ಮಡಿಕೇರಿ, ಜು. ೨೮ : ನಗರದ ಪ್ರವಾಸಿ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷರಾಗಿ ತೆಕ್ಕಡ ಸಂತೋಷ್ ಕಾರ್ಯಪ್ಪ ಮತ್ತೊಮ್ಮೆ ಅವಿರೋಧವಾಗಿ ಆಯ್ಕೆಯಾದರು.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಸತೀಶ್ ಕುಮಾರ್, ಕಾರ್ಯದರ್ಶಿಯಾಗಿ ಅರಸು, ಖಜಾಂಚಿ ವೀರೇಂದ್ರ, ಸಹಕಾರ್ಯದರ್ಶಿ ನವೀನ್, ಗೌರವಾಧ್ಯಕ್ಷ ಚಂದ್ರಶೇಖರ್, ನಿರ್ದೇಶಕರುಗಳಾಗಿ ತೆಕ್ಕಡ ಮಧು ಮಂದಣ್ಣ, ರವಿ, ಜೀವನ್‌ಕುಮಾರ್, ಶರತ್, ಥೋಮಸ್, ಕಬೀರ್ ಶೇಖ್, ತೀರ್ಥಕುಮಾರ್ ಆಯ್ಕೆಯಾದರು.