ಕೂಡಿಗೆ, ಜು. ೨೯: ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಿ.ಟಿ. ಶೋಭಾ, ಉಪಾಧ್ಯಕ್ಷರಾಗಿ ಎ.ಜಿ. ರೂಪ ಆಯ್ಕೆಯಾಗಿದ್ದಾರೆ.

ಬಿಸಿಎಂಎಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶೋಭಾ, ಕಾಂಗ್ರೆಸ್ ಮಹದೇವ ಸ್ಪರ್ಧಿಸಿದ್ದರು. ೧೦ ಮಂದಿಯ ಆಡಳಿತ ಮಂಡಳಿ ಸದಸ್ಯರ ಪೈಕಿ ಶೋಭಾ ಅವರಿಗೆ ೬ ಮತ, ಮಹದೇವ್ ಅವರಿಗೆ ೪ ಮತಗಳು ಲಭಿಸಿದವು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಎ.ಜಿ. ರೂಪಾ, ಕಾಂಗ್ರೆಸ್ ಬೆಂಬಲಿತ ಸಾವಿತ್ರಿ ಸ್ಪರ್ಧಿಸಿದ್ದರು. ಈ ಪೈಕಿ ರೂಪಾ ಅವರಿಗೆ ೭ ಮತ, ಸಾವಿತ್ರಿ ಅವರಿಗೆ ೩ ಮತಗಳು ಲಭಿಸಿವೆ. ಚುನಾವಣಾಧಿಕಾರಿಯಾಗಿ ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಕಾರ್ಯನಿರ್ವಹಿಸಿದರು.

ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ಕುಮಾರಪ್ಪ, ಹೆಚ್.ಬಿ. ಚಂದ್ರಪ್ಪ, ತೊರೆನೂರು ಮಹೇಶ್, ಟಿ.ಕೆ. ಪಾಂಡುರAಗ, ರವಿಚಂದ್ರ, ಅಣ್ಣಯ್ಯ, ಟಿ.ಟಿ. ಸಂತೋಷ್, ಟಿ.ಕೆ. ವಿಶ್ವೇಶ್ವರಯ್ಯ, ವಿ.ಟಿ. ದೇವರಾಜ್, ಅರ್ಜುನ, ಥಾಮಸ್, ಎ.ಕೆ. ಸುಂದರ್, ಎ.ಕೆ. ದಿನೇಶ್, ಶಿವಪ್ಪ, ಮತ್ತಿತರರು ಇದ್ದರು.