ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ೬ ಮಸೂದೆ ಮಂಡನೆ
ನವದೆಹಲಿ, ಜು. ೨೬: ಮಣಿಪುರ ಹಿಂಸಾಚಾರಕ್ಕೆ ಸಂಬAಧಿಸಿದAತೆ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಜಮ್ಮು ಮತ್ತು ಕಾಶ್ಮೀರ ಮರು ಸಂಘಟನೆ ತಿದ್ದುಪಡಿ ಮಸೂದೆ ಸೇರಿದಂತೆ ಆರು ಮಸೂದೆಗಳನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಲಾಯಿತು. ಸ್ಪೀಕರ್ ಓಂ ಬಿರ್ಲಾ ಅವರು, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರಿಗೆ ಜನನ ಮತ್ತು ಮರಣ ಗಳ ನೋಂದಣಿ (ತಿದ್ದುಪಡಿ) ಮಸೂದೆ, ೨೦೨೩ ಅನ್ನು ಮಂಡಿಸುವAತೆ ಕೇಳಿಕೊಂಡರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಮನೀಶ್ ತಿವಾರಿ ಅವರು, ಹಾಗೆ ಮಾಡಲು ಸದನಕ್ಕೆ "ಶಾಸಕಾಂಗ ಸಾಮರ್ಥ್ಯ" ಇಲ್ಲ ಎಂದು ಪ್ರತಿಪಾದಿಸಿದರು ಮತ್ತು ಈ ಕ್ರಮವು ಖಾಸಗಿತನ ಮತ್ತು ಅಧಿಕಾರದ ಪ್ರತ್ಯೇಕತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದರು. ನ್ಯಾಯಾಂಗ ಪರಿಶೀಲನೆಯಲ್ಲಿರುವ ಕಾಯ್ದೆಗೆ ತಿದ್ದುಪಡಿ ತರುವುದು ಸಾಂವಿ ಧಾನಿಕ ಔಚಿತ್ಯಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು. ನಂತರ ಕೇಂದ್ರ ಸಚಿವರಾದ ವೀರೇಂದ್ರ ಕುಮಾರ್ ಮತ್ತು ಅರ್ಜುನ್ ಮುಂಡಾ ಅವರು ಕ್ರಮವಾಗಿ ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಪರಿಶಿಷ್ಟ ಜಾತಿಗಳ ಆದೇಶ (ತಿದ್ದುಪಡಿ) ಮಸೂದೆ, ೨೦೨೩ ಮತ್ತು ಸಂವಿಧಾನ (ಜಮ್ಮು-ಕಾಶ್ಮೀರ) ಪರಿಶಿಷ್ಟ ಪಂಗಡಗಳ ಆದೇಶ (ತಿದ್ದುಪಡಿ) ಮಸೂದೆ, ೨೦೨೩ ಅನ್ನು ಮಂಡಿಸಿದರು. ಮಣಿಪುರದಲ್ಲಿನ ಗಲಭೆ ಕುರಿತು ಚರ್ಚೆ ನಡೆಸಬೇಕೆಂಬ ವಿಚಾರಕ್ಕೆ ಸಂಬAಧಿಸಿದAತೆ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರು ಬುಧವಾರ ರಾಜ್ಯ ಸಭೆಯಿಂದ ಹೊರನಡೆದರು.
ಕಲ್ಲಿದ್ದಲ್ಲು ಹಗರಣ-ಮಾಜಿ ಸಂಸದ ಸೇರಿ ೫ ಮಂದಿಗೆ ಶಿಕ್ಷೆ
ನವದೆಹಲಿ, ಜು. ೨೬: ಛತ್ತೀಸ್‌ಗಢದಲ್ಲಿ ಕಲ್ಲಿದ್ದಲ್ಲು ನಿಕ್ಷೇಪ ಹಂಚಿಕೆ ಅಕ್ರಮಕ್ಕೆ ಸಂಬAಧಿಸಿದ ಪ್ರಕರಣದಲ್ಲಿ ದೆಹಲಿ ವಿಶೇಷ ನ್ಯಾಯಾಲಯ, ರಾಜ್ಯಸಭಾ ಮಾಜಿ ಸಂಸದ ವಿಜಯ್ ದರ್ದಾ ಹಾಗೂ ಅವರ ಪುತ್ರ ದೇವೆಂದರ್ ದರ್ದಾ ಅವರಿಗೆ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ತಾ. ೧೩ ರಂದು ದರ್ದಾ ಮತ್ತು ಮಾಜಿ ಕಲ್ಲಿದ್ದಲ್ಲು ಕಾರ್ಯದರ್ಶಿ ಹೆಚ್.ಸಿ. ಗುಪ್ತಾ ಸೇರಿದಂತೆ ಏಳು ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದ ದೆಹಲಿ ಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಇಂದು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದ ನ್ಯಾಯಾಲಯ, ವಿಜಯ್ ದರ್ದಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅವರ ಪುತ್ರ ದೇವೆಂದರ್ ದರ್ದಾ, ಎಂ.ಎಸ್ ಜೆಎಲ್‌ಡಿ ಯವತ್ಮಲ್ ಎನರ್ಜಿ ಪ್ರೆöÊವೇಟ್ ಲಿಮಿಟೆಡ್‌ನ ನಿರ್ದೇಶಕ ಮನೋಜ್ ಕುಮಾರ್ ಜಯಸ್ವಾಲ್ ಅವರಿಗೂ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಡಿಸೆಂಬರ್ ೩೧, ೨೦೦೫ ರಿಂದ ನವೆಂಬರ್ ೨೦೦೮ ರವರೆಗೆ ಕಲ್ಲಿದ್ದಲ್ಲು ಕಾರ್ಯದರ್ಶಿಯಾಗಿದ್ದ ಗುಪ್ತಾ ಅವರು ಈಗಾಗಲೇ ಕಲ್ಲಿದ್ದಲ್ಲು ನಿಕ್ಷೇಪ ಹಂಚಿಕೆಗೆ ಸಂಬAಧಿಸಿದAತೆ ಎರಡು ಪ್ರಕರಣಗಳಲ್ಲಿ ತಪ್ಪಿತಸ್ಥರಾಗಿದ್ದು, ಕ್ರಮವಾಗಿ ಎರಡು ಮತ್ತು ಮೂರು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಎರಡೂ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ.
ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ
ಇAಫಾಲ, ಜು. ೨೬: ಗಲಭೆ ಪೀಡಿತ ಮಣಿಪುರದಲ್ಲಿ ಹೊಸ ಹಿಂಸಾಚಾರ ಪ್ರಕರಣ ವರದಿಯಾಗಿದ್ದು, ಸುಮಾರು ೨,೦೦೦ ಮಂದಿಯಿದ್ದ ಜನರ ಗುಂಪೊAದು ಬುಧವಾರ ಬೆಳಿಗ್ಗೆ ಭಾರತ-ಮ್ಯಾನ್ಮಾರ್ ಗಡಿ ಪಟ್ಟಣವಾದ ಮೊರೆಹ್‌ನಲ್ಲಿ ಸುಮಾರು ೩೦ ಮನೆಗಳನ್ನು ಸುಟ್ಟುಹಾಕಿದೆ ಮತ್ತು ಇತರ ನಾಲ್ಕು ಮನೆಗಳನ್ನು ಕೆಡವಿದೆ. ಬಹಳಷ್ಟು ಮಹಿಳೆಯರೇ ಇದ್ದ ಗುಂಪು ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಮೊರೆಹ್ ಬಜಾರ್ ಪ್ರದೇಶದಲ್ಲಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಸ್ಥಳದಲ್ಲಿದ್ದರು. ಆದರೆ, ಅವರು ಮೂಕಪ್ರೇಕ್ಷಕರಾಗಿದ್ದರು. ಇನ್ನೊಂದೆಡೆ, ಸಿಬ್ಬಂದಿಯನ್ನು ಸಾಗಿಸಲು ಭದ್ರತಾ ಪಡೆಗಳು ಬಳಸುತ್ತಿದ್ದ ಎರಡು ಬಸ್‌ಗಳಿಗೆ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಜನರ ಗುಂಪೊAದು ಬೆಂಕಿ ಹಚ್ಚಿದ ಗಂಟೆಗಳ ನಂತರ ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಎರಡೂ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಹಿAಸಾಚಾರ ಪ್ರಕರಣಗಳ ಮರು ಪರಿಶೀಲಿಸಿ ಹಿಂಪಡೆಯಲು ಸೂಚನೆ
ಬೆಂಗಳೂರು, ಜು. ೨೬: ನಗರದ ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ ಮತ್ತು ಹಬ್ಬಳ್ಳಿ ಸೇರಿದಂತೆ ಇತರೆಡೆ ನಡೆದ ಪ್ರತಿಭಟನೆ ಮತ್ತು ಗಲಭೆಗಳಿಗೆ ಸಂಬAಧಿಸಿದAತೆ ಪ್ರಕರಣಗಳಡಿ ಬಂಧಿಸಲಾಗಿರುವ ಅಮಾಯಕ ಯುವಕರು, ವಿದ್ಯಾರ್ಥಿಗಳ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯುವAತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮನವಿಯನ್ನು ಪರಿಶೀಲಿಸುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಪ್ರತಿಪಕ್ಷ ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರವು ಒಂದು ಸಮುದಾಯದ ಕೋಮು ಅಪರಾಧಿಗಳಿಗೆ ಕ್ಲೀನ್‌ಚಿಟ್ ನೀಡುವ ಮೂಲಕ, ಜಿಹಾದಿಗಳು ಮತ್ತು ಪಿಎಫ್‌ಐ ಭಯೋತ್ಪಾದಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಆರೋಪಿಸಿದೆ. ಸಚಿವ ಪರಮೇಶ್ವರ ಅವರು ತಾ. ೧೯ ರಂದು ಪ್ರಧಾನ ಕಾರ್ಯದರ್ಶಿ ಕಾರಾಗೃಹಗಳು, ನಾಗರಿಕ ರಕ್ಷಣೆ ಮತ್ತು ಸಹಾಯಕ ಸೇವೆಗಳು (ಪಿಸಿಎಎಸ್), ಗೃಹ ಇಲಾಖೆಗೆ ಬರೆದ ಪತ್ರದಲ್ಲಿ ಶಾಸಕ ಮತ್ತು ಮಾಜಿ ಸಚಿವ ತನ್ವೀರ್ ಸೇಠ್ ಅವರ ಮನವಿ ಪತ್ರವನ್ನು ಉಲ್ಲೇಖಿಸಿದ್ದಾರೆ.