ಗೋಣಿಕೊಪ್ಪಲು, ಜು. ೨೯: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ವಾಣಿಜ್ಯ ನಗರಿ ಗೋಣಿಕೊಪ್ಪದಲ್ಲಿ ನಗರ ಪ್ರದಕ್ಷಿಣೆ ನಡೆಸಿ ಪಟ್ಟಣದ ಕಸವಿಲೇವಾರಿ ಘಟಕ, ಬಸ್ ನಿಲ್ದಾಣ, ಪಂಚಾಯಿತಿ ಪೌರಕಾರ್ಮಿಕರ ವಸತಿಗೃಹ, ಗುಡಿಸಲುವಾಸಿಗಳ ಮನೆ, ೩ನೇ ವಿಭಾಗದ ಕೀರೆಹೊಳೆ ಸೇತುವೆ ಹಾಗೂ ಇತ್ತೀಚಿಗೆ ಸುರಿದ ಮಳೆಗೆ ಹಾನಿ ಆಗಿರುವ ೬ನೇ ವಿಭಾಗ ರಸ್ತೆಯ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಣೆ ಮಾಡಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಬಾಲು ಸೇರಿದಂತೆ ಇತರ ಪಂಚಾಯಿತಿ ಸದಸ್ಯರಿಂದ ಮಾಹಿತಿ ಪಡೆದರು. ಗೋಣಿಕೊಪ್ಪ ನಗರ ಕಾಂಗ್ರೆಸ್‌ನ ಅಧ್ಯಕ್ಷ ಕೆ.ಎಂ. ಅಜಿತ್ ಅಯ್ಯಪ್ಪ ಮುಂದಾಳತ್ವದಲ್ಲಿ ಹಲವು ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕರು ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಂದ ಸಮಗ್ರ ಮಾಹಿತಿಯನ್ನು ಪಡೆದರು.

ನಗರದ ಹೃದಯ ಭಾಗದಲ್ಲಿ ಸಂಗ್ರಹವಾಗಿರುವ ಬೃಹತ್ ಪ್ರಮಾಣದ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಶಾಸಕ ಪೊನ್ನಣ್ಣ ಕಸ ವಿಲೇವಾರಿಯನ್ನು ಆದ್ಯತೆ ಮೇರೆ ಕೈಗೆತ್ತಿಕೊಂಡು ಸಮಸ್ಯೆ ಪರಿಹರಿಸುವಂತೆ ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಪಿಡಿಓರವರಿಗೆ ನಿರ್ದೇಶನ ನೀಡಿದರು. ಹೃದಯ ಭಾಗದಲ್ಲಿ ಇಂತಹ ಅವ್ಯವಸ್ಥೆ ಮುಂದೆ ನಡೆಯಬಾರದು, ಕಸ ವಿಲೇವಾರಿಗೆ ಸಂಬAಧಿಸಿದAತೆ ತುರ್ತು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪಂಚಾಯಿತಿಯೊAದಿಗೆ ಸಹಕಾರ ನೀಡುವುದಾಗಿ ಪೊನ್ನಣ್ಣ ತಿಳಿಸಿ ಈ ಸಂಬAಧ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗುವುದು. ಈಗಾಗಲೇ ಸಂಗ್ರಹವಾಗಿರುವ ಕಸದ ರಾಶಿಯನ್ನು ತೆರವುಗೊಳಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ದಿನನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಕಸ ಸಂಗ್ರಹಣೆಯಾಗುತ್ತಿದೆ. ಇದನ್ನು ವಿಂಗಡಿಸುವುದು ಕಷ್ಟವಾಗುತ್ತಿದೆ. ಸಾಕಷ್ಟು ಕಸಗಳನ್ನು ಕಳುಹಿಸಿಕೊಡಲಾಗಿದೆ. ಈ ಹಿಂದೆ ಅರುವತ್ತೋಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟು ಬಳಿ ಕಸವಿಲೇವಾರಿಗೆ ಸ್ಥಳ ನಿಗದಿಪಡಿಸಿ ಪಂಚಾಯಿತಿಯಿAದ ೨೦ ಲಕ್ಷ ಅನುದಾನವನ್ನು ಕಸ ಘಟಕಕ್ಕೆ ವಿನಿಯೋಗಿಸಲಾಗಿದೆ. ಪೊನ್ನಂಪೇಟೆ, ಅರುವತ್ತೋಕ್ಕಲು ಪಂಚಾಯಿತಿಗಳು ಅನುದಾನವನ್ನು ವಿನಿಯೋಗಿಸಿದೆ. ನಂತರ ಈ ಘಟಕದಲ್ಲಿ ಕಸವಿಲೇವಾರಿಗೆ ಕೆಲವು ಸಮಸ್ಯೆಗಳು ಎದುರಾದವು. ಈ ಬಗ್ಗೆ ತಾವುಗಳು ಸಂಬAಧಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಹಕಾರ ನೀಡಬೇಕೆಂದು ಕಸ ಘಟಕ ಸ್ಥಳದಲ್ಲಿ ಪಂಚಾಯಿತಿ ಅಧ್ಯಕ್ಷೆ ಸೌಮ್ಯಬಾಲು, ಸದಸ್ಯರಾದ ಶರತ್‌ಕಾಂತ್, ಎಂ. ಮಂಜು¼ ಶಾಸಕರ ಗಮನ ಸೆಳೆದರು.

ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಶಾಸಕರು ಇಲ್ಲಿನ ವ್ಯವಸ್ಥೆಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು. ಈ ವೇಳೆ ಕಾಂಗ್ರೆಸ್ ಪಕ್ಷದ ಮಾಜಿ ನಗರ ಅಧ್ಯಕ್ಷ ಕೆ.ಎಂ. ಅಜಿತ್ ಅಯ್ಯಪ್ಪ, ಉತ್ತಮವಾಗಿದ್ದ ನಗರದ ಬಸ್ ನಿಲ್ದಾಣವನ್ನು ಏಕಾಏಕಿ ಕೆಡವಿ ಏಳೆಂಟು ವರ್ಷಗಳು ಕಳೆದಿವೆ. ಅಲ್ಲಿಂದ ಇಲ್ಲಿಯ ತನಕ ಬಸ್ ತಂಗುದಾಣ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಹೈಟೆಕ್ ಬಸ್ ನಿಲ್ದಾಣದ ಅವಶ್ಯಕತೆ ಇಲ್ಲ.

ಈ ಹಿಂದೆ ಇದ್ದಂತೆಯೇ ಬಸ್ ತಂಗುದಾಣವನ್ನು ನಿರ್ಮಿಸಿದ್ದಲ್ಲಿ ಇಲ್ಲಿಯ ಜನತೆಗೆ ಅನುಕೂಲವಾಗಲಿದೆ. ಮಲ್ಟಿಪ್ಲೆಕ್ಸ್ ರೀತಿಯಲ್ಲಿ ಆಲೋಚನೆ ಮಾಡಿದರೆ ತಂಗುದಾಣ ನಿರ್ಮಾಣ ಮಾಡುವುದು ಕಷ್ಟಸಾಧ್ಯ ಎಂದು ಶಾಸಕರ ಗಮನ ಸೆಳೆದರು. ಈ ವೇಳೆ ಮಾತನಾಡಿದ ಶಾಸಕ ಪೊನ್ನಣ್ಣ ಸರ್ಕಾರದ ವತಿಯಿಂದ ಮಂಜೂರಾಗಿದ್ದ ರೂ. ೧ ಕೋಟಿ ಅನುದಾನ ರದ್ದಾಗಿದೆ. ಈ ಹಣವನ್ನು ಮತ್ತೆ ತರುವ ಪ್ರಯತ್ನವಾಗಬೇಕು. ಅತ್ಯಂತ ದೊಡ್ಡ ಯೋಜನೆ ಬದಲು ಸಣ್ಣ ಯೋಜನೆಗೆ ಸುಸಜ್ಜಿತ ತಂಗುದಾಣ ಮಾಡುವ ಪ್ರಯತ್ನ ಎಲ್ಲರಿಂದಲೂ ಸಲಹೆ ಪಡೆದು ಮಾಡೋಣ ಈ ನಿಟ್ಟಿನಲ್ಲಿ ನಿಲ್ದಾಣದ ವಿಚಾರವಾಗಿ ವಿಶೇಷ ಗ್ರಾಮ ಸಭೆ ಕರೆದು ಚರ್ಚೆ ಮಾಡುವಂತೆ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಲಹೆ ನೀಡಿದರು.

ಬೈಪಾಸ್ ಸಮೀಪವಿರುವ ಮಸೀದಿ ಬಳಿಯಲ್ಲಿ ಹರಿಯುವ ಕೀರೆ ಹೊಳೆಗೆ ಸೇತುವೆ ನಿರ್ಮಾಣ ಮಾಡಿದ್ದಲ್ಲಿ ಬೈಪಾಸ್ ನಿಂದ ತೆರಳುವ ವಾಹನಗಳು ನೇರವಾಗಿ ಮೈಸೂರು ರಸ್ತೆಗೆ ಸಂಪರ್ಕ ಮಾಡಬಹುದು. ಆ ನಿಟ್ಟಿನಲ್ಲಿ ಸೇತುವೆ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಕುಲ್ಲಚಂಡ ಪ್ರಮೋದ್ ಗಣಪತಿ ಶಾಸಕರ ಗಮನ ಸೆಳೆದು ಮಸೀದಿ ಬಳಿ ಇರುವ ಕೀರೆ ಹೊಳೆಯ ಬದಿಗೆ ಕರೆದೊಯ್ದು ಪರಿಶೀಲಿಸಿದರು.

ಮಧ್ಯಾಹ್ನ ೩ ಗಂಟೆಯಿAದ ರಾತ್ರಿ ೭.೩೦ರವರೆಗೆ ಶಾಸಕ ಪೊನ್ನಣ್ಣ ನಗರದ ವಿವಿಧ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದರು. ಶಾಸಕರ ನಗರ ಪ್ರದಕ್ಷಿಣೆ ವೇಳೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು, ನಗರ ಅಧ್ಯಕ್ಷ ಪ್ರಮೋದ್ ಗಣಪತಿ, ಯುವ ಕಾಂಗ್ರೆಸ್ ಅಧ್ಯಕ್ಷ ನಾಮೇರ ಅಂಕಿತ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕೆ.ಎಂ. ಅಜಿತ್ ಅಯ್ಯಪ್ಪ, ಮಳವಂಡ ಅರವಿಂದ್ ಕುಟ್ಟಪ್ಪ, ಮತ್ರಂಡ ದಿಲ್ಲು, ನಾರಾಯಣಸ್ವಾಮಿ ನಾಯ್ಡು, ಶಾಜಿ ಅಚ್ಚುತ್ತನ್, ಅಬ್ದುಲ್ ಸಮ್ಮದ್, ಖಾಲಿದ್, ಶಿವಾಜಿ, ಮಣಿ, ಕುಪ್ಪಂಡ ಗಣಪತಿ, ಶಿವುಕುಮಾರ್, ಪಿ.ಕೆ. ಪ್ರವೀಣ್, ಧನಲಕ್ಷಿö್ಮ, ವರಲಕ್ಷಿö್ಮ, ಧನ್ಯ, ಮಂಜುಳ, ಬೆನ್ನಿ, ಕಾಡ್ಯಮಾಡ ಬೋಪಣ್ಣ, ಮಲ್ಲಂಡ ಪ್ರಕಾಶ್, ಕಾಡ್ಯಮಾಡ ಚೇತನ್, ವಕೀಲ ಶಮೀರ್ ಸೇರಿದಂತೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ಗೋಣಿಕೊಪ್ಪ ವೃತ್ತನಿರೀಕ್ಷಕ ಗೋವಿಂದರಾಜ್, ಠಾಣಾಧಿಕಾರಿ ದೀಕ್ಷಿತ್ ಕುಮಾರ್, ಸೇರಿದಂತೆ ಪ್ರಮುಖರು ಹಾಜರಿದ್ದರು.

ಸಾರ್ವಜನಿಕರ ಅಹವಾಲು : ನಗರದ ಸ್ವಾತಂತ್ರö್ಯ ಹೋಡಿರಾಟಗಾರರ ಭವನದಲ್ಲಿ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎಂ.ಅಜಿತ್ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ ನಾಗರಿಕರ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದರು.

ನಾಗರಿಕರ ಹಲವು ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲಿದ್ದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಕೆ.ಸಿ. ಅಪ್ಪಣ್ಣ, ಪಂಚಾಯಿತಿ ಪಿಡಿಓ ಶ್ರೀನಿವಾಸ್ ಅವರಿಗೆ ನಿರ್ದೇಶನ ನೀಡಿ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದರು. ವಿವಿಧ ಭಾಗದಿಂದ ನೂರಾರು ಸಾರ್ವಜನಿಕರು ಅಹವಾಲು ಸಲ್ಲಿಸಿದರು.

ಪಂಚಾಯಿತಿಯಲ್ಲಿ ಸಭೆ: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಬಾಲು ಅಧ್ಯಕ್ಷತೆಯಲ್ಲಿ ಶಾಸಕರೊಂದಿಗೆ ಸಭೆ ನಡೆಸಿದರು.

ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗೆ ಆಗಮಿಸಿದ ಶಾಸಕ ಎ.ಎಸ್.ಪೊನ್ನಣ್ಣನವರಿಗೆ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಗ್ರಾಮ ಪಂಚಾಯಿತಿಯ ಹಿರಿಯ ಸದಸ್ಯರಾದ ಬಿ.ಎನ್. ಪ್ರಕಾಶ್, ಪಂಚಾಯಿತಿ ಎದುರಿಸುತ್ತಿರುವ ಕಸ ಸಮಸ್ಯೆ ಸೇರಿದಂತೆ ಇನ್ನಿತರ ವಿಷಯಗಳನ್ನು ಶಾಸಕರ ಮುಂದಿಟ್ಟರು. ಗ್ರಾ.ಪಂ.ಅಧ್ಯಕ್ಷರು ಮನವಿ ಸಲ್ಲಿಸಿದರು.

ಸಭೆಯಲ್ಲಿದ್ದ ಗ್ರಾ.ಪಂ. ಸದಸ್ಯ ಚೆಪ್ಪುಡೀರ ಧ್ಯಾನ್, ನಗರದಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಗಮನ ಸೆಳೆದರು. ಸೆಸ್ಕ್ ಅಧಿಕಾರಿಗಳನ್ನು ಸಭೆಗೆ ಕರೆಸಿದ ಶಾಸಕ ಪೊನ್ನಣ್ಣ ಸೂಕ್ತ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಇಂಜಿನಿಯರ್‌ಗೆ ನಿರ್ದೇಶನ ನೀಡಿದರು. ಪಕ್ಷಾತೀತವಾಗಿ ಗ್ರಾಮ ಪಂಚಾಯಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

-ಚಿತ್ರಸುದ್ದಿ ಹೆಚ್.ಕೆ.ಜಗದೀಶ್