ಬದುಕಿನಲ್ಲಿ ಪ್ರತಿಯೊಂದು ಕ್ಷಣವೂ ದಿನವೂ ಅತಿ ಅಮೂಲ್ಯವಾದುದು ನಿಜ. ಪ್ರತಿದಿನವೂ ಒಂದು ಮಹತ್ವ ವುಳ್ಳದ್ದೇ ಆಗಿರುತ್ತದೆ. ಅವು ಸ್ಮರಣೀಯವೆನಿಸುತ್ತವೆ. ಕೆಲವು ಸಲ ಸವಿನೆನಪುಗಳ ಗರಿಗೆದರಿಸಿ ಮೆಲುಕು ಹಾಕಿದರೆ ಇನ್ನೂ ಕೆಲವು ಕಹಿ ಘಟನೆಗಳು ಮುಖದ ಮುಗುಳುನಗೆಯ ಸರಿಸಿ ಕಣ್ತುಂಬಿಸಿ ಬಿಡುತ್ತವೆ. ಹೀಗೆ ದಿನದ ಮಹತ್ವದ ಪುಟಗಳನ್ನು ತಿರುವಿ ಹಾಕುತ್ತಾ ಹೋದರೆ ಇಂದು ಅಂತರರಾಷ್ಟಿçÃಯ ಸ್ನೇಹ ದಿನ. ಅಂದರೆ ಸ್ನೇಹಕ್ಕೂ ಒಂದು ದಿನ ಮೀಸಲೇನು ಎಂಬ ಪ್ರಶ್ನೆ ಮನಃಪಟಲದಿ ಹಾದು ಹೋಗದಿರದು. ವಿವಿಧೆಡೆಗಳಲ್ಲಿ ವಿವಿಧ ರೀತಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ಮಾನವ ಸಂಘಜೀವಿ. ಅವನಿಗೆ ಸಾಮಾಜಿಕವಾಗಿ ಪರಸ್ಪರ ಸಂಬAಧ ಗಳು ಬಹಳ ಅವಶ್ಯಕ. ಸ್ನೇಹವು ಮಾನವನ ಒಂಟಿತನ, ಆತಂಕ, ಖಿನ್ನತೆ ಯನ್ನು ಮರೆಸಿ, ಭಾವನೆಗಳನ್ನು ಹೊಂದಾಣಿಕೆ ಮಾಡಿ ಸ್ನೇಹವನ್ನು ಸುಭದ್ರ ಗೊಳಿಸುತ್ತದೆ. ಸ್ನೇಹಿತರಿಲ್ಲದವರು ಯಾರಿಹರು ? ಬಾಲ್ಯದಿಂದ ವೃದ್ಧಾಪ್ಯ ದವರೆಗೂ ಒಂದಿಲ್ಲ ಒಂದು ರೀತಿಯ ಸ್ನೇಹ ನಮ್ಮದಾಗಿರುತ್ತದೆ. ಬಾಲ್ಯದಲ್ಲಿ ಬಳಪ ಕಡ್ಡಿಯ ಹಂಚಿ ಬರೆದ ಸ್ನೇಹಿತರು, ಮರಕ್ಕೆ ಕಲ್ಲು ಹೊಡೆದು ಹುಣಸೆ ಹಣ್ಣನ್ನು ತಿಂದು ತರಗತಿ ಕೋಣೆಯಲ್ಲಿ ಶಿಕ್ಷಕರಿಂದ, ಮನೆಯಲ್ಲಿ ಅಮ್ಮನಿಂದ ಪೆಟ್ಟು ತಿಂದAತಹ ನೆನಪಿನ ಪುಟಗಳ ತಿರುವಿಸುವ ಸ್ನೇಹಿತರು, ಮರಕೋತಿ ಆಡಿ ಮರದಿಂದ ಮರಕ್ಕೆ ಜಿಗಿದು ಬಿದ್ದು ಎದ್ದು ಓಡಿ ತರಗತಿ ಕೋಣೆ ಸೇರಿದ ಸ್ನೇಹ ಬಳಗದವರು, ಗೋಲಿ ಬುಗುರಿ, ಚಿನ್ನಿದಾಂಡು ಆಡಲು ಸೇರುತ್ತಿದ್ದ ಗಲ್ಲಿಯ ಸಹ ಆಟಗಾರರು, ತರಲೆ ತುಂಟತನ, ಚೇಷ್ಟೆ ಮಾಡಿ ಗುರುಗಳಿಂದ ಏಟು ತಿನ್ನಿಸುತ್ತಿದ್ದ ಸ್ನೇಹಿತರು, ಒಟ್ಟಾಗಿ ಕೂಡಿ ಅಂತ್ಯಾಕ್ಷರಿ ಹಾಡಿ ಕುಣಿದು ಸಂತಸ ಧಾರೆಯ ಎರೆದವರು, ರೇಗಿಸಿದವರು, ಚುಡಾಯಿಸಿದವರು, ಬೈಯಿಸಿಕೊಂಡವರು, ಒದೆಸಿಕೊಂಡವರು, ಗುಂಪು ಕಲಿಕೆಯಲ್ಲಿ ಜೊತೆಯಾದವರು, ನೋಟ್ಸ್ ಬರೆಯಲು ಸಹಾಯ ಮಾಡಿದವರು, ಪರೀಕ್ಷೆಯಲ್ಲಿ ನಕಲು ಮಾಡಿ ಚೀಟಿಯ ನಮ್ಮೆಡೆ ಎಸೆದು ದಿಗಿಲು ಹುಟ್ಟಿಸಿದವರು, ಪೆನ್ನು ಬಳಪವಲ್ಲದೆ ಎಂಜಲು ಮಿಠಾಯಿ ಹಂಚಿ ದವರು ಹೀಗೆ ಒಂದಿಲ್ಲೊAದು ರೀತಿಯ ಸಹಾಯ ಪಡೆದವರೊ, ಸಹಾಯ ಮಾಡಿದವರೊ ಬಲು ಆಪ್ತರಾಗಿ ಬಿಡುತ್ತಾರೆ. ಇನ್ನೂ ಪ್ರೌಢಶಾಲಾ, ಕಾಲೇಜು ದಿನಗಳಲ್ಲಿ, ಪದವಿ ತರಗತಿಗಳಲ್ಲಿ ವಿಭಿನ್ನ ಸ್ನೇಹವು ತೆರೆದುಕೊಳ್ಳುತ್ತದೆ.

ಹದಿಹರೆಯದ ಆ ಸ್ನೇಹ ತುಂಟಾಟಗಳು ನೋಡುಗರಿಗೆ ಪ್ರೀತಿ ಮತ್ತು ಆಕರ್ಷಣೆಯಾಗಿ ಮಾತ್ರ ಕಾಣುತ್ತವೆ. ಸ್ನೇಹ ಪ್ರೀತಿಯಾದ ಉದಾಹರಣೆ ಇಲ್ಲವೆಂದಲ್ಲ... ಆದರೆ ಎಲ್ಲಾ ನಿಷ್ಕಲ್ಮಶ ಸ್ನೇಹ ಬಂಧದಲ್ಲೂ ಪ್ರೀತಿಯನ್ನು ನುಸುಳಿಸುವುದು ತಪ್ಪೆನಿಸುತ್ತದೆ. ಒಂದAತೂ ಸತ್ಯ. ಸ್ನೇಹವಿರುವಲ್ಲಿ ಬಾಂಧವ್ಯ ವೃದ್ಧಿಯಾಗುತ್ತದೆ. ಉತ್ತಮ ಬಾಂಧವ್ಯ ಮನಃಶಾಂತಿಯನ್ನು ಹೆಚ್ಚಿಸುತ್ತದೆ. ಸ್ನೇಹವೆಂಬುದು ಸುಂದರ ಬಂಧ. ಸರಿಯಾದ ಪ್ರಮಾಣದಲ್ಲಿ ವಸ್ತುಗಳ ಬೆರಸಿ, ಬಳಸಿ ಕಟ್ಟಿದ ಕಟ್ಟಡ ಎಷ್ಟು ಉತ್ತಮ ಗುಣಮಟ್ಟದ್ದಾಗಿರುತ್ತದೊ ಹಾಗೆಯೇ ಪರಸ್ಪರ ಅರ್ಥೈಸಿಕೊಂಡ ಸಕಾರಾತ್ಮಕ ಮನೋ ಆಶಯಗಳನ್ನು ಒಳಗೊಂಡ ಮನಸ್ಸುಗಳ ನಡುವಿನ ಸ್ನೇಹ ಸಮ್ಮಿಲನ ಸದೃಢವಾಗಿ ಸ್ಥಿರವಾಗಿ ಉಳಿಯುತ್ತದೆ. ನಕಾರಾತ್ಮಕ ಸ್ನೇಹ ಬಂಧಗಳು ದೀರ್ಘಕಾಲ ಉಳಿಯದೆ ಕಮರಿ ಬಿಡುತ್ತವೆ. ಸ್ನೇಹವೆಂಬ ಮಧುರ ಬಂಧದಲಿ ಅರಳಿದ ಬಾಂಧವ್ಯಗಳು ಸುಖ-ದುಃಖ, ಸಂತೋಷ ನೋವುಗಳಲ್ಲಿ ನಮ್ಮ ಕುಟುಂಬದವರAತೆ, ಕೆಲ ಸಂದರ್ಭಗಳಲ್ಲಿ ಅದಕ್ಕೂ ಮಿಗಿಲಾಗಿ ಒಂದಾಗಿ ಬಿಡುತ್ತವೆ. ಕಷ್ಟಕಾಲದಲ್ಲಿ ಭುಜಕ್ಕೆ ಭುಜ ಕೊಡುವ ನೊಗವಾಗುತ್ತದೆ. ಯಾರೊಂದಿಗೂ ಹೇಳಿಕೊಳ್ಳಲಾಗದ ಎಷ್ಟೊ ವಿಷಯಗಳನ್ನು ಕೆಲವೊಮ್ಮೆ ಸ್ನೇಹಿತರ ಬಳಿಯಷ್ಟೆ ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ಎಂತಹ ಸಂದಿಗ್ಧ ಪರಿಸ್ಥಿತಿಗಳಲ್ಲಿಯೂ ಮಾನಸಿಕ ಧೈರ್ಯ ಸ್ಥೆöÊರ್ಯ ತುಂಬಿಕೊಡುವ ಹೇಳಿ ಮುಗಿಸದ ಸಂಬAಧಗಳಲ್ಲಿನ ಸಂಬAಧವ ಮೀರಿ ನಿಲ್ಲುತ್ತದೆ. ನಮ್ಮ ಯಶಸ್ಸನ್ನು ಬೆಂಬಲಿಸಿ ಹೊಗಳುವುದಷ್ಟೆ ಅಲ್ಲದೆ ಅಗತ್ಯ ಮಾರ್ಗದರ್ಶನ ನೀಡುವ ಸಹಚರ ಗುಣ ಸ್ನೇಹದ್ದಾಗಿದೆ. ಬಂಧಗಳನ್ನು ಬೆಸೆಯುವ ಸ್ನೇಹಲೋಕ ನಿಲುಕಿದರೆ ಸಂಭ್ರಮ. ಸ್ನೇಹಿತರೆಂದರೆ ಕಷ್ಟ-ಸುಖ ಎರಡೂ ಸಮಯದಲ್ಲೂ ಜೊತೆ ಇರುವ ವ್ಯಕ್ತಿಗಳೆನ್ನಲಾಗುತ್ತದೆಯಾದರೂ, ಕೆಲವರ ನಿಜಗುಣ ದರ್ಶನವಾಗುವುದು ಕಷ್ಟಕಾಲ ಬಂದಾಗಲೆ ಎಂಬುದು ಸುಳ್ಳಲ್ಲ. ಹಲವರು ಸ್ನೇಹಬಂಧ ಬಿಡಿಸಿ ಪಲಾಯನ ಮಾಡುವುದೂ ಉಂಟು. ಇನ್ನೂ ಕೆಲವರು ಸ್ನೇಹ ಸಂಬAಧದಲ್ಲಿ ಸಹಾಯ ಹಸ್ತ ಚಾಚಿದವರಿಗೆ ಮೋಸ ಮಾಡಿ, ಬಣ್ಣ ಬಳಿಯುವುದೂ ಉಂಟು. ಇಂತಹ ಘಟನೆಗಳು ಕ್ಷುಲ್ಲಕವೆನಿಸಿದರೂ ಸ್ನೇಹ ಸಂಬAಧಗಳು ಹಳಸಲು ಕಾರಣ ವಾಗದಿರದು. ಹೀಗೆ ಕೆಲವು ಸ್ನೇಹ ಬಂಧಗಳು ದುರ್ಬಲವಾದರೆ, ಇನ್ನೂ ಕೆಲವು ನೋಡುಗನ ಕೇಳುಗನ ದೃಷ್ಟಿಯಂತೆ ಅವರವರ ಮನಃಪಟಲದಿ ದೃಶ್ಯವನ್ನೇ ಬದಲಾಯಿಸಿ ಬಿಡುತ್ತವೆ. ಇಲ್ಲಸಲ್ಲದ ಅನೈತಿಕತೆಯ ಸಂಬAಧಗಳ ಕಟ್ಟಿ ಊಹಾಪೋಹಗಳ ಗೋಪುರ ನಿರ್ಮಿಸಿ ನಿಷ್ಕಲ್ಮಶ ಬಾಂಧವ್ಯಗಳನ್ನೇ ಕೊಂದು ಬಿಡುತ್ತವೆ. ಅವರಷ್ಟೇ ಒಳ್ಳೆಯವರು, ಇನ್ನೆಲ್ಲರೂ ಅಸಭ್ಯರೆಂಬ ಮನೋಚಿತ್ತವುಳ್ಳವರಿಗೇನೂ ಕೊರತೆ ಇಲ್ಲ. ಇಂತವರ ಮಧ್ಯೆ ಸಭ್ಯ-ಸುಂದರ ಮನಸ್ಥಿತಿಯುಳ್ಳ ಸ್ನೇಹವನ್ನು ಬೇಡವೆಂದು ತಳ್ಳುವವರಿಲ್ಲ ಬಿಡಿ.

ನಗು ಕ್ಷಮೆಯೆ ಕ್ಷೇಮವು

ಮೂಡದಿರಲಿ ಅಪಶೃತಿ

ತಾಳ್ಮೆ ಸಹನೆ ಮೊಳೆಯಲಿ

ಸ್ನೇಹ ಮಧುರವು

ಮಲಿನಭಾವದ ವಿದಾಯ

ಮೃದುನುಡಿಯ ಎರೆಯುತಾ

ಧರಣಿಗುಣವ ಮೆರೆಯಲಿ

ಸ್ನೇಹ ಮಧುರವು...

ಮನದ ನೋವ ಮರೆಸುವ ಸ್ನೇಹಭಾವದ ಕನ್ನಡಿಗೆ ಮುನ್ನುಡಿಯಾಗುವ ಹಗೆಯ ಧಗೆಯಿರದ ಬೆಲೆಕಟ್ಟಲಾಗದ ಅದ್ಭುತ ಶಕ್ತಿ ಗೆಳೆತನಕ್ಕಿದೆ. ಬಳಸಿಕೊಳ್ಳದೆ ಬೆಳಸಿಬಿಡುವ ಸ್ನೇಹ ಎಲ್ಲರಿಗೂ ಸಿಗಲಿ. ಮಮತೆ, ನಂಬಿಕೆ, ವಿಶ್ವಾಸ ತುಂಬಿ ಕೊಟ್ಟು ಜಾತಿ ಮತ ಬೇಧ ಮೀರಿ ನಿಲ್ಲುವ, ಕೋಪ ತಾಪದ ಹದದ ಪರಿಮಿತಿ ಯೊಳಗಿನ ಸ್ನೇಹ ಸಿಕ್ಕರೆ, ಸ್ನೇಹವೆಂಬ ಸಕ್ಕರೆಗೆ ಅಂತ್ಯವೆಲ್ಲಿದೆ ಹೇಳಿ... ?

-ಮಾಲಾಮೂರ್ತಿ, ಕುಶಾಲನಗರ.