ವೀರಾಜಪೇಟೆ, ಜು. ೨೮: ಶತಮಾನ ಪೂರೈಸಿರುವ ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಜಿಲ್ಲೆಯ ಪ್ರತಿಷ್ಠಿತ ಸಹಕಾರ ಬ್ಯಾಂಕ್ ಆಗಿದೆ. ೩,೮೧೩ ಸದಸ್ಯರುಗಳನ್ನು ಹೊಂದಿರುವ ಬ್ಯಾಂಕ್‌ನ ಆಡಳಿತ ಮಂಡಳಿಯ ೧೩ ಸ್ಥಾನಗಳಿಗೆ ನಿರ್ದೇಶಕರ ಆಯ್ಕೆಯಾಗಿ ಮುಂದಿನ ತಾ. ೩೧ ರಂದು ಚುನಾವಣೆ ನಡೆಯಲಿದೆ.

ಕಳೆದ ೧೫ ವರ್ಷಗಳ ಅವಧಿಯಲ್ಲಿ ಇದೇ ಪ್ರಥಮ ಬಾರಿಗೆ ಚುನಾವಣೆ ನಡೆಯುತ್ತಿರುವುದು ವಿಶೇಷ. ೨೦೦೮ರಲ್ಲಿ ಕೊನೆಯದಾಗಿ ಬ್ಯಾಂಕ್‌ನ ಚುನಾವಣೆ ನಡೆದಿತ್ತು. ನಂತರದ ವರ್ಷಗಳಲ್ಲಿ ಅವಿರೋಧ ಆಯ್ಕೆಯಾಗಿ ಆಡಳಿತ ಮಂಡಳಿ ರಚನೆಯಾಗಿತ್ತು.

ಹಿಂದೆAದಿಗಿAತಲೂ ಈ ಬಾರಿಯ ಚುನಾವಣೆ ಇನ್ನಷ್ಟು ಬಿರುಸು ಹಾಗೂ ಪೈಪೋಟಿಯಿಂದ ಕೂಡಿದೆ. ಹಾಲಿ ಅಧ್ಯಕ್ಷ ಕರ್ನಂಡ ರಘು ಸೋಮಯ್ಯ ತಂಡವನ್ನು ಎದುರಿಸಲು ಪಟ್ಟಣ ಪಂಚಾಯ್ತಿ ಚುನಾಯಿತ ಸದಸ್ಯರುಗಳನ್ನು ಒಳಗೊಂಡ ತಂಡ ಕಣದಲ್ಲಿ ಇದೆ.

ಸೋಮಯ್ಯ ತಂಡದಲ್ಲಿ ಸಾಮಾನ್ಯ ವರ್ಗದಿಂದ ಪ್ರಸಕ್ತ ಉಪಾಧ್ಯಕ್ಷ ಕೆ.ಎಂ. ಚರ್ಮಣ್ಣ, ಮಾದಪಂಡ ಪಿ.ಕಾಶಿ ಕಾವೇರಪ್ಪ, ಕೆ.ಡಬ್ಲುö್ಯ. ಬೋಪಯ್ಯ, ಪಾಂಡAಡ ರಚನ್ ಮೇದಪ್ಪ , ಮಾದೆಯಂಡ ಸಂಪಿ ಪೂಣಚ್ಚ, ಮಲ್ಲಂಡ ಮಧು ದೇವಯ್ಯ ಮತ್ತು ಪ್ರಸನ್ನ ಎ.ವಿ., ಮಹಿಳಾ ವರ್ಗದಿಂದ ಐ.ಎಂ. ಕಾವೇರಮ್ಮ, ಸೋಮೆಯಂಡ ಜುಬೀನ ಚಿತ್ರ, ಹಿಂದುಳಿದ ವರ್ಗದಿಂದ ಪಿ.ಕೆ. ಅಬ್ದುಲ್ ರೆಹೆಮಾನ್, ಪರಿಶಿಷ್ಟ ಜಾತಿ ವರ್ಗದಿಂದ ಹೆಚ್.ಸಿ. ಮುತ್ತಮ್ಮ ಮತ್ತು ಕೆ.ಬಿ. ಪ್ರತಾಪ್ ಕಣದಲ್ಲಿದ್ದಾರೆ.

ಇನ್ನೊಂದು ಬಣದ ಸಾಮಾನ್ಯ ವರ್ಗದಿಂದ ಪುರಸಭಾ ಸದಸ್ಯರುಗಳಾದ ಪಟ್ಟಡ ರಂಜಿ ಪೂಣಚ್ಚ, ಡಿ.ಪಿ. ರಾಜೇಶ್, ಸಿ.ಕೆ. ಪೃಥ್ವಿನಾಥ್, ನೆಲ್ಲಮಕ್ಕಡ ಮುತ್ತಣ್ಣ, ನೆಲ್ಲಚಂಡ ಭೀಮಯ್ಯ, ಮೆರ್ವಿನ್ ಲೋಬೋ, ಸಂತೋಷ್‌ಕುಮಾರ್ ಪಿ. ಮಹಿಳಾ ವರ್ಗದಿಂದ ಮನೆಯಪಂಡ ದೇಚಮ್ಮ ಕಾಳಪ್ಪ, ಲಾಲಿ ಸತೀಶ್ ಅಲ್ಲದೆ ಹಿಂದುಳಿದ ವರ್ಗದಿಂದ ಜೋಕಿಮ್ ರಾಡ್ರಿಗಸ್, ರಫೀಕ್ ಕೋಳುಮಂಡ, ಪರಿಶಿಷ್ಟ ಜಾತಿ ವರ್ಗದಿಂದ ಮಹಾದೇವ ಹೆಚ್.ಎಂ, ಕಣದಲ್ಲಿದ್ದಾರೆ.