ಕುಶಾಲನಗರ, ಜು. ೨೮: ಕುಶಾಲನಗರ ಪಟ್ಟಣ ಮತ್ತು ಹೆದ್ದಾರಿಯಲ್ಲಿ ಸಾಗುವ ಕೆಲವು ದ್ವಿಚಕ್ರ ವಾಹನಗಳನ್ನು ತಮಗಿಷ್ಟ ಬಂದAತೆ ಸೈಲೆನ್ಸರ್ಗಳನ್ನು ಬದಲಾಯಿಸಿ ಕೊಂಡು ಕರ್ಕಶ ಶಬ್ದದೊಂದಿಗೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಬೈಕ್ಗಳನ್ನು ಕುಶಾಲನಗರ ಸಂಚಾರಿ ಪೊಲೀಸರು ವಶಪಡಿಸಿ ಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಕೆಲವು ಯುವಕರು ಬೈಕ್ಗಳನ್ನು ವೇಗವಾಗಿ ಓಡಿಸಿಕೊಂಡು ಮಿತಿಮೀರಿ ಶಬ್ದ ಮಾಡುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಡಿವೈಎಸ್ಪಿ ಗಂಗಾಧರಪ್ಪ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರ ಮಾರ್ಗದರ್ಶನದಲ್ಲಿ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕಾಶಿನಾಥ್ ಬಗಲಿ ಮತ್ತು ಪೊಲೀಸರು ಕೆಲವು ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ