ವನಮಹೋತ್ಸವವು ೧೯೫೦ ರಲ್ಲಿ ಕೆ. ಕಿರಣ್ ಕುಮಾರ್ ಎಂಬವರು ಭಾರತದಲ್ಲಿ ಆರಂಭಿಸಿದ ವಾರ್ಷಿಕ ಗಿಡ ನೆಡುವ ಚಳವಳಿ. ಇದು ಗಣನೀಯವಾಗಿ ರಾಷ್ಟಿçÃಯ ಮಹತ್ವವನ್ನು ಪಡೆದುಕೊಂಡು ಸಾಮಾನ್ಯವಾಗಿ ಜುಲೈ ತಿಂಗಳ ಮೊದಲ-ಎರಡನೆ ವಾರದಲ್ಲಿ ಆಚರಿಸುತ್ತಾ ಬರಲಾಗಿದೆ. ಜಗತ್ತಿನ ತಾಪಮಾನ ಏರಿಕೆಯನ್ನು ತಡೆಯಲು ಹಾಗೂ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಸಸಿಗಳನ್ನು ನೆಟ್ಟು ಮರಗಳಾಗಿ ಬೆಳೆಸುದೊಂದೆ ದಾರಿ. ಹೆಚ್ಚುತ್ತಿರುವ ಜಾಗತಿಕ ತಾಪಮಾನವನ್ನು ತಡೆಯಲು ದಿ. ಇಂಟರ್ ಗವರ್ನಮೆಂಟಲ್ ಪ್ಲಾನಲ್ ಆನ್ ಕ್ಲೆöÊಮೇಟ್ ಚೇಂಜ್ (IPಅಅ) ಅನ್ನು ೧೯೮೮ರಲ್ಲಿ ವಿಶ್ವ ಹವಾಮಾನ ಸಂಸ್ಥೆ (Wಒಔ) ಮತ್ತು ಯುನೈಟೆಟ್ ನ್ಯಾಷನಲ್ ಎನ್ವಿರಾನ್‌ಮೆಂಟ್ ಪೋಗ್ರಾಂ (UಓಇP)ವನ್ನು ರಚಿಸಿ ೨೦೨೧ರಲ್ಲಿ ಪ್ರಕಟವಾದ ಆರನೇ ಮೌಲ್ಯಮಾಪನ ವರದಿ ಪ್ರಕಾರ ಪತ್ರಿ ದೇಶದಲ್ಲಿ ಶೇ. ೩೩ ರಷ್ಟು ಕಾಡು ಬೆಳೆಸಬೇಕು ಹಾಗೂ ತಾಪಮಾನವನ್ನು ೧.೨೦ ಚ. ೧.೮೦ ಚ.ವರೆಗೆ ಇಳಿಸಬೇಕು ಎಂಬ ವರದಿಯನ್ನು ಎಲ್ಲಾ ದೇಶಗಳು ಪಾಲಿಸಬೇಕಾಗಿ ಬಂದಾಗ, ಈ ವನಮಹೋತ್ಸವಕ್ಕೆ ಹೆಚ್ಚಿನ ಆಧ್ಯತೆ ದೊರೆಯತೊಡಗಿತು. ನಮ್ಮ ರಾಜ್ಯದಲ್ಲಿ ಶೇ. ೨೧.೫ ಮಾತ್ರ ಕಾಡುಗಳಿದ್ದು ಅದನ್ನು ಶೇ. ೩೩ ಏರಿಸುವ ಸಲುವಾಗಿ ಈ ವರ್ಷ ನಮ್ಮ ರಾಜ್ಯ ಸರಕಾರ (ಅರಣ್ಯ ಮಂತ್ರಾಲಯ) ೫ ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಪ್ರಯುಕ್ತ ನಮ್ಮ ಜಿಲ್ಲೆಯಲ್ಲೂ ಗಿಡಗಳನ್ನು ನೆಟ್ಟಿದ್ದು ಅದು ಅರಣ್ಯಗಳಾಗಿ ಯಾವಾಗ ಮಾರ್ಪಾಡು ಗೊಳ್ಳಲಿದೆಯೇ ಗೊತ್ತಿಲ್ಲ! ಇತ್ತೀಚಿನ ದಿನಗಳಲ್ಲಿ ಪರಿಸರ ದಿನಾಚರಣೆ, ವನಮಹೋತ್ಸವ ಕಾರ್ಯಕ್ರಮಗಳು ಕೇವಲ ಆಚರಣೆಗೆ ಸೀಮಿತವಾಗಿದೆ. ಒಂದು ರೀತಿಯಲ್ಲಿ ಇದು ‘ಒಣ’ ಮಹೋತ್ಸವ ಆಗುತ್ತಿದೆ. ಇದರ ಜತೆಯಲ್ಲಿ ಸರಕಾರದ ಖಜಾನೆಯ ‘ಹಣ’ ಮಹೋತ್ಸವವು ಹೌದು...! ಒಟ್ಟು ಭೂಪ್ರದೇಶ ೪,೧೦,೭೭೫ ಹೆಕ್ಟೇರ್‌ಗಳಿದ್ದು ಅದರಲ್ಲಿ ೧,೩೪,೬೧೫ ಹೆಕ್ಟೇರ್ ಕಾಡು ಇಲ್ಲಿಯ ಅರಣ್ಯದ ಶೇಕಡವಾರು ಪ್ರಮಾಣ ೩೩ ಇದೆ. ಇದರಲ್ಲಿ ೫ ಹುಲಿ ಸಂರಕ್ಷಣಾ ಪ್ರದೇಶ, ೩೦ ವನ್ಯಜೀವಿ ಸಂರಕ್ಷಣಾ ವಲಯ, ೧೫ ದೇವರ ಕಾಡುಗಳು, ೧ ಸಾಮಾಜಿಕ ಅರಣ್ಯ, ಇದರ ಜಶೇಯಲ್ಲಿ ಜಮ್ಮ ಮಲೆ, ಗೇಣಿ ಮಲೆ, ಪೈಸಾರಿ, ಊರ್‌ಡವೆ ಕೊಡಗಿನ ದೇವರಕಾಡುಗಳು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಆಡಳಿತ ಸುಪದ್ರಿ ಯಲ್ಲಿದ್ದು ಕಾರಣಾಂತರಗಳಿAದ ಹಲವು ದೇವರಕಾಡುಗಳು ಇಂದು ಪೈಸಾರಿಗಳಾಗಿ ಮಾರ್ಪಟ್ಟಿವೆ! ಕಂದಾಯ ಇಲಾಖೆಯ ಕಡತಗಳನ್ನು ತಮಗೆ ಇಷ್ಟಬಂದAತೆ ತಿದ್ದುವಲ್ಲಿ ಇಲ್ಲಿಯ ಕೆಲವರು ಸಫಲರಾಗಿದ್ದಾರೆ! ೨೦೧೦ ಗಣತಿಯ ಪ್ರಕಾರ ಜಿಲ್ಲೆಯಲ್ಲಿ ಸರಿ ಸುಮಾರು ೧೬೫ ಕಿ.ಮೀ.ರಷ್ಟು ಅರಣ್ಯ ಪ್ರದೇಶದಿಂದ ೪೪.೯೪ ರಷ್ಟು ಉತ್ಪತ್ತಿಯಾಗುತ್ತಿದ್ದು, ೨೦೨೨ ರಲ್ಲಿ ಇದರ ಪ್ರಮಾಣ ೪೦.೮೩ಕ್ಕೆ ಇಳಿಕೆಯಾಗಿದೆ, ಕಾರಣ ಹಲವಾರು ಅರಣ್ಯ ನಾಶ, ಅತಿಹೆಚ್ಚು ಮಳೆಯ ಪ್ರಮಾಣ, ಭೂಕುಸಿತಗಳು, ನದಿ, ಕೆರೆಗಳ ಹರಿವಿಕೆಗೆ ಅಡ್ಡಿ, ಭೂ ಕಬಳಿಕೆಗಳು, ಅವೈಜ್ಞಾನಿಕ ರೀತಿಯ ಭೂಪರಿವರ್ತನೆ, ಕೃಷಿ ಭೂಮಿಗಳಲ್ಲಿ ಲೇಔಟ್ ನಿರ್ಮಾಣ ಇತ್ಯಾದಿ, ಬ್ರಿಜಿಕ್ರಿಸೂರ್ ಸಿಂಗ್ (ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿಗಳು) ಇವರ ಪ್ರಕಾರ ಅರಣ್ಯ ನಾಶ ಹಾಗೂ ಭೂಕುಸಿತಗಳಿಗೆ ಮಾನವನ ಅತಿಯಾದ ಹಸ್ತಕ್ಷೇಪ. ಪ್ರಕೃತಿಯ ನಿಯಮಕ್ಕೆ ಅಡ್ಡ ಬರುವಿಕೆಯ ಮುಖ್ಯ ಕಾರಣವೆಂದು ಉಲ್ಲೇಖಿಸಿದ್ದಾರೆ. ೨೦೧೫ ರಿಂದ ೨೦೨೨ ರವರೆಗೆ ಕೊಡಗಿನ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಗಿಡಗಳನ್ನು ನೆಡಲು ಸುಮಾರು ರೂ. ೧.೯೮ ಕೊಟಿ ಖರ್ಚು ಮಾಡಿದೆ ಅರಣ್ಯ ಇಲಾಖೆ! (ಇದರಲ್ಲಿ ಎಷ್ಟು ಸಸಿಗಳು ಮರಗಳಾಗಿ ಉಳಿದಿವೆಯೊ ಗೊತ್ತಿಲ್ಲ...!) ಇದೇ ಅವಧಿಯಲ್ಲಿ ಅರಣ್ಯ ಇಲಾಖೆ ಸುಮಾರು ೨೫೦ಕ್ಕೂ ಹೆಚ್ಚು ಮರ ಕಡಿತಗಳಿಗೆ ಸಹಿ ಹಾಕಲಾಗಿದೆ. ಇದರಲ್ಲಿ ಅನುಮೋದನೆ ಇಲ್ಲದೆ ಮರಗಳನ್ನು ಕಡಿದ ೨೫ ಪ್ರಕರಣಗಳಿವೆ. ಕೊಡಗಿನಲ್ಲಿ ಮರಗಳ ಹನನಕ್ಕೆ ಸರಕಾರಗಳ ನೀತಿ ಹಾಗೂ ಕೆಲವು ಭ್ರಷ್ಟ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳ ಕಳ್ಳಾಟವೇ ಕಾರಣ (೨೦೧೫ರಲ್ಲಿ ದಕ್ಷಿಣ ಕೊಡಗಿನಲ್ಲಿ ಹೈಟೆಕ್ಷನ್ ಕಾಮಗಾರಿಗೆ ಪವರ್‌ಗ್ರಿಡ್ ಸಂಸ್ಥೆ ಕಾನೂನು ಬಾಹಿರವಾಗಿ ಸಾವಿರಾರು ಮರಗಳನ್ನು ಹನನ ಮಾಡಿದರು) ೨೦೧೪ರಲ್ಲಿ ಮಡಿಕೇರಿಯಿಂದ ಕುಟ್ಟದ ವರೆಗೆ ರಸ್ತೆ ಅಗಲೀಕರಣದ ನೆಪದಲ್ಲಿ ೧೦೦ ವರ್ಷಗಳಿಂದ ಬೆಳೆದು ನಿಂತಿದ್ದ ಹಲಸಿನ ಮರಗಳನ್ನು ಕಡಿದು ಹಾಕಿದರು. ೨೦೧೬ರಲ್ಲಿ ಕಾವೇರಿ ನದಿ ಪಾತ್ರದಿಂದ ಕೊಡಗಿನ ಗಡಿ ಕುಶಾಲನಗರದವರೆಗೆ ಮನೆ ನಿರ್ಮಿಸಲು ಹಾಗೂ ಶುಂಠಿ ಕೃಷಿ ಮಾಡಲು ಸಾವಿರಾರು ಮರಗಳು ಧರೆಗೆ ಉರುಳಿದವು. ೨೦೧೮ರಲ್ಲಿ ಜಲಪ್ರಳಯ ಹಾಗೂ ಗುಡ್ಡ ಕುಸಿತದಿಂದ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ಮರಗಳು ನಾಶವಾಗಿದೆ, ಇವುಗಳೆಲ್ಲವು ೧೦ ರಿಂದ ೨೫ ಮೀಟರ್ ಎತ್ತರದ ಮರಗಳು.

೨೦೧೯ ಜೂನ್ ತಿಂಗಳಲ್ಲಿ ಶನಿವಾರಸಂತೆಯ ಅವರೆದಾಳು ತೋಟದಲ್ಲಿ ಕೇರಳ ಮೂಲದ ವ್ಯಕ್ತಿ ಸುಮಾರು ೭೦ ಕಾಡು ಜಾತಿ ಮರಗಳನ್ನು, ೨೦೧೯ರಲ್ಲಿ ಕೆ. ನಿಡುಗಣಿಯಲ್ಲಿ ಆಂಧ್ರ ಮೂಲದ ವ್ಯಕ್ತಿ ೬೮ ಎಕರೆ ಜಾಗದಲ್ಲಿ ೮೯೦ ಕಾಡು ಮರಗಳನ್ನು ಕಡಿಯಲು ಸ್ವತಃ ಅರಣ್ಯ ಇಲಾಖೆ ಒಪ್ಪಿಗೆ ನೀಡಿತು! ೨೦೨೧ ರಲ್ಲಿ ಖಾಸಗಿ ಸಂಸ್ಥೆಯೊAದು ಮಡಿಕೇರಿ ತಾಲೂಕಿನ ಹೊಸಕೇರಿಯ ಬೆಟ್ಟದ ಮೇಲೆ ಬರೋಬ್ಬರಿ ೩೦ ಎಕರೆ ಪ್ರದೇಶದಲ್ಲಿ ೩೦೦ಕ್ಕಿಂತ ಹೆಚ್ಚು ಮರಗಳನ್ನು ಕಡಿದು ಮತ್ತೆ ೫೩೦ ಮರಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿತ್ತು...! ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಅರಣ್ಯ ಇಲಾಖೆಯವರು ಇಂಗು ಗುಂಡಿಗಳನ್ನು ತೆಗೆದು ದೊಡ್ಡ ಅನಾಹುತಕ್ಕೆ ಕಾರಣವಾಯಿತು. ಇಲ್ಲಿಯು ಕೆಲವು ಖಾಸಗಿಯವರು ಮರಗಳನ್ನು ಕಡಿದು ಬೆಟ್ಟದ ಮೇಲೆ ನಾಲ್ಕೆöÊದು ಕೆರೆಗಳನ್ನು ನಿರ್ಮಿಸಿದ್ದಾರೆ. (ಕಾಸಿಗಾಗಿ ಕೈ ಚಾಚಿದವರು ಅನುಮತಿ ಪತ್ರ ನೀಡಿದ್ದಾರೆ) ಕುಶಾಲನಗರದ ಬಸವನಹಳ್ಳಿಯ ಸರ್ವೆ ನಂ. ೧/೧ರಲ್ಲಿ (ಸರಕಾರಿ ಜಾಗ)ದಲ್ಲಿ ನೂರಾರು ಮರಗಳನ್ನು ಕಡಿದು ಸಾಗಿಸಲಾಗಿದೆ. ಮಡಿಕೇರಿಯ ಮಂಗಳಾದೇವಿ ನಗರ ಅತ್ಯಂತ ಸೂಕ್ಷö್ಮ ಪ್ರದೇಶದಲ್ಲಿ ಸುಮಾರು ೮೦ ಮರಗಳನ್ನು ಕಡಿದಿದ್ದಾರೆ...! ಕೊಡಗು ಜಿಲ್ಲೆಯ ವಿವಿಧೆಡೆ ನಿಯಮ ಬಾಹಿರವಾಗಿ ಮರಗಳನ್ನು ಕಡಿಯಲು ಅನುಮತಿ ನೀಡಿದ ಡಿ.ಎಫ್.ಓ. ೨೦೧೯ರಲ್ಲಿ ಅಮಾನತ್ತಾದರೆ. ೨೦೨೩ ರಲ್ಲಿ ಇನೊಬ್ಬ ಡಿ.ಎಫ್.ಓ. ಅಮಾನ ತ್ತುಗೊಳ್ಳುತ್ತಾನೆ. ಅನಾಹುತಗಳು ನಡೆದು ಸರ್ವನಾಶವಾದ ಮೇಲೆ ಅಮಾನತ್ತು ಮಾಡುವ ಬದಲು, ಇವರನ್ನೆಲ್ಲ ಮನೆಗೆ ಕಳುಹಿಸುವುದೆ ಲೇಸು.

ಕೊಡಗಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಮರಗಳ ಹನನದ ಬಗ್ಗೆ ಕಳೆದ ಎರಡು ದಶಕದಿಂದ ಪರಿಸರ ಕಾಳಜಿ ಉಳ್ಳವರು ನಡೆಸು ತ್ತಿರುವ ಹೋರಾಟ, ಹಾಕುತ್ತಿರುವ ಕೂಗು ರಾಜ್ಯ ಸರ್ಕಾರದ ಕಿವಿಗೆ ತಾಗದೆ ಕೇವಲ ಅರಣ್ಯ ರೋಧನೆಯಾಗಿದೆ.

- ಮಚ್ಚಮಾಡ ಅನೀಶ್ ಮಾದಪ್ಪ, ಟಿ. ಶೆಟ್ಟಿಗೇರಿ.