ನಾಪೋಕ್ಲು, ಜು. ೨೭: ಸಮೀಪದ ಮರಂದೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೊಡ್ಡ ಗಾತ್ರದ ಮರವೊಂದು ಮುರಿದು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು.
ಬೆಂಗಳೂರಿನಿAದ ವೀರಾಜಪೇಟೆ ಮೂಲಕ ನಾಪೋಕ್ಲಿಗೆ ಬರುತ್ತಿದ್ದ ಸರ್ಕಾರಿ ಬಸ್ ಬೆಳಗ್ಗಿನ ನಾಲ್ಕು ಗಂಟೆಯ ವೇಳೆಗೆ ಸಂಚಾರ ಸಾಧ್ಯವಾಗದೆ ನಿಲುಗಡೆಗೊಂಡಿದ್ದ ಸಂದರ್ಭ ಸ್ಥಳೀಯರಾದ ಗ್ರಾಮ ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್ ಸ್ಥಳಕ್ಕೆ ಆಗಮಿಸಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ರಸ್ತೆಯಂಚಿಗೆ ಸರಿಯುತ್ತಿದ್ದ ಬಸ್ ಅನ್ನು ಹರೀಶ್ ಹಾಗೂ ಸಾರ್ವಜನಿಕರ ನೆರವಿನಿಂದ ಮೇಲೆ ಎತ್ತಲಾಯಿತು. ಬಸ್ಸಿನಲ್ಲಿ ೩೦ಕ್ಕೂ ಅಧಿಕ ಪ್ರಯಾಣಿಕರಿದ್ದರು.