ವೀರಾಜಪೇಟೆ, ಜು. ೨೭: ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿ ಟೆಡ್ ಪ್ರಾರಂಭಗೊAಡು ನಾಲ್ಕು ವರ್ಷಗಳು ಕಳೆದಿದೆ. ಸದಸ್ಯರುಗಳು, ಸಹಕಾರಿಗಳು ಮತ್ತು ಸಾರ್ವಜನಿ ಕರಿಂದ ಉತ್ತಮ ಸ್ಪಂದನ ದೊರಕು ತ್ತಿರುವುದರಿಂದ ಆರ್ಥಿಕ ವ್ಯವಹಾ ರಗಳು ಪ್ರಗತಿ ಸಾಧಿಸುತ್ತಿದೆ ಎಂದು ಸಂಸ್ಥೆ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಈ ಸಂಸ್ಥೆಯು ವೀರಾಜಪೇಟೆ, ಮಡಿಕೇರಿ ಪೊನ್ನಂ ಪೇಟೆ ಮೂರು ತಾಲೂಕುಗಳನ್ನು ಒಳಗೊಂಡಿದೆ. ೧೨೩೫ ಸದಸ್ಯರು ಗಳನ್ನು ಹೊಂದಿದೆ. ಪಾಲು ಬಂಡ ವಾಳ ೬೭.೫೬ ಲಕ್ಷಗಳಾಗಿದ್ದು ವಿವಿಧ ಠೇವಣಿಗಳಿಂದ ೫೨೬.೯೨ ಲಕ್ಷ ಸಂಗ್ರಹಣೆ ಆಗಿದೆ. ೩೯೦.೦೦ ಲಕ್ಷ ವಿವಿಧ ಬಗೆಯ ಸಾಲ ಸೌಲಭ್ಯಗಳನ್ನು ನೀಡಲಾಗಿದ್ದು ಶೇ. ೯೮ ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ಇತರೆ ಬ್ಯಾಂಕಿನಲ್ಲಿ ಠೇವಣಿಯಾಗಿ ರೂ. ೧೮೦ ಲಕ್ಷ ಹೂಡಿಕೆ ಮಾಡಲಾಗಿದ್ದು ೨೦೨೨-೨೩ನೇ ಸಾಲಿನಲ್ಲಿ ರೂ. ೧೧,೪೦,೬೮೬.೦೦ ಲಕ್ಷ ಲಾಭ ಗಳಿಸಿದೆ. ಲಾಭಾಂಶವನ್ನು ಸಹಕಾರಿಗಳ ನಿಯಮಾನುಸಾರ ವಿಲೇವಾರಿ ಮಾಡ ಲಾಗುವುದು. ೨೦೨೨-೨೩ ಸಾಲಿನ ಲಾಭಾಂಶದಲ್ಲಿ ಸದಸ್ಯರಿಗೆ ಶೇ೮ ರಷ್ಟು ಡಿವಿಡೆಂಟ್ ಹಂಚಲು ಕ್ರಮ ವಹಿಸಲಾಗುವುದು. ಮುಂದಿನ ಸಾಲಿನಲ್ಲಿ ಇನ್ನು ಹಚ್ಚಿನ ಲಾಭ ಗಳಿಸುವ ವಿಶ್ವಾಸ ಇದೆ ಎಂದರು.
೨೦೨೩-೨೪ ನೇ ಸಾಲಿನಲ್ಲಿ ಸಹಕಾರಿ ವತಿಯಿಂದ ಹೊಸ ಶಾಖೆಯನ್ನು ಅಮ್ಮತ್ತಿಯಲ್ಲಿ ಪ್ರಾರಂಭಿಸಲು ಕಾರ್ಯಪ್ರವೃತ್ತ ರಾಗಿದ್ದು ಹೆಚ್ಚಿನ ಶಾಖೆಗಳನ್ನು ಆರಂಭಿಸಲು ಕ್ರಮ ಕ್ಯೆಗೊಳ್ಳಲಾಗು ವುದು. ಆಗಸ್ಟ್ ೨೯ ರಂದು ಪಟ್ಟಣ ಸಹಕಾರ ಬ್ಯಾಂಕ್ನ ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ಹೇಳಿದರು. ಉಪಾಧ್ಯಕ್ಷ ಚೇಂದAಡ ವಸಂತ್ಕುಮಾರ್ ಮಾತನಾಡಿ, ಬ್ಯಾಂಕ್ ಸೌಲಭ್ಯ ಕುರಿತು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ನಿರ್ದೇಶಕರು ಗಳಾದ ಕಾಂಡAಡ ಚರ್ಮಣ, ನೆಲ್ಲಚಂಡ ಭೀಮಯ್ಯ, ವಾಂಚಿರ ನಾಣಯ್ಯ, ವಾಟೇರಿರ ಪೂವಯ್ಯ, ಚೇಂದ್ರಿಮಾಡ ಕೆ. ನಂಜಪ್ಪ, ಕೇಳಪಂಡ ವಿಶ್ವನಾಥ್, ಕೊಂಗAಡ ಟಾಟ ನಾಣಯ್ಯ, ಕಾಳೇಂಗಡ ತಿಮ್ಮಯ್ಯ, ನೆಲ್ಲಮಕ್ಕಡ ಬೆಳ್ಯಪ್ಪ, ಮೇಕೇರಿರ ಪಾಲಿ ಸುಬ್ರಮಣಿ, ಪಟ್ಟಡ ದಿವ್ಯ, ಬೊಳ್ಳೆಪಂಡ ಸುರೇಶ್ ಕಾರ್ಯನಿರ್ವಣಾಧಿಕಾರಿ ಅಕ್ಕಮ್ಮ ಉಪಸ್ಥಿತರಿದ್ದರು.