ಸೋಮವಾರಪೇಟೆ, ಜು. ೨೭: ಇಲ್ಲಿನ ನಗರ ಕಾಂಗ್ರೆಸ್ ವತಿಯಿಂದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.
ಮಳೆಗಾಲವಾಗಿರುವುದರಿಂದ ಆಸ್ಪತ್ರೆ ಹೊರಾಂಗಣದಲ್ಲಿ ಪಾಚಿ ಕಟ್ಟಿ ರೋಗಿಗಳಿಗೆ, ಸಾರ್ವಜನಿಕರಿಗೆ ನಡೆದಾಡಲು ಸಮಸ್ಯೆಯಾಗಿದ್ದರಿಂದ ಬ್ಲೀಚಿಂಗ್ ಪೌಡರ್ ಹಾಕಿ ಶುಚಿಗೊಳಿಸಲಾಯಿತು. ಇದರೊಂದಿಗೆ ವೈದ್ಯರ ವಸತಿ ಗೃಹದ ಸುತ್ತಮುತ್ತ ಬಿದ್ದದ್ದ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು.
ಈ ಸಂದರ್ಭ ಕಾಂಗ್ರೆಸ್ ನಗರಾಧ್ಯಕ್ಷ ಹೆಚ್.ಎ. ನಾಗರಾಜ್, ಉಪಾಧ್ಯಕ್ಷ ಜಮೀರ್, ಪ್ರಧಾನ ಕಾರ್ಯದರ್ಶಿ ಬೇಟು, ಕಾರ್ಮಿಕ ಘಟಕದ ಅಧ್ಯಕ್ಷ ಜೇಕಬ್ ಸೈಮನ್, ಸದಸ್ಯರಾದ ಸ್ವಾಮಿ, ಅಜಯ್, ಹೆಚ್.ಬಿ. ರಾಜಪ್ಪ, ಎನ್. ನವೀನ್, ರೋಷನ್, ಸಿರಿಲ್ ಸೇರಿದಂತೆ ಇತರರು ಭಾಗವಹಿಸಿದ್ದರು.