ಕುಶಾಲನಗರ, ಜು. ೨೭: ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಬೈಲುಕೊಪ್ಪ ಸಮೀಪದ ಹುಣಸೆವಾಡಿಯ ವಾಟರ್ ಪಾರ್ಕ್ನಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಯೋಧರ ಸ್ಮರಣಾರ್ಥ ನಿರ್ಮಿಸಿರುವ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಲಾಯಿತು.

ಈ ಸಂದರ್ಭ ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಸುಮನ್, ಕಾರ್ಯದರ್ಶಿ ಟಿ.ಕೆ. ರಾಜಶೇಖರ್, ಖಜಾಂಚಿ ನಿತಿನ್ ಗುಪ್ತ, ಮಾಜಿ ಅಧ್ಯಕ್ಷ ಎಂ.ಎಸ್.ಚಿಣ್ಣಪ್ಪ, ಕೊಡಗನ ಹರ್ಷ, ಸತೀಶ್ ಕುಮಾರ್, ಪಿ.ಎಂ.ಮೋಹನ್, ಡಾ.ಪ್ರವೀಣ್, ಡಾ.ಶರತ್, ಕಿರಣ್ ಮತ್ತಿತರರು ಇದ್ದರು.