ಕೂಡಿಗೆ, ಜು. ೨೬: ಕುಶಾಲನಗರ ತಾಲೂಕು ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಕಂದಾಯ ಇಲಾಖೆಯ ವತಿಯಿಂದ ಕಣಿವೆ ಸಮೀಪದ ರಾಂಪುರ ಗ್ರಾಮದ ಸರ್ವೆ ನಂಬರ್ ೧/೧ ರಲ್ಲಿ ಒಂದು ಎಕರೆ ಜಾಗವನ್ನು ಗುರುತಿಸಿ, ಸರ್ವೆ ನಡೆಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಇಲಾಖೆಯ ಮೂಲಕ ಹಸ್ತಾಂತರ ಮಾಡಲಾಗಿದೆ.

ತಾ. ೨೫ ರಂದು ‘ಶವ ಸಂಸ್ಕಾರಕ್ಕೆ ಪರದಾಡಿದ ಕುಟುಂಬಸ್ಥರು’ ಎಂಬ ಶೀರ್ಷಿಕೆಯಡಿಯಲ್ಲಿ ‘ಶಕ್ತಿ’ಯಲ್ಲಿ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಅವರು ಸ್ಪಂದಿಸಿದ್ದು, ಕಂದಾಯ ಇಲಾಖೆಯಿಂದ ಗ್ರಾಮ ಪಂಚಾಯಿತಿಗೆ ಜಾಗ ಹಸ್ತಾಂತರಿಸಿದ್ದಾರೆ. ಸ್ಮಶಾನಕ್ಕೆ ಉಪಯೋಗಿಸಬಹುದಾದ ಈ ಜಾಗವನ್ನು ಗ್ರಾ.ಪಂ. ಅಭಿವೃದ್ಧಿಪಡಿಸಬೇಕಿದೆ.