ಚೆಯ್ಯAಡಾಣೆ, ಜು. ೨೭: ಸ್ಥಳೀಯ ನರಿಯಂದಡ ಗ್ರಾಮದ ತೋಟಗಳಲ್ಲಿ ಆರು ಕಾಡಾನೆಗಳ ಹಿಂಡು ಸುಖನಿದ್ರೆಯಲ್ಲಿದ್ದು ಮತ್ತೊಂದೆಡೆ ಮೂರು ಕಾಡಾನೆಗಳ ಹಿಂಡು ಅಂಗಳದಿAದ ತೆರಳುತ್ತಿರುವ ದೃಶ್ಯಾವಳಿಗಳು ಆತಂಕಕ್ಕೆ ಕಾರಣವಾಗಿದೆ.

ಸ್ಥಳೀಯ ಪೊಕ್ಕುಳಂಡ್ರ, ಕುರಿಕಡೆ, ತೋಟಂಬೈಲು ಕುಟುಂಬಸ್ಥರ ತೋಟಗಳಿಗೆ ಲಗ್ಗೆ ಇಟ್ಟು ಅಪಾರ ಪ್ರಮಾಣದಲ್ಲಿ ಹಾನಿಪಡಿಸಿದ್ದು ಕಾಫಿ, ಬಾಳೆ, ಅಡಿಕೆ ತೆಂಗು, ಒಳ್ಳೆಮೆಣಸು ಗಿಡ ಹಾಗೂ ಗದ್ದೆಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಹಾನಿಪಡಿಸಿದೆ. ಕುರಿಕಡೆ ಅಹ್ಮದ್ ರವರ ತೋಟದ ಸಮೀಪದಲ್ಲಿ ೬ ಕಾಡಾನೆಯ ಹಿಂಡು ನಿದ್ರಿಸುತ್ತಿರುವ ದೃಶ್ಯ ಕಂಡು ಬಂದಿದೆ.

ನರಿಯAದಡ ಪೈಸಾರಿಯಲ್ಲಿ ಮೂರು ಕಾಡಾನೆಗಳು ಸುಬ್ಬಮ್ಮನವರ ಮನೆಯ ಅಂಗಳಕ್ಕೆ ಘೀಳಿಡುತ್ತಾ ಆಗಮಿಸಿ ತೆರಳುತ್ತಿರುವ ವೀಡಿಯೋ ಕೂಡ ವೈರಲ್ ಆಗುತ್ತಿದೆ. ಚೇಲಾವರದಲ್ಲಿ ಬೀಡುಬಿಟ್ಟ ಏಳು ಕಾಡಾನೆಗಳನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಹಿಚುಬೆಟ್ಟಕ್ಕೆ ಓಡಿಸಲಾಯಿತು. ಕೂಡಲೇ ಅರಣ್ಯ ಇಲಾಖೆ ಕಾಡಾನೆ ಕಾರ್ಯಚರಣೆ ಮಾಡಿ ಕಾಡಾನೆಗಳನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಅರಣ್ಯಾಧಿಕಾರಿ ಆರ್‌ಎಫ್‌ಓ ಕಳ್ಳಿರ ದೇವಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಓ ಆನಂದ್, ಕ್ಯಾಂಪ್ ಸಿಬ್ಬಂದಿಗಳು, ವೀರಾಜಪೇಟೆ ಆರ್‌ಆರ್‌ಟಿ ತಂಡದವರು ಹಾಜರಿದ್ದರು.