ ನೇರ ಹೊಣೆ ಎಂದು ತಮ್ಮ ಅಳಲನ್ನು ತೋಡಿಕೊಂಡಿರುತ್ತಾರೆ. ಇದ್ದ ಆರು ಕಾಡಾನೆಗಳಲ್ಲಿ ಮೂರನ್ನು ಮಾತ್ರ ಕಾಡಿಗಟ್ಟಿ ಉಳಿದ ಮೂರು ಕಾಡಾನೆಗಳು ರಮೇಶ್ ಅವರ ತೋಟಕ್ಕೆ ಬಂದಿದ್ದರೂ ಯಾವುದೇ ಮಾಹಿತಿ ನೀಡದೆ ಕಾರ್ಯಾಚರಣೆ ನಿಲ್ಲಿಸಿ ಹೋಗಿರುತ್ತಾರೆ. ಇದರಿಂದ ರಮೇಶ್ ಅವರು ಆತಂಕದಿAದ ದಿನ ಕಳೆಯುವಂತಾಗಿದೆ.