ಸುಂಟಿಕೊಪ್ಪ, ಜು. ೨೬: ಲಯನ್ಸ್ ಸಂಸ್ಥೆಯು ತನ್ನ ತತ್ವ ಆದರ್ಶಗಳಿಂದ ಸಮಾಜ ಸೇವೆಯಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ. ಸದಸ್ಯರೆಲ್ಲರು ಸೇವಾ ಮನೋಭಾವನೆಯಿಂದ ಸೇವೆ ಮಾಡಬೇಕು ಎಂದು ಪದಗ್ರಹಣ ಸಮಾರಂಭದ ಮುಖ್ಯ ಜಿಲ್ಲಾ ಸಂಯೋಜನಾಧಿüಕಾರಿ ಹೆಚ್.ಎಂ. ತಾರಾನಾಥ್ ಹೇಳಿದರು.

ಇಲ್ಲಿನ ಗುಂಡುಕುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಸುಂಟಿಕೊಪ್ಪ ಲಯನ್ಸ್ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆಯ ನೂತನ ಸದಸ್ಯರು ಜೇನು ಹುಳುವಿನಂತೆ ಸೇವಾ ಮನೋಭಾವನೆಯಿಂದ ಸೇವೆ ಸಲ್ಲಿಸಿದರೆ ಜೀವನ ಸಾರ್ಥಕವಾಗಲಿದೆ. ಪುಸ್ತಕದ ಪಾಠಕ್ಕಿಂತ ಜೀವನದ ಪಾಠ ಮುಖ್ಯವಾಗಿರುತ್ತದೆ.

ಈ ಸಂಸ್ಥೆಯ ಮೂಲಕ ಉತ್ತಮ ಕೆಲಸವನ್ನು ಮಾಡಿ ಆತ್ಮತೃಪ್ತಿ ಪಡುವಂತಾಗಬೇಕು. ಅಧ್ಯಕ್ಷ ಸ್ಥಾನ ಹೆÀಚ್ಚಿನ ಜವಾಬ್ದಾರಿ ಇರುವ ಉನ್ನತ ಸ್ಥಾನವಾಗಿದೆ. ಆರೋಗ್ಯ ತಪಾಸಣೆ, ಪರಿಸರ ನಿಲುವು, ಇನ್ನಿತರ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು ಈ ಸಂಸ್ಥೆ ಎತ್ತರಕ್ಕೆ ಬೆಳೆದು ನಿಂತಿದೆ.

ಮುಂದಿನ ದಿನಗಳಲ್ಲಿ ಸಮಾಜ ಸೇವೆಯ ಜೊತೆಯಲ್ಲಿ ಸಮಾಜದ ಏಳಿಗೆಗೆ ಪಣತೊಡುವಂತೆ ಕರೆ ನೀಡಿದರು. ನಂತರ ಅವರು ನೂತನ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಈ ಸಂದರ್ಭ ನೂತನ ಅಧ್ಯಕ್ಷ ಸಿ.ವಿ. ನಿಕೇಶ್ ಅವರಿಗೆ ನಿಕಟಪೂರ್ವ ಅಧ್ಯಕ್ಷ ಚಮನ್ ಚೆಟ್ಟಿಯಪ್ಪ ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿಯಾಗಿ ಪ್ರೀತಮ್ ಪ್ರಭಾಕರ್, ಖಜಾಂಚಿಯಾಗಿ ಟಿ.ಕೆ. ರಾಜೀವ್, ಕ್ಲಬ್ ಸದಸ್ಯರು ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭ ನೂತನ ಅಧ್ಯಕ್ಷ ಸಿ.ವಿ. ನಿಕೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದೊಂದಿಗೆÀ ಹೆಚ್ಚಿನ ಸೇವೆ ಸಲ್ಲಿಸುವಂತಹ ಅವಕಾಶ ದೊರೆತಿದೆ. ಎಲ್ಲರು ಕೈ ಜೋಡಿಸುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷ ನವೀನ್ ಅಂಬೆಕಲ್, ವಲಯ ಅಧ್ಯಕ್ಷ ಕಾನೆಹಿತ್ಲು ಸತೀಶ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಲಯನ್ ಚಮನ್ ಚೆಟ್ಟಿಯಪ್ಪ ಸ್ವಾಗತಿಸಿ, ಪ್ರೀತಮ್ ಪ್ರಭಾಕರ್ ವಂದಿಸಿದರು.