೨೧೫ ಲಕ್ಷ ಕೋಟಿ ಕೆ.ಜಿ.-ಅಧ್ಯಯನವೊಂದರ ಪ್ರಕಾರ ಇದು ೧೯೯೩ನೇ ಇಸವಿಯಿಂದ ೨೦೧೦ರವರೆಗೆ ಭೂಮಿಯಿಂದ ಹೊರತೆಗೆಯಲ್ಪಟ್ಟ ಅಂತರ್ಜಲದ ತೂಕದ ಅಂಶ. ಇಷ್ಟೊಂದು ನೀರನ್ನು ಒಮ್ಮೆಲೆ ಭೂಮಿಯ ಸಾಗರಗಳಿಗೆ ಚೆಲ್ಲಿದರೆ, ಸಮುದ್ರ ಮಟ್ಟವು ೦.೨೪ ಇಂಚುಗಳಷ್ಟು ಏರಿಕೆ ಕಾಣಲಿದೆ..!

ದಿನ ಬಳಕೆಗೆ, ವಾಣಿಜ್ಯ ಉದ್ದೇಶಕ್ಕೆ ಬಾವಿ, ಬೋರ್‌ವೆಲ್‌ಗಳ ಮೂಲಕ ಅಂತರ್ಜಲ ಹೊರತೆಗೆಯುವ ಕಾರ್ಯ ಭೂಮಿಯ ತಿರುಗುವಿಕೆಯನ್ನೇ ಬದಲಾಯಿಸುವಷ್ಟು ಪರಿಣಾಮ ಬೀರಲಿದೆ ಎಂಬುದು ಅಚ್ಚರಿಯ ಸಂಗತಿಯಾದರೂ ನಿಜ.

ಈ ವಿಷಯ ಗ್ರಹಿಸಲು ಸ್ವಲ್ಪ ಕಷ್ಟವಾಗಬಹುದು. ಸುಲಭವಾಗಿ ಅರ್ಥವಾಗಬೇಕಾದರೆ ದಿನನಿತ್ಯ ಕಾಣುವ, ಬಳಸುವ ವಸ್ತುವಿನ ಉದಾಹರಣೆ ಗಮನಿಸುವುದು ಅಗತ್ಯ. ಇಲ್ಲಿ ಭೂಮಿಯನ್ನು ಬುಗುರಿಗೆ ಹೋಲಿಸಬಹುದು. ತಿರುಗುವ ಬುಗುರಿಯನ್ನು ಮೇಲಿನಿಂದ ಗಮನಿಸಿದರೆ, ನಿಖರವಾಗಿ ಅದು ಅದರ ಮಧ್ಯ ಭಾಗದ, ನೆಲಕ್ಕೆ ಸಮಕೋನವಿರುವ (ಠಿeಡಿಠಿeಟಿಜiಛಿuಟಚಿಡಿ) ಕಾಲ್ಪನಿಕ ಗೆರೆಯ ಸುತ್ತ ತಿರುಗುತ್ತದೆ. ಒಂದು ವೇಳೆ ಈ ಬುಗುರಿಯ ಯಾವುದಾದರೊಂದು ಕಡೆ ಏನಾದರೊಂದು ಸಣ್ಣ ವಸ್ತುವನ್ನು ಇರಿಸಿದರೆ, ಬುಗುರಿಯ ತಿರುಗುವಿಕೆಯಲ್ಲಿ ಅಸ್ಥಿರತೆ ಕಾಣಬಹುದು. ಬುಗುರಿಯ ಮೇಲಿರಿಸಿರುವ ವಸ್ತುವಿನ ಸ್ಥಳ-ತೂಕಕ್ಕೆ ಅನುಸಾರವಾಗಿ ಕಾಲ್ಪನಿಕ ಗೆರೆಯು, ಅದರ ಸ್ಥಳವನ್ನು ಬುಗುರಿಯ ಮಧ್ಯಭಾಗದಿಂದ ಇತರೆಡೆಗೆ ಬದಲಿಸುವ ಮೂಲಕ ಬುಗುರಿಯ ತಿರುಗುವಿಕೆಯಲ್ಲಿ ಅಸ್ಥಿರತೆ ಹೆಚ್ಚಿಸುತ್ತದೆ.

ಇಲ್ಲಿ ಬುಗುರಿಯನ್ನು ಭೂಮಿಗೆ ಹೋಲಿಸಲಾಗಿದ್ದು, ಬುಗುರಿಯ ಮೇಲಿರಿಸಿರುವ ವಸ್ತುವನ್ನು ಅಂತರ್ಜಲದ ನೀರಿಗೆ ಹೋಲಿಸಬಹುದು. ಭೂಮಿಯ ಒಳಗಿನ ಅಂತರ್ಜಲದ ನೀರನ್ನು ದಿನಬಳಕೆ, ಕೃಷಿ ಇತ್ಯಾದಿಗಳಿಗೆ ಬಳಿಸಿದ ಬಳಿಕ ಅದು ಮತ್ತೆ ಭೂಮಿಯನ್ನು ಪೂರ್ಣ ಪ್ರಮಾಣದಲ್ಲಿ ಸೇರುವುದಿಲ್ಲ. ಇದರಲ್ಲಿ ಬಹುತೇಕ ನೀರು ಸಮುದ್ರ ಸೇರುತ್ತದೆ. ಒಂದು ಕಡೆ ಇದ್ದ ನೀರನ್ನು ಅಥವಾ ತೂಕವನ್ನು ಮತ್ತೊಂದೆಡೆಗೆ, ಅಂದರೆ ಸಮುದ್ರಕ್ಕೆ ಸ್ಥಳಾಂತರಿಸಿದರೆ, ಭೂಮಿಯ ತೂಕ ಹರಡುವಿಕೆಯಲ್ಲಿ ವ್ಯತ್ಯಾಸವಾಗಿ ತಿರುಗುವಿಕೆಯ ಮೇಲೆ ಬುಗುರಿಯ ರೀತಿಯಲ್ಲಿಯೇ ಪರಿಣಾಮ ಬೀರಲಿದೆ. ಸಣ್ಣ ಪ್ರಮಾಣದಲ್ಲಿ ತೂಕ ವ್ಯಾತ್ಯಾಸಗಳಾದಲ್ಲಿ ಭೂಮಿಯ ತಿರುಗುವಿಕೆಯ ಮೇಲೆ ಹೆಚ್ಚಾಗಿ ಪರಿಣಾಮ ಬೀರುವುದಿಲ್ಲ ವಾದರೂ ಅಧ್ಯಯನ ಪ್ರಕಾರ ೨ ದಶಕಗಳಲ್ಲಿ (೧೯೯೩-೨೦೧೦ರವರೆಗೆ) ೨೧೫ ಲಕ್ಷ ಕೋಟಿ ಕೆ.ಜಿ.ಯಷ್ಟು ನೀರು ಸ್ಥಳಾಂತರಗೊAಡ ಕಾರಣ ಇದು ಭೂಮಿಯ ತಿರುಗುವಿಕೆಯ ಮೇಲೆ ಅಲ್ಪವಾಗಿ ಪರಿಣಾಮವಾಗಿದೆ. ನೀರಿನ ಸ್ಥಳಾಂತರದಿAದಾಗಿ ಭೂಮಿಯ ಅಕ್ಷರೇಖೆಯು (ಚಿxis) ಪೂರ್ವದ ರೇಖಾಂಶ ೬೪.೧೬ ಡಿಗ್ರಿಯೆಡೆಗೆ ೩೧ ಇಂಚಿನಷ್ಟು ಸರಿದಿರುವುದು ಖಾತ್ರಿಗೊಂಡಿದೆ. ಅಂದರೆ ನಾವು ಪ್ರಸ್ತುತ ಗುರುತಿಸಿರುವ ಭೂಮಿಯ ಉತ್ತರ ಹಾಗೂ ದಕ್ಷಿಣ ಧ್ರುವಗಳು (ಓoಡಿಣh & Souಣh ಠಿoಟes) ೩೧ ಇಂಚು ಸರಿದಿವೆ.

ಮಾನವ ನಿರ್ಮಿತ ಬದಲಾವಣೆಯಲ್ಲಿ ಅಂತರ್ಜಲ

ಸ್ಥಳಾಂತರದ ಪಾತ್ರವೆ ಅತಿ ಹೆಚ್ಚು

ಬೃಹದಾಕಾರದ ಭೂಮಿಯು ನೋಡಲು ಸ್ಥಿರವಾಗಿದ್ದರೂ, ಉತ್ತರ-ದಕ್ಷಿಣ ಧ್ರುವಗಳನ್ನು ಹೊಂದಿರುವ ಅದರ ಅಕ್ಷರೇಖೆಯು (ಚಿxis oಜಿ ಡಿoಣಚಿಣioಟಿ) ಭೂಮಿಯ ಪದರಕ್ಕೆ ಸಂಬAಧಿಸಿದAತೆ ಮಾನವನ ಹಸ್ತಕ್ಷೇಪ ವಿಲ್ಲದೆಯೇ ಸ್ಥಳಾಂತರಗೊಳ್ಳುತ್ತಿರುತ್ತದೆ. ೧೯೦೦ನೇ ಇಸವಿಯಿಂದ ಇದುವರೆಗೆ ಸುಮಾರು ೨೦ ಮೀಟರ್‌ನಷ್ಟು ದೂರಕ್ಕೆ ಅಕ್ಷರೇಖೆಯು ಸರಿದು ತಿರುಗುವಿಕೆಯ ಮೇಲೆ ಪರಿಣಾಮ ಬೀರಿರುವ ಅಂಶ ಅಧ್ಯಯನವೊಂದರ ಮೂಲಕ ಬಯಲಿಗೆ ಬಂದಿದೆ. ಭೂಮಿಯ ಒಳಪದರಗಳಲ್ಲಿರುವ ‘ಮ್ಯಾಂಟಲ್’ ಹಾಗೂ ‘ಕೋರ್’ಗಳಲ್ಲಿನ ನೈಸರ್ಗಿಕ ಚಲನವಲನದಿಂದಾಗಿ ಅಕ್ಷರೇಖೆಯು ಇತರೆಡೆಗೆ ಸರಿದು ಭೂಮಿಯ ತಿರುಗುವಿಕೆಯಲ್ಲಿ ಬದಲಾವಣೆಯಾಗುತ್ತದೆ. ಇದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಇಲ್ಲಿ ಮಾನವನ ಹಸ್ತಕ್ಷೇಪವಿರುವುದಿಲ್ಲ. ಮಾನವನ ಹಸ್ತಕ್ಷೇಪದಿಂದ ತಿರುಗುವಿಕೆ ಬದಲಾವಣೆಯಾಗುವುದಕ್ಕೆ ಬೇರೆ ಉದಾಹರಣೆಗಳಿವೆ.

ಜಾಗತಿಕ ತಾಪಮಾನ ಏರಿಕೆಯು, ಮಾನವನು ಭುವಿಯ ಮೇಲೆ ಕೈಗೊಂಡಿರುವ ಪರಿಸರ ಮಾರಕ ಕಾರ್ಯಗಳ ನೇರ ಫಲಿತಾಂಶವೆನ್ನಬಹುದು. ಅತಿಯಾದ ತಾಪಮಾನ ಏರಿಕೆಯಿಂದಾಗಿ ಭುವಿಯ ಉತ್ತರ-ದಕ್ಷಿಣ ಧ್ರುವಗಳ ಲ್ಲಿನ ಹಿಮಗಡ್ಡೆಗಳು ಗಣನೀಯ ಪ್ರಮಾಣದಲ್ಲಿ ಕರಗಲು ಪ್ರಾರಂಭಿಸಿವೆ. ಕರಗಿ ನೀರಾದ ಬಳಿಕ ನೇರವಾಗಿ ಸಮುದ್ರಕ್ಕೆ ಸೇರುವ ನೀರು ಸಮುದ್ರ ಮಟ್ಟ ಏರಲು ಕಾರಣವಾಗುತ್ತದೆ. ಈ ಪ್ರಕರಣದಲ್ಲಿ ಕೂಡ ಒಂದು ಕಡೆಯಿಂದ ಮತ್ತೊಂದೆಡೆಗೆ ನೀರು ಸ್ಥಳಾಂತಗೊAಡಾಗ ತೂಕ ಹರಡುವಿಕೆಯಲ್ಲಿ ಬದಲಾವಣೆಯಾಗಿ ಭೂಮಿಯ ತಿರುಗುವಿಕೆಯ ಮೇಲೆ ಪರಿಣಾಮವಾಗಲಿದೆ. ಇದು ಕೇವಲ ಅಲ್ಪ ಪ್ರಮಾಣದಲ್ಲಿ ಭೂಮಿಯ ತಿರುಗುವಿಕೆಯ ಮೇಲೆ ಪರಿಣಾಮ ಬೀರಲಿದೆ. ಆದರೆ ಅಂತರ್ಜಲ ಸ್ಥಳಾಂತರದಿAದಾಗುವ ಪರಿಣಾಮ ಇತರ ಕಾರಣಗಳಿಗೆ ಹೋಲಿಸಿದರೆ, ಅತಿ ಹೆಚ್ಚು ಎಂಬುದು ತಿಳಿದುಬಂದಿದೆ.

ಋತುಗಳಿಗೆ ತಟ್ಟದ ಪರಿಣಾಮ - ಸದ್ಯಕ್ಕೆ ಆತಂಕವಿಲ್ಲ

ಸಾಮಾನ್ಯವಾಗಿ ಭೂಮಿಯು ಸೂರ್ಯನನ್ನು ಪ್ರದಕ್ಷಿಸುತ್ತಿರುವ ಕಾಲ್ಪನಿಕ ಕಕ್ಷಾ ಸಮತಲಕ್ಕೆ (oಡಿbiಣಚಿಟ ಠಿಟಚಿಟಿe)-ಸಮಕೋನವಿರುವ (ಠಿeಡಿಠಿeಟಿಜiಛಿuಟಚಿಡಿ) ಗೆರೆಗೆ, ಭೂಮಿಯ ಅಕ್ಷರೇಖೆಯು ೨೩.೫ ಡಿಗ್ರಿ ಬಾಗಿರುತ್ತದೆ (ಚಿತ್ರ ಗಮನಿಸಿ). ಇದರಿಂದಾಗಿಯೇ ಬೇಸಿಗೆ ಹಾಗೂ ಚಳಿಗಾಲ ಎಂಬೆರಡು ಋತುಗಳು ಸೃಷ್ಠಿಯಾಗುತ್ತವೆ. ಜೂನ್ ತಿಂಗಳಿನಲ್ಲಿ ಚಿತ್ರದಲ್ಲಿರುವಂತೆ ಭೂಮಿಯ ಉತ್ತರ ಗೋಳಾರ್ಧವು ಸೂರ್ಯನತ್ತ ಮುಖ ಮಾಡಿರುತ್ತದೆ. ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಭೂಮಿಯು ಅದರ ಕಕ್ಷೆಯ ಮತ್ತೊಂದು ದಿಕ್ಕಿನಲ್ಲಿರುವ ಕಾರಣ ದಕ್ಷಿಣದ ಗೋಳಾರ್ಧವು ಸೂರ್ಯನಿಗೆ ಹತ್ತಿರವಿರಲಿದೆ. ಮಾರ್ಚ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಭೂಮಿಯ ಎರಡು ಗೋಳಾರ್ಧಗಳಿಗೂ ಸಮಾನವಾಗಿ ಸೂರ್ಯನ ಬೆಳಕು ಪ್ರಕಾಶಿಸುತ್ತದೆ.

ಈ ಕಾರಣದಿಂದಾಗಿ ಉತ್ತರ ಗೋಳಾರ್ಧದಲ್ಲಿ ಮಾರ್ಚ್ನಿಂದ ಸೆಪ್ಟೆಂಬರ್‌ವರೆಗೆ ಬೇಸಿಗೆ ಇರುತ್ತದೆ (ಸ್ಥಳೀಯ ಕಾರಣಗಳಿಂದಾಗಿ ಮಳೆಗಾಲ, ಸ್ಪಿçಂಗ್ ಇತ್ಯಾದಿ ಋತುಗಳು ಸೃಷ್ಟಿಯಾಗಲಿವೆ. ಭಾರತದಲ್ಲಿನ ಮುಂಗಾರು ಮಳೆ ಇದಕ್ಕೆ ಉದಾಹರಣೆ). ಈ ಸಮಯದಲ್ಲಿ ದಕ್ಷಿಣ ಗೋಳಾರ್ಧಕ್ಕೆ ಸೂರ್ಯನ ಕಿರಣಗಳು ಓರೆಯಾಗಿ ಬೀಳುವ ಕಾರಣ ಇಲ್ಲಿ ಚಳಿಗಾಲ ಇರಲಿದೆ. ಇದೇ ರೀತಿ ಉತ್ತರದಲ್ಲಿ ಚಳಿಗಾಲವಿದ್ದಾಗ (ಅಕ್ಟೋಬರ್‌ನಿಂದ ಫೆಬ್ರವರಿವರೆಗೆ), ದಕ್ಷಿಣದಲ್ಲಿ ಬೇಸಿಗೆ ಇರಲಿದೆ. ಕೇವಲ ೨೩.೫ ಡಿಗ್ರಿ ಬಾಗುವಿಕೆಯಿಂದಾಗಿ ಭೂಮಿಯಲ್ಲಿ ಋತುಗಳು ಸೃಷ್ಟಿಯಾಗುತ್ತವೆ. ಆದರೆ ಈ ಬಾಗುವಿಕೆಯ ಕೋನ ಸಹಜವಾಗಿ ಬದಲಾಗುತ್ತದೆ. ೪೦,೦೦೦ ವರ್ಷಗಳ ಅವಧಿಯಲ್ಲಿ ೨೨.೧ ಡಿಗ್ರಿಯಿಂದ ೨೪.೫ ಡಿಗ್ರಿವರೆಗೆ ಕೋನದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಈ ಕೋನ ಬದಲಾವಣೆಯಿಂದಾಗಿ ಋತುಗಳ ತೀವ್ರತೆಯಲ್ಲಿಯೂ ಬದಲಾವಣೆ ಸಹಜ.

ಪ್ರಸ್ತುತ ೨೩.೫ ಡಿಗ್ರಿ ಕೋನದಲ್ಲಿ ಬಾಗಿರುವ ಭೂಮಿಗೆ, ಅಂತರ್ಜಲ ಸ್ಥಳಾಂತರದಿAದ ಉಂಟಾದ ಭೂಮಿಯ ಅಸ್ಥಿರತೆಯ ತಿರುಗುವಿಕೆಯು ಅತ್ಯಲ್ಪವಾಗಿ, ಬಹುತೇಕ ನಗಣ್ಯ ಎನ್ನುವಷ್ಟೇ (ಕೇವಲ ೩೧ ಇಂಚು ಮಾತ್ರ) ಪರಿಣಾಮ ಬೀರಿದೆ. ಆದರೆ, ಅಧ್ಯಯನದಲ್ಲಿ ಕೇವಲ ೨ ದಶಕಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದ್ದು, ಭವಿಷ್ಯದಲ್ಲಿ ಹೆಚ್ಚಾಗಬಹುದಾದ ಜಾಗತಿಕ ತಾಪಮಾನ, ಅಂತರ್ಜಲ ಬಳಕೆಯಿಂದ ತಿರುಗುವಿಕೆಯ ಅಸ್ಥಿರತೆ ಹೆಚ್ಚಾಗಲಿದ್ದು, ಈ ಮೂಲಕ ಭೂಮಿ ಸೂರ್ಯನಿಗೆ ಬಾಗಿರುವ ಕೋನದಲ್ಲಿಯೂ ಹೆಚ್ಚಿನ ಬದಲಾವಣೆ ಯಾಗಲಿದ್ದು, ಬೇಸಿಗೆ ಹಾಗೂ ಚಳಿಗಾಲದ ತೀವ್ರತೆಯು ಹೆಚ್ಚಾಗುವ ಸಾಧ್ಯತೆಗಳಿವೆ.

-ಪ್ರಜ್ವಲ್ ಜಿ. ಆರ್.