ಭಾರತದ ರಾಷ್ಟç ಪ್ರಾಣಿಯಾಗಿ ಮೆರೆಯುತ್ತಿರುವ ಹುಲಿಯ ವೈಜ್ಞಾನಿಕ ಹೆಸರು ಪ್ಯಾಂಥರಾ ಟೈಗ್ರಿಸ್. ಹುಲಿ ಹಿಮಾಲಯದ ತಪ್ಪಲಿನಿಂದ ಹಿಡಿದು ಕನ್ಯಾಕುಮಾರಿಯವರೆಗೆ ಇರುವ ಎಲ್ಲ ಕಾಡುಗಳಲ್ಲಿಯೂ ಜೀವಿಸಬಲ್ಲುದು. ಫೆಲಿಡೇ ಕುಟುಂಬಕ್ಕೆ ಸೇರಿದ ನಾಲ್ಕು ದೊಡ್ಡ ಬೆಕ್ಕುಗಳ ಪೈಕಿ ಹುಲಿಯೇ ಅತ್ಯಂತ ದೊಡ್ಡಪ್ರಾಣಿ. ವ್ಯಾಘ್ರ, ಶ್ವಾಪದ ಚಮೂರ, ಶಾರ್ದುಲ, ದ್ವೀಪಿ, ಹುಲಿ, ಪುಂಡರೀಕ, ಬಗ್ಗ, ಮೃಗಬೇಧನ ಹೀಗೆ ಹಲವು ಹೆಸರುಗಳನ್ನು ಹೊಂದಿರುವ ಹುಲಿಯು ಸುಮಾರು ಎಂಟೂವರೆ ಅಡಿ ಉದ್ದ ಹಾಗೂ ಮೂರೂವರೆ ಅಡಿ ಎತ್ತರದ ಗಾತ್ರವಿರುತ್ತದೆ. ಇದರ ಬಾಲವೇ ಸುಮಾರು ಮೂರು ಅಡಿ ಉದ್ದ ಇರುತ್ತದೆ. ಸುಮಾರು ೧೮೦ ರಿಂದ ೨೩೦ ಕಿಲೋಗ್ರಾಮ್ ತೂಗುವ ಈ ವ್ಯಾಘ್ರಕ್ಕೆ ಬಲವಾದ ಸ್ನಾಯುಗಳಿದ್ದು, ಕಿವಿಯು ಬಹಳ ಚುರುಕಾಗಿರುತ್ತದೆ. ಆದರೆ ಇದರ ದೃಷ್ಟಿಯು ತುಸು ಕಡಿಮೆಯೆಂದೇ ಹೇಳಬಹುದು. ಹುಲಿ ಜಾತಿಗಳ ಪೈಕಿ ಸೈಬೀರಿಯಾ ಹುಲಿ ಅತ್ಯಂತ ದೊಡ್ಡ ಕಾಯವನ್ನು ಹೊಂದಿರುತ್ತದೆ.
ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಹಾಗೂ ಹುಲಿಗಳ ಸಂರಕ್ಷಣೆಗಾಗಿ ಪ್ರತಿವರ್ಷ ಜುಲೈ ತಿಂಗಳ ೨೯ ರಂದು ಜಗತ್ತಿನಾದ್ಯಂತ ವಿಶ್ವ ಹುಲಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಳಿವಿನ ಅಂಚಿನಲ್ಲಿ ಇರುವ ಹುಲಿಗಳ ಸಂರಕ್ಷಣೆಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಈ ವಿಶ್ವ ಹುಲಿ ದಿನದ ಉದ್ದೇಶವಾಗಿದೆ. ಹುಲಿಯ ಸಂಖ್ಯೆಯು ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ವನ್ಯಮೃಗ ರಕ್ಷಣಾ ಯೋಜನೆಗೆ ಆಘಾತವನ್ನು ಮೂಡಿಸಿರುವುದರಿಂದ ಹುಲಿಯ ನಾಶವನ್ನು ತಡೆಯುವುದೇ ವಿಶ್ವ ಹುಲಿ ದಿವಸದ ಮುಖ್ಯ ಉದ್ದೇಶವಾಗಿದೆ.
ಏಷ್ಯಾ ಖಂಡದಲ್ಲಿ ಮಾನವ ಬೇಟೆಯಾಡುವ ಐದು ದೊಡ್ಡ ಪ್ರಾಣಿಗಳಲ್ಲಿ ಹುಲಿಯೂ ಒಂದಾಗಿದೆ. ಈ ಹಿಂದೆ, ರಾಜ ಮಹಾರಾಜರ ಕಾಲದಲ್ಲಿ ಹುಲಿ ಬೇಟೆ ಆಡುವುದು ಪ್ರತಿಷ್ಠೆಯ ಸಂಕೇತವಾಗಿತ್ತು. ಇದರೊಂದಿಗೆ ಹುಲಿಯ ಚರ್ಮವನ್ನು ತಮ್ಮಲ್ಲಿರಿಸಿಕೊಳ್ಳುವುದೂ ಸಮಾಜದಲ್ಲಿ ಇವನು ನಿಜಕ್ಕೂ ಶೂರ ಪುರುಷ ಎನ್ನುವ ಗೌರವವನ್ನು ತಂದುಕೊಡುವ ವಿಷಯವಾಗಿತ್ತು. ಆದರೆ ಹುಲಿಗಳ ಮಾರಣ ಹೋಮವಾಗತೊಡಗಿದಾಗ ಜಗತ್ತಿನ ಎಲ್ಲ ರಾಷ್ಟçಗಳೂ ಎಚ್ಚೆತ್ತುಕೊಂಡು ಹುಲಿಗಳನ್ನು ಕೊಲ್ಲುವುದು ಒಂದು ದೊಡ್ಡ ಅಪರಾಧವೆಂದು ಪರಿಗಣಿಸಿದವು. ಆದರೂ ಕೆಲವು ದುರ್ಗಮ ಪ್ರದೇಶಗಳಲ್ಲಿ ಜನರು ಹುಲಿಗಳನ್ನು ಕೊಲ್ಲುವುದನ್ನು ನಿಲ್ಲಿಸಿಲ್ಲ.
ಮೂಢನಂಬಿಕೆಗಳೊAದಿಗೆ ದುರಾಸೆಯೂ ಮಿಳಿತವಾದಾಗ ಶತಾಯಗತಾಯ ಹುಲಿಯನ್ನು ಹಿಡಿದು ಕೊಲ್ಲಲೇಬೇಕು ಎನ್ನುವ ಭಾವನೆ ಕೆಲವು ದುರ್ಗಮ ಪ್ರದೇಶದ ಆದಿವಾಸಿಗಳಲ್ಲಿ ಬೆಳೆದುಬಂದAತೆ ಕಾಣುತ್ತದೆ. ಹುಲಿಯ ಉಗುರು ಮತ್ತು ಇತರ ಅಂಗಾAಗಗಳನ್ನು ಔಷಧಿಗಳಲ್ಲಿ ಬಳಸುವುದಕ್ಕಾಗಿ ಹುಲಿಯನ್ನು ಕೊಲ್ಲಲಾಗುತ್ತದೆ. ಅಲ್ಲದೆ ಹುಲಿಯ ದೇಹದ ಭಾಗಗಳನ್ನು ಅಲಂಕಾರಿಕವಾಗಿಯೂ ಬಳಸುತ್ತಾರೆ. ಹುಲಿಯ ಬಾಲವನ್ನು ಬೇಯಿಸಿ ತಿನ್ನುವುದರಿಂದ ಗಂಡಸರ ಪೌರುಷವನ್ನು ಹೆಚ್ಚಿಸುತ್ತದೆ ಎನ್ನುವ ಭ್ರಮೆಗೆ ಸಿಕ್ಕಿ ಹುಲಿಗಳ ಸಂತತಿಯನ್ನು ನಾಶದ ಅಂಚಿಗೆ ತಳ್ಳಲಾಗುತ್ತಿದೆ.
ಹುಲಿಗಳು ರಾತ್ರಿಯ ವೇಳೆಗೆ ನಿಶ್ಯಬ್ದವಾಗಿ ಕೊಟ್ಟಿಗೆಯ ಒಳಗೆ ನುಗ್ಗಿ ಕಟ್ಟಿರುವ ಹಸು, ಕರುಗಳನ್ನು ಕೊಂದು ತಿನ್ನುತ್ತಿವೆ. ಆದರೆ ಹುಲಿಗಳು ಎಂದಿಗೂ ಗುಂಪಾಗಿರುವ ಜಾನುವಾರುಗಳ ಮೇಲೆ ಎರಗುವುದಿಲ್ಲ. ಹುಲಿಗಳನ್ನು ಗುಂಡಿಕ್ಕಿ ಕೊಲ್ಲುವುದು ಅಪರಾಧವಾಗುವುದರಿಂದ ಹುಲಿಗಳ ಉಪಟಳ ಹೆಚ್ಚಾದಾಗ ಅಂತಹ ಹುಲಿಗಳನ್ನು ಸೆರೆಹಿಡಿಯಲು ಬೋನನ್ನು ಅರಣ್ಯ ಇಲಾಖೆ ಇರಿಸಿ, ಹಾಗೆ ಸಿಕ್ಕಿಬಿದ್ದ ಹುಲಿಗಳನ್ನು ದೂರದ ಹುಲಿ ರಕ್ಷಣಾ ಅರಣ್ಯದಲ್ಲಿ ಬಿಡುತ್ತಾರೆ.
೧೯೭೩ ರಿಂದ ಪ್ರೊಜೆಕ್ಟ್ ಟೈಗರ್ ಎನ್ನುವ ಯೋಜನೆಯನ್ನು ಕೇಂದ್ರ ಸರಕಾರ ರೂಪಿಸಿದ್ದು ಭಾರತದಲ್ಲಿ ಹುಲಿಗಳಿಗಾಗಿಯೇ ಹದಿನೈದು ಅಭಯಾರಣ್ಯಗಳನ್ನು ಕಾದಿರಿಸಲಾಗಿದೆ. ಕರ್ನಾಟಕದಲ್ಲಿಯೂ ಬಂಡಿಪುರ ಎನ್ನುವ ಅಭಯಾರಣ್ಯವಿದ್ದು ಇಲ್ಲಿ ಹುಲಿಗಳನ್ನು ಸಂರಕ್ಷಿಸಲಾಗುತ್ತದೆ.
ಕೆAಪು, ಕಿತ್ತಳೆ, ಹಳದಿ, ನಸುಕೆಂಪು ದೇಹದ ಮೇಲೆ ಕಪ್ಪುಪಟ್ಟೆಗಳಿರುವ ಹುಲಿಯ ಪಾದವು ಬೆಕ್ಕಿನಂತೆ ಮೃದುವಾಗಿರುತ್ತದೆ. ಆದರೆ ಇದರ ಮೀಸೆಯು ಬಹಳ ಬಿರುಸಾಗಿದ್ದು ನಾಲಗೆಯು ಒರಟಾಗಿರುತ್ತದೆ. ಇದರ ಮೊನಚು ಕೋರೆಹಲ್ಲುಗಳು ಜಿಂಕೆ, ಚಿಗರಿ, ಕಾಡು ಹಂದಿ, ಕಾಡು ಎಮ್ಮೆಗಳನ್ನು ಹಿಡಿದು ಕಚ್ಚಿ ಸಿಗಿದು ತಿನ್ನಲು ಸಹಾಯ ಮಾಡುತ್ತವೆ.
ಅಳಿವಿನಂಚಿನಲ್ಲಿ ಇರುವ ಹುಲಿಗಳನ್ನು ಮನುಷ್ಯ ರಕ್ಷಿಸದೇ ಹೋದಲ್ಲಿ ಮುಂಬರುವ ಪೀಳಿಗೆಗೆ ಹುಲಿಗಳನ್ನು ಕೇವಲ ಚಿತ್ರದಲ್ಲಿ ಮಾತ್ರ ನೋಡಬಹುದಷ್ಟೆ. ಹಾಗಾಗಿ ಹುಲಿಗಳ ರಕ್ಷಣೆ ಎಲ್ಲ ಪೌರರ ಕರ್ತವ್ಯವೂ ಆಗಿರುತ್ತದೆ.
- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು. ಮೊ. ೯೧೪೧೩ ೯೫೪೨೬ ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ
ರಾಷ್ಟಿçÃಯ ಪ್ರಾಣಿ ಹುಲಿ ಸಂರಕ್ಷಣೆ, ಸಾರ್ವಜನಿಕರಲ್ಲಿ ಹುಲಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ೨೦೧೦ರ ಜುಲೈ ೨೯ ರಂದು ಮೊದಲ ಬಾರಿಗೆ ರಷ್ಯಾದ ಸೆಂಟ್ ಪೀಟರ್ ಬರ್ಗ್ನಲ್ಲಿ ಜಾರಿಗೆ ತರಲಾಯಿತು. ಅಳಿವಿನಂಚಿನಲ್ಲಿರುವ ಹುಲಿಯನ್ನು ಸಂರಕ್ಷಿಸಿ ಎಂಬ ಧ್ಯೇಯವಾಕ್ಯದೊಂದಿಗೆ ಆ ದಿನದಂದು ಚರ್ಚೆ, ಉಪನ್ಯಾಸ, ಜಾಥಾ, ವಿಚಾರ ಸಂಕಿರಣ, ಛಾಯಾಚಿತ್ರ ಪ್ರದರ್ಶನಗಳ ಮೂಲಕ ಹುಲಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಲಾದರೆ ಹುಲಿಗಳ ದತ್ತು ಪ್ರಕ್ರಿಯೆಗೆ ಉತ್ತೇಜಿಸಲಾಗುತ್ತಿದೆ.
ಹುಲಿಯನ್ನು ನಾಲ್ಕು ವಿಧಗಳಲ್ಲಿ ಗಣತಿ ಮಾಡಲಾಗುತ್ತಿದ್ದು, ಮೊದಲ ಎರಡು ಹಂತಗಳಲ್ಲಿ ಹುಲಿಯ ಇರುವಿಕೆಯ ಚಿಹ್ನೆ ಹಾಗೂ ಹೆಜ್ಜೆಯಿಂದ ಗುರುತಿಸಿದರೆ, ಮೂರನೇಯದಾಗಿ ಕ್ಯಾಮರಾ ಟ್ರಾಪ್ಗಳ ಮೂಲಕ ನಾಲ್ಕನೇಯದಾಗಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ಕಾರ್ಯ ಮಾಡಲಾಗುತ್ತಿದೆ. ೨೦೦೬, ೨೦೧೦, ೨೦೧೪ ಹಾಗೂ ೨೦೧೮ರಲ್ಲಿ ಹುಲಿ ಗಣತಿ ಮಾಡಲಾಗಿ ದೇಶದಲ್ಲಿ ೨೯೬೭ ಹುಲಿಗಳಿವೆ ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶದಲ್ಲಿ ೫೨೬ ಹುಲಿಗಳಿದ್ದು, ಎರಡನೇ ಸ್ಥಾನದಲ್ಲಿದೆ. ನಾಲ್ಕು ವರ್ಷಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಶೇ. ೩೩ ಹೆಚ್ಚಳವಾಗಿದೆ. ಬಂಡಿಪುರ, ನಾಗರಹೊಳೆ, ಬಿಆರ್ಟಿ, ಭದ್ರಾ, ಕಾಳಿ ಎಂಬ ಪ್ರದೇಶಗಳು ಹುಲಿ ಸಂರಕ್ಷಿತ ಪ್ರದೇಶಗಳಾಗಿವೆ. ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸ್ಥಾಪಿಸಿರುವುದು ಅರಣ್ಯ ಇಲಾಖೆ ಹುಲಿ ಸಂರಕ್ಷಣೆಗೆ ಹೆಚ್ಚಿನ ನಿಗಾವಹಿಸುವುದು ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.
ಅರಣ್ಯದೊಳಗೆ ಹುಲಿಗಳ ಸಂಖ್ಯೆ ಹೆಚ್ಚಿರುವ ಜಾಗದಲ್ಲಿ ಪಕ್ಷಿ, ಕೀಟ, ಕಾಡು ಪ್ರಾಣಿಗಳು ಹೇರಳವಾಗಿರುವ ಮೂಲಕ ಆ ಕಾಡು ಸಮೃದ್ಧಿಯಾಗಿರುತ್ತದೆ ಎನ್ನುತ್ತಾರೆ ವನ್ಯಜೀವಿ ತಜ್ಞರು. ಇಂದು ಮಾನವ-ವನ್ಯಜೀವಿ ಸಂಘರ್ಷ ಅಂತ್ಯವಿಲ್ಲದೆ ನಡೆಯುತ್ತಿದೆ.
ಹುಲಿಗಳ ಸಂಖ್ಯೆ ಹೆಚ್ಚಳದಿಂದ ಗ್ರಾಮಗಳಿಗೆ ದಾಳಿ ಮಾಡಿ ಜಾನುವಾರುಗಳನ್ನು ಕೊಂದು ತಿನ್ನುವುದು, ಮನುಷ್ಯರ ಮೇಲೆ ದಾಳಿ ಮಾಡಿ ಕೊಂದು ಹಾಕುವುದು ಹಲವೆಡೆ ಕಂಡುಬರುತ್ತಿದೆ. ಅವುಗಳಿಗೆ ಪರಿಹಾರ ಕಂಡು ಕೊಳ್ಳುವಲ್ಲಿಯೂ ಸರಕಾರ ಕಾರ್ಯೋನ್ಮುಖವಾಗಬೇಕಿದೆ.
- ಪುತ್ತರಿರ ಕರುಣ್ ಕಾಳಯ್ಯ