ಮಡಿಕೇರಿ, ಜು. ೨೬: ಸಾಮಾಜಿಕ ಭದ್ರತಾ ಯೋಜನೆಯ ವೃದ್ಧಾಪ್ಯ ವೇತನ, ಅಂಗವಿಕಲವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮನಸ್ವಿನಿ ವೇತನ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಬ್ಯಾಂಕ್-ಅAಚೆ ಖಾತೆಗೆ ಆಧಾರ್ ಲಿಂಕ್ ಹಾಗೂ ಎನ್.ಪಿ.ಸಿ.ಐ. ಮ್ಯಾಪಿಂಗ್ ಮಾಡಿಸಬೇಕು. ಇಲ್ಲಿಯವರೆಗೆ ಪಿಂಚಣಿದಾರರು ಬ್ಯಾಂಕ್-ಅAಚೆ ಖಾತೆಗೆ ಆಧಾರ್ ಲಿಂಕ್ ಹಾಗೂ ಎನ್.ಪಿ.ಸಿ.ಐ. ಮ್ಯಾಪಿಂಗ್ ಮಾಡಿಸದಿದ್ದಲ್ಲಿ ತಾ. ೨೮ ರೊಳಗೆ ತಮ್ಮ ಬ್ಯಾಂಕ್-ಅAಚೆ ಖಾತೆಗೆ ಆಧಾರ್ ಲಿಂಕ್ ಹಾಗೂ ಆಧಾರ್ ಲಿಂಕ್ ಆಗಿದ್ದಲ್ಲಿ ಎನ್.ಪಿ.ಸಿ.ಐ. ಮ್ಯಾಪಿಂಗ್ ಮಾಡಿಸುವಂತೆ ವೀರಾಜಪೇಟೆ ತಹಶೀಲ್ದಾರರು ತಿಳಿಸಿದ್ದಾರೆ.

ಪಿಂಚಣಿ ಪಡೆಯುತ್ತಿರುವ ಸಂಬAಧಪಟ್ಟ ಬ್ಯಾಂಕ್-ಅAಚೆ ಖಾತೆ ಮತ್ತು ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿಯೊಂದಿಗೆ ಖುದ್ದು ಫಲಾನುಭವಿಗಳೇ ಬ್ಯಾಂಕ್-ಅAಚೆ ಕಚೇರಿಗೆ ಭೇಟಿ ನೀಡಿ ಬ್ಯಾಂಕ್-ಅAಚೆ ಖಾತೆಗೆ ಎನ್.ಪಿ.ಸಿ.ಐ. ಮಾಡಬೇಕಾಗಿದ್ದು, ಎನ್.ಪಿ.ಸಿ.ಐ. ಮ್ಯಾಪಿಂಗ್ ಮಾಡಲು ಬೆರಳಚ್ಚು ನೀಡಬೇಕಾಗಿದೆ ಹಾಗೂ ಸದರಿ ಪ್ರಕ್ರಿಯೆ ಸಂದರ್ಭದಲ್ಲಿ ಫಲಾನುಭವಿಗಳ ಮೊಬೈಲ್‌ಗೆ (ಓ.ಟಿ.ಪಿ.) ಬರುವುದರಿಂದ ಮೊಬೈಲ್ ಜೊತೆಗೆ ಬ್ಯಾಂಕ್-ಅAಚೆ ಕಚೇರಿಗೆ ಭೇಟಿ ನೀಡಿ ತಮ್ಮ ಬ್ಯಾಂಕ್-ಅAಚೆ ಖಾತೆಗೆ ಎನ್.ಪಿ.ಸಿ.ಐ. ಮ್ಯಾಪಿಂಗ್ ಮಾಡಿಸದಿದ್ದಲ್ಲಿ ಆಗಸ್ಟ್ ತಿಂಗಳಿನಿAದ ಪಿಂಚಣಿ ರದ್ದಾಗುವ ಸಾಧ್ಯತೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.