ಸೋಮವಾರಪೇಟೆ, ಜು. ೨೬: ಹುದುಗೂರು ಗ್ರಾಮದಲ್ಲಿರುವ ಸಾಮಾಜಿಕ ಅರಣ್ಯ ವಲಯದ ಸಸ್ಯಕ್ಷೇತ್ರದಲ್ಲಿ ೨೦೨೩-೨೪ನೇ ಸಾಲಿನ ಮಳೆಗಾಲದಲ್ಲಿ ನೆಡಲು ವಿವಿಧ ಸಸಿಗಳನ್ನು ಬೆಳೆಸಲಾಗಿದ್ದು, ಆಸಕ್ತರು ಪಡೆದು ಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹುದುಗೂರು ಸಸ್ಯಕ್ಷೇತ್ರದಲ್ಲಿ ನೇರಳೆ, ಮಹಾಗನಿ, ನೆಲ್ಲಿ, ಬಿದಿರು, ಶಿವನಿ, ಸೀಬೆ, ಕಹಿಬೇವು, ಬಿಲ್ವಪತ್ರ, ರಕ್ತಚಂದನ, ಹೊನ್ನೆ, ಚಕ್ಕೆ, ಮುಳ್ಳು ಸಂಪಿಗೆ, ತೇಗ, ಹೆಬ್ಬೇವು, ಹಲಸು, ಹೆಬ್ಬಲಸು ಸೇರಿದಂತೆ ಇತರ ಸಸಿಗಳನ್ನು ಬೆಳೆಸಲಾಗಿದ್ದು, ಸರ್ಕಾರ ನಿಗದಿಪಡಿಸಿರುವ ೬೯ ಅಳತೆಯ ಚೀಲದ ಸಸಿಗಳು ಹಾಗೂ ೮೧೨ ಅಳತೆಯ ಚೀಲದ ಸಸಿಗಳನ್ನು ಪಡೆದುಕೊಳ್ಳಬಹುದಾಗಿದೆ.
ರೈತರು ತಮ್ಮ ಆಧಾರ್ ಪ್ರತಿ, ರಾಷ್ಟಿçÃಕೃತ ಬ್ಯಾಂಕ್ ಪಾಸ್ ಬುಕ್ ಪ್ರತಿ, ತಮ್ಮ ಜಮೀನಿನ ಆರ್.ಟಿ.ಸಿ. ಪ್ರತಿಯನ್ನು ನೀಡಿ ಸಸಿಗಳನ್ನು ಪಡೆಯಬಹುದು ಹಾಗೂ ಬಿ.ಪಿ.ಎಲ್. ಕಾರ್ಡ್ ಮತ್ತು ನರೇಗಾ ಉದ್ಯೋಗ ಚೀಟಿ ಹೊಂದಿರುವ ರೈತರಿಗೆ ನೆಟ್ಟ ೧೦೦ ಸಸಿಗಳಿಗೆ ಸುಮಾರು ೮,೦೦೦ -೧೪,೦೦೦ ರೂ. ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಉಪ ವಲಯ ಅರಣ್ಯ ಅಧಿಕಾರಿಗಳು, ಮೊ: ೯೪೮೩೬೪೬೧೦೧, ೯೦೦೮೯೯೪೫೭೨, ಗಸ್ತು ಅರಣ್ಯ ಪಾಲಕರು ಮೊ: ೯೪೮೨೧೦೮೦೦೭ ನ್ನು ಸಂಪರ್ಕಿಸಬಹುದು.