ಮಡಿಕೇರಿ, ಜು. ೨೮ : ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ.ಎಸ್. ನಾಗೇಶ್ ಅವರನ್ನು ನಿಯುಕ್ತಿಗೊಳಿಸಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಆದೇಶಿಸಿದ್ದಾರೆ.

ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೆ.ಎಸ್. ಮೂರ್ತಿ ಅವರಿಂದ ತೆರವಾದ ಸ್ಥಾನಕ್ಕೆ ಕೆ.ಎಸ್. ನಾಗೇಶ್ ಅವರನ್ನು ನೇಮಿಸಿದ್ದು ತಾಲೂಕು ಕಾರ್ಯಕಾರಿ ಮಂಡಳಿಯನ್ನು ಸಹ ನೂತನವಾಗಿ ರಚಿಸಿ ಆದೇಶಿಸಲಾಗಿದೆ. ಗೌರವ ಕಾರ್ಯದರ್ಶಿಗಳಾಗಿ ಎಸ್. ನಾಗರಾಜ್ ಮತ್ತು ಟಿ.ವಿ ಶೈಲಾ, ಗೌರವ ಕೋಶಾಧಿಕಾರಿಗಳಾಗಿ ಕೆ.ವಿ. ಉಮೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ಬಿ. ದೇವಿಪ್ರಸಾದ್ ಮತ್ತು ರತ್ನಾವತಿ ಸೂದನ ಅವರನ್ನು ನೇಮಿಸಲಾಗಿದೆ.

ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಪಿ.ಎಫ್. ಸಬಾಸ್ಟಿನ್, ಶಿರಂಗಾಲ ಹೋಬಳಿ ಅಧ್ಯಕ್ಷ ಎಂ.ಎನ್. ಮೂರ್ತಿ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿರುತ್ತಾರೆ.

ಅಲ್ಲದೆ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ವಿ.ಪಿ ಶಶಿಧರ್, ಮಹಿಳಾ ಪ್ರತಿನಿಧಿಗಳಾಗಿ ಸಾವಿತ್ರಿ ಬಿ.ಬಿ. ಮತ್ತು ಕುಮಾರಿ ಫಿಲೋಮಿನಾ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಹೆಚ್.ಎಂ ವೆಂಕಟೇಶ್, ಗೀತಾ ಬಸಪ್ಪ, ಪರಿಶಿಷ್ಟ ಪಂಗಡ ಪ್ರತಿನಿಧಿಯಾಗಿ ಪರಮೇಶ್ವರ್ ವೈ.ಟಿ., ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಪರಮೇಶ್ ಬಿ.ಎಸ್. ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಜಂಷಿರ್ ಅಹ್ಮದ್ ಖಾನ್, ಪದನಿಮಿತ್ತ ಸದಸ್ಯರುಗಳಾಗಿ ತಾಲೂಕು ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಉಪವಿಭಾಗದ ಸಹಕಾರ ಸಂಘದ ಸಹಾಯಕ ನಿಬಂಧಕರು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು, ಕೊಡಗು ವಿಶ್ವವಿದ್ಯಾಲಯದ ರಿಜಿಸ್ಟಾರ್ ಸೀನಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ರೋಹಿತ್, ಸೋಮವಾರಪೇಟೆ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಧನಲಕ್ಷಿö್ಮ, ಸೋಮವಾರಪೇಟೆ ತಾಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಜಾನಕಿ ಅವರನ್ನು ನೇಮಿಸಲಾಗಿದೆ.

ಗೌರವ ಸಲಹೆಗಾರರುಗಳಾಗಿ ಎಂ.ಎನ್. ಕಾಳಪ್ಪ, ಟಿ.ಕೆ. ಬಸವರಾಜ್, ಎಚ್.ಬಿ. ಲಿಂಗಮೂರ್ತಿ, ಹೇಮಲತಾ ಬಿ.ಬಿ., ಹರೀಶ್ ಗುಡ್ಡೆಮನೆ, ಲೀಲಾವತಿ ತೊಡಿಕಾನ, ಬಿ.ಸಿ. ಶಂಕರಯ್ಯ, ಮಾಲಾಮೂರ್ತಿ ಮತ್ತು ವಿಶೇಷ ಆಹ್ವಾನಿತರಾಗಿ ಕೆ.ಎಸ್. ರತೀಶ್,, ಎನ್.ಕೆ. ಮೋಹನ್, ಡಿ.ವಿ. ರಾಜೇಶ್, ಟಿ.ಬಿ. ಮಂಜುನಾಥ್, ಬಿ.ಎನ್. ಪುಷ್ಪ, ಕೆ.ವಿ. ಶ್ರೀನಿವಾಸ್, ಕೆ.ಕೆ. ಹೇಮಂತ್ ಕುಮಾರ್, ವಸಂತ್ ಕುಮಾರ್ ಹೊಸಮನೆ, ಬಿ.ಸಿ. ದಿನೇಶ್, ಹಾ.ತಿ. ಜಯಪ್ರಕಾಶ್, ಕೆ. ಪ್ರಕಾಶ್ ಅವರನ್ನು ಆಯ್ಕೆಗೊಳಿಸಿದ್ದಾರೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ. ರೇವತಿ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ.