ಸೋಮವಾರಪೇಟೆ, ಜು. ೨೭: ಪಟ್ಟಣದ ಕಕ್ಕೆಹೊಳೆ ಜಂಕ್ಷನ್ನಲ್ಲಿರುವ ಹಳೆಯದಾದ ಸೇತುವೆಯ ತಳಭಾಗ ಕುಸಿಯುತ್ತಿದ್ದು, ಆತಂಕ ಎದುರಾಗಿದೆ.
ಮಡಿಕೇರಿ-ಕುಶಾಲನಗರ ಭಾಗ ದಿಂದ ಆಗಮಿಸುವ, ಶಾಂತಳ್ಳಿ-ಕೊಡ್ಲಿ ಪೇಟೆಯಿಂದ ತೆರಳುವ, ಹಾನಗಲ್ಲು-ಸೋಮವಾರಪೇಟೆ ಪಟ್ಟಣ ಸಂಪರ್ಕಿಸುವ ಜಂಕ್ಷನ್ನಲ್ಲಿರುವ ಹಳೆಯ ಸೇತುವೆಯ ತಳಭಾಗದಲ್ಲಿ ಇಟ್ಟಿಗೆಗಳು ಕುಸಿದು ಕಕ್ಕೆಹೊಳೆಯ ಪಾಲಾಗಿವೆ.
ಸೇತುವೆಯ ತಳಭಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಇದನ್ನು ನಿರ್ಲಕ್ಷಿö್ಯಸಿದ ಲೋಕೋಪಯೋಗಿ ಇಲಾಖೆಯ ಅನಾದರದಿಂದಾಗಿ ಇದೀಗ ಸೇತುವೆಗೆ ಕಂಟಕ ಎದು ರಾಗಿದೆ. ಗಿಡಗಂಟಿಗಳು ಮರಗಳಾಗಿ ಬೆಳೆಯುವ ಹಂಬಲದಲ್ಲಿ ಸೇತುವೆಯ ಇಟ್ಟಿಗೆಗಳನ್ನು ಹೊಳೆಗೆ ಸೇರಿಸಿವೆ.
ದಿನಂಪ್ರತಿ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಇಲಾಖೆಯ ಅಧಿಕಾರಿಗಳು,ಅಭಿ ಯಂತರರು ಇದೇ ಸೇತುವೆಯ ಮೇಲೆ ತೆರಳುತ್ತಿದ್ದರೂ ಕನಿಷ್ಟ ಪಕ್ಷ ಸೇತುವೆಯ ದುಸ್ಥಿತಿಯತ್ತ ಕಣ್ಹಾಯಿಸಿಲ್ಲ.
ಅನೇಕ ದಶಕಗಳ ಹಿಂದೆ ನಿರ್ಮಾಣವಾಗಿರುವ ಸೇತುವೆಯ ಎರಡೂ ಬದಿಗಳಲ್ಲಿ ಗಿಡಗಂಟಿಗಳು ಬೆಳೆದು ಕಾಡಿನಂತಾಗಿದ್ದರೂ ಅಧಿಕಾರಿ/ಅಭಿಯಂತರರ ಕಣ್ಣಿಗೆ ಕಾಣಿಸದಿರುವುದು ವಿಪರ್ಯಾಸ. ಇದರೊಂದಿಗೆ ನಿರೀಕ್ಷಣಾ ಮಂದಿರಕ್ಕೆ ತೆರಳುವ ಗಣ್ಯಾತಿಗಣ್ಯ ರಾಜಕೀಯ ವ್ಯಕ್ತಿಗಳು ಇದೇ ಸೇತುವೆಯ ಮೇಲೆ ವಾಹನದಲ್ಲಿ ತೆರಳುತ್ತಿದ್ದರೂ, ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿಲ್ಲ.
ಈ ಸೇತುವೆಯ ಮೇಲೆ ದಿನಂ ಪ್ರತಿ ಸಾವಿರಾರು ವಾಹನಗಳು ಓಡಾ ಡುತ್ತಿದೆ. ಇದರೊಂದಿಗೆ ಭಾರೀ ಸರಕು ಸಾಗಾಣಿಕೆ ವಾಹನಗಳು, ಟಿಂಬರ್ ಲಾರಿಗಳೂ ಸಂಚರಿಸುತ್ತಿದ್ದು, ಅತೀ ಭಾರಕ್ಕೆ ಒಮ್ಮೆಲೆ ಸೇತುವೆ ಕುಸಿದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.
ಈ ಸೇತುವೆಯು ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ, ಜ್ಞಾನವಿಕಾಸ, ಓಎಲ್ವಿ ಆಂಗ್ಲಮಾಧ್ಯಮ ಶಾಲೆ, ಸಂತ ಜೋಸೆಫರ ಪ್ರೌಢಶಾಲೆ, ಪದವಿ-ಪದವಿಪೂರ್ವ ಕಾಲೇಜುಗಳಿಗೆ ತೆರಳುವ ಸಾವಿರಾರು ವಿದ್ಯಾರ್ಥಿಗಳಿಗೆ ಸಂಪರ್ಕ ಸೇತುವಾಗಿದೆ. ಈ ವಿದ್ಯಾಸಂಸ್ಥೆಗಳ ಹತ್ತಾರು ವಾಹನಗಳು ಇದೇ ಸೇತುವೆಯ ಮೂಲಕ ತೆರಳುತ್ತಿವೆ.
ತಕ್ಷಣ ಸಂಬAಧಿಸಿದ ಲೋಕೋ ಪಯೋಗಿ ಇಲಾಖೆ ಇತ್ತ ಗಮನ ಹರಿಸಬೇಕಿದೆ. ಮಳೆಗಾಲವಾದ್ದ ರಿಂದ ತುರ್ತು ಕೈಗೊಳ್ಳಬೇಕಾದ ನಿರ್ವಹಣಾ ಕೆಲಸಗಳನ್ನು ಆದ್ಯತೆಯ ಮೇಲೆ ನಿರ್ವಹಿಸಬೇಕಿದೆ.
- ವಿಜಯ್ ಹಾನಗಲ್