ಮಡಿಕೇರಿ, ಜು. ೨೬: ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ೧೫ ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಪೈಕಿ ಇತ್ತೀಚೆಗೆ ವಿಧಾನ ಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಯುವಕ ಕೂಡ ಭಾಗಿಯಾಗಿದ್ದಾನೆ.
ತಾ. ೨೬ ರಂದು ಕದನೂರು ನಾಪೋಕ್ಲು ರಸ್ತೆ ಜಂಕ್ಷನ್ ಬಳಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮಡಿಕೇರಿ ತಾಲೂಕಿನ ಮರಗೋಡು ಬಳಿಯ ಅರೆಕಾಡು ಗ್ರಾಮದ ರಶೀದ್ (೨೩), ಅಭ್ಯತ್‌ಮಂಗಲ- ಒಂಟಿ ಯಂಗಡಿಯ ಹೆಚ್.ಆರ್.ಸುದೀಶ್ (೨೩), ಮೈಸೂರು ಕೆಸಿಪಿ ಕಾಲೋನಿಯ ಇಮ್ರಾನ್ ಖಾನ್ (೩೫), ಮೂರ್ನಾಡು ಬಳಿಯ ಮುತ್ತಾರ್‌ಮುಡಿಯ ಎಂ. ಪ್ರಕಾಶ್ (೨೪), ಚೇರಂಬಾಣೆಯ ಹೆಚ್.ಎಂ. ಶಾಂತಕುಮಾರ್ (೨೭), ಕಡಗದಾಳಿನ ಎಸ್.ಎಂ. ಸಜೀರ್ (೩೭), ಎಂ.ಇ. ನಿಯಾಜ್ (೩೫), ಮೈಸೂರು ಶಾಂತಿನಗರದ ಇಮ್ರಾನ್ ಖಾನ್ (೪೬) ಬಂಧಿತ ಆರೋಪಿಗಳು.
ಗಾಂಜಾ ಮಾರಾಟ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ೧ ಕೆಜಿ ೨೪೩ ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪಿರಿಯಾಪಟ್ಟಣ ಕಡೆ ಯಿಂದ ಗಾಂಜಾ ತಂದು ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.
ವೀರಾಜಪೇಟೆ ಪಟ್ಟಣದ ಚಿಕ್ಕಪೇಟೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಿದ್ದಾಪುರ ಗೂಡುಗದ್ದೆ ನಿವಾಸಿ ಎನ್.ಪಿ. ಧನುಷ್ (೧೯), ಕಣ್ಣಂಗಾಲದ ಎನ್.ಸಿ. ಭರತ್ (೨೧), ಹೆಚ್.ಆರ್. ಲಿಖಿತ್ (೨೪) ಬಂಧಿತ ಆರೋಪಿಗಳು. ಇವರಿಂದ ೧ ಕೆಜಿ ೨೬ ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿ ಯ ನಲ್ವತೋಕ್ಲು ಬಿಳುಗುಂದ ಜಂಕ್ಷನ್‌ನ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಮಡಿಕೇರಿಯ ನಿವಾಸಿಗಳಾದ ಆರ್. ಶ್ರೀಧರ್ (೨೨), ಬಿ.ಜೆ. ರಘು (೨೮) ಎಂಬವರನ್ನು ಬಂಧಿಸಿ ಅವರಿಂದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಹಳೇ ಸಿದ್ದಾಪುರ ಬಸ್ ನಿಲ್ದಾಣ ಸಮೀಪ ಮಾಧಕ ವಸ್ತು ಸೇವನೆ ಮಾಡುತ್ತಿದ್ದ ಕೂಡುಗದ್ದೆ ನಿವಾಸಿ ಎಂ.ಕೆ. ಷಂಶುದ್ದೀನ್ (೪೯), ಇಂಜಿಲಗೆರೆ ನಿವಾಸಿ ಎ.ಎಸ್. ಅನಿಲ್ ಕುಮಾರ್ (೪೬) ಎಂಬವರನ್ನು ಬಂಧಿಸಲಾಗಿದೆ.
ಎAಎಲ್‌ಎ ಅಭ್ಯರ್ಥಿ..!
ಬಂಧಿತ ಆರೊಪಿಗಳ ಪೈಕಿ ಕಡಗದಾಳು ನಿವಾಸಿ, ಮಡಿಕೇರಿಯಲ್ಲಿ ಹೋಸ್ಟೇ ನಡೆಸುತ್ತಿರುವ ಸಜೀರ್ ಮಜೀದ್ ನೆಲಾಟ್ ಎಂಬಾತ ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವದು ಇಲ್ಲಿ ಗಮನಾರ್ಹ. ಭ್ರಷ್ಟಾಚಾರ ನಿರ್ಮೂಲನೆ, ಸಮಾಜದಲ್ಲಿ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ರಾಷ್ಟಿçÃಯ ಪಕ್ಷದ ಜಿಲ್ಲಾಧ್ಯಕ್ಷನಾಗಿರುವ ಸಜೀರ್ ಅದೇ ಪಕ್ಷದ ಅಭ್ಯರ್ಥಿ ಯಾಗಿ ಜನಸೇವೆ ಮಾಡುವ ಉದ್ದೇಶ ದೊಂದಿಗೆ ಸ್ಪರ್ಧೆ ಮಾಡಿದ್ದ..! ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ ಮಡಿಕೇರಿ ಡಿವೈಎಸ್ಪಿ ಎಂ. ಜಗದೀಶ್, ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರಪ್ಪ, ಠಾಣಾಧಿಕಾರಿ ಸಿ.ಸಿ. ಮಂಜುನಾಥ್, ಗ್ರಾಮಾಂತರ ಠಾಣೆ ಸಿಬ್ಬಂದಿಗಳು, ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.