ಮಡಿಕೇರಿ, ಜು. ೨೬: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಅಬ್ಬರಿಸಿ ಬೊಬ್ಬೆರಿಯುತ್ತಿದ್ದ ಮಳೆರಾಯ ಸದ್ಯಕ್ಕೆ ಶಾಂತನಾಗಿದ್ದು, ಜಿಟಿಜಿಟಿ ಮಳೆ ಯಾಗುತ್ತಿದೆ. ಇದರಿಂದ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಜಿಲ್ಲೆಯಾದ್ಯಂತ ಕಳೆದ ೪-೫ ದಿನಗಳಿಂದ ಎಡೆಬಿಡದೆ ಗಾಳಿ ಸಹಿತ ಮಳೆಯಾಗುತಿತ್ತು. ವ್ಯಾಪಕ ಮಳೆಯಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ನದಿ, ಹೊಳೆ, ತೊರೆ, ಹಳ್ಳಕೊಳ್ಳಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದ್ದು, ಜಲಾವೃತಗೊಂಡಿದ್ದ ಪ್ರದೇಶಗಳಲ್ಲಿ ನೀರು ತಗ್ಗಿದೆ.
ಭಾಗಮಂಡಲದ ತ್ರಿವೇಣಿ ಸಂಗಮ, ಬೇತ್ರಿ, ಕುಶಾಲನಗರ, ಬಲಮುರಿಯಲ್ಲಿ ಹರಿಯುವ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ. ಭಾರಿ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದ ವಿದ್ಯುತ್ ಸಮಸ್ಯೆಯನ್ನು ಚೆಸ್ಕಾಂ ಸರಿಪಡಿಸುವಲ್ಲಿ ನಿರತವಾಗಿದೆ.
ಮಳೆ ಕಡಿಮೆಯಾದ ಹಿನ್ನೆಲೆ ನದಿಗಳಲ್ಲಿ ನೀರು ಸರಾಗವಾಗಿ ಹರಿದು ಹರಿವು ಕಡಿಮೆಯಾಗಿರುವುದರಿಂದ ಕರಡಿಗೋಡು, ಕುಶಾಲನಗರದಲ್ಲಿ ಜಲಾವೃತಗೊಂಡಿದ್ದ ಮನೆಗಳು ಆತಂಕದಿAದ ಸದ್ಯಕ್ಕೆ ದೂರವಾಗಿದೆ. ಮಳೆ ಹೆಚ್ಚಾದರೆ ಮತ್ತೇ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವ ಭೀತಿಯಲ್ಲಿ ಜನ ದಿನದೂಡುತ್ತಿದ್ದಾರೆ.
(ಮೊದಲ ಪುಟದಿಂದ) ಮಳೆಯಿಂದ ಹಾನಿಯಾದ ರಸ್ತೆಬದಿಗಳಿಗೆ ‘ಸ್ಯಾಂಡ್ ಬ್ಯಾಗ್’ಗಳನ್ನು ಅಳವಡಿಸಿ ತಾತ್ಕಾಲಿಕವಾಗಿ ಸರಿಪಡಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ರಸ್ತೆ ಬದಿಯ ಚರಂಡಿಗಳನ್ನು ಮಣ್ಣು ಅಗೆಯುವ ಯಂತ್ರದ ಮೂಲಕ ಶುಚಿಗೊಳಿಸಿ ಮಳೆ ಹೆಚ್ಚಾದರೆ ನೀರು ನುಗ್ಗದಂತೆ ಕ್ರಮವಹಿಸಲಾಗುತ್ತಿದೆ.
೧.೯೦ ಇಂಚು ಸರಾಸರಿ ಮಳೆ
ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೧.೯೦ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೦.೧೫ ಇಂಚು ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೨.೯೨ ಇಂಚು, ವೀರಾಜಪೇಟೆ ತಾಲೂಕಿನಲ್ಲಿ ೧.೧೨ ಇಂಚು, ಸೋಮವಾರಪೇಟೆ ತಾಲೂಕಿನಲ್ಲಿ ೧.೬೮ ಇಂಚು ಮಳೆಯಾಗಿದೆ.
ಮಡಿಕೇರಿ ಕಸಬಾ ೨.೨೮ ಇಂಚು, ನಾಪೋಕ್ಲು ೧.೪೨, ಸಂಪಾಜೆ ೫.೭೮, ಭಾಗಮಂಡಲ ೨.೧೮, ವೀರಾಜಪೇಟೆ ಕಸಬಾ ೧.೫೦, ಹುದಿಕೇರಿ ೧.೪೦, ಶ್ರೀಮಂಗಲ ೧.೩೨, ಪೊನ್ನಂಪೇಟೆ ೦.೭೮, ಅಮ್ಮತ್ತಿ ೦.೯೬, ಬಾಳೆಲೆ ೦.೭೬, ಸೋಮವಾರಪೇಟೆ ಕಸಬಾ ೧.೮೫, ಶನಿವಾರಸಂತೆ ೧.೧೮, ಶಾಂತಳ್ಳಿ ೪.೨೦, ಕೊಡ್ಲಿಪೇಟೆ ೦.೯೧, ಕುಶಾಲನಗರ ೦.೭೯, ಸುಂಟಿಕೊಪ್ಪ ೧.೧೪ ಇಂಚು ಮಳೆಯಾಗಿದೆ.