ಮಡಿಕೇರಿ, ಜು. ೨೭: ಶಿಕ್ಷಣ ಸಚಿವಾಲಯ ಮತ್ತು ಕೇಂದ್ರೀಯ ವಿದ್ಯಾಲಯ ಸಂಘಟನೆ, ನವದೆಹಲಿಯಿಂದ ಸ್ವೀಕರಿಸಿದ ಆದೇಶದ ಪ್ರಕಾರ, ಕೇಂದ್ರೀಯ ವಿದ್ಯಾಲಯ ಕೊಡಗು ಎನ್‌ಇಪಿ ೨೦೨೦ರ ೩ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎನ್‌ಇಪಿ ೨೦೨೦ ಉಪಕ್ರಮಗಳು, ಉತ್ತಮ ಅಭ್ಯಾಸಗಳನ್ನು ಎನ್‌ಇಪಿ (ಹೊಸ ಶಿಕ್ಷಣ ನೀತಿ) ೨೦೨೦ ಅನುಷ್ಠಾನದ ಸಾಧನೆಗಳನ್ನು ಪ್ರಸಾರ ಮಾಡಲು ಕೊಡಗು ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ತಾ. ೨೮ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಮಾಹಿತಿ ಕಾರ್ಯಕ್ರಮ ನಡೆಯಲಿದೆ.