ಮುಳ್ಳೂರು, ಜು. ೨೬: ರೋಟರಿ ಸಂಸ್ಥೆಯು ಸಾರ್ವಜನಿಕ ವಲಯದಲ್ಲಿ ಮಾಡುತ್ತಿರುವ ಸಮಾಜಮುಖಿ ಮತ್ತು ಸಮಾಜ ಅಭಿವೃದ್ಧಿ ಕಾರ್ಯಗಳಿಗೆ ಜನಪ್ರತಿನಿಧಿಗಳು ಕೈಜೋಡಿಸಿದರೆ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅಭಿಪ್ರಾಯಪಟ್ಟರು.

ಸಮೀಪದ ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ವತಿಯಿಂದ ನಿರ್ಮಿಸಿರುವ ರೋಟರಿ ಭವನದ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿ ಸಂಸ್ಥೆಯು ಸಮಾಜ ಸೇವೆಯ ಮೂಲಕ ಹಲವಾರು ಕಾರ್ಯಗಳನ್ನು ಮಾಡುತ್ತಿದ್ದು ಸರಕಾರದ ಕಾರ್ಯಕ್ರಮ ಗಳಿಗೂ ಕೈಜೋಡಿಸುತ್ತಿರುವುದು ಶ್ಲಾಘನೀಯ. ರೋಟರಿ ಸಂಸ್ಥೆಯAತಹ ಇತರೆ ಸಾರ್ವಜನಿಕ ಸೇವಾ ಸಂಸ್ಥೆಗಳು ಸಮಾಜ ಸೇವೆ ಮಾಡುವುದರ ಜೊತೆಯಲ್ಲಿ ಬಡಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಮತ್ತು ವೈಯಕ್ತಿಕವಾಗಿ ಒಬ್ಬ ಜನಪ್ರತಿನಿಧಿಯಾಗಿ ನಾನು ರೋಟರಿ ಸಂಸ್ಥೆಯ ಸಮಾಜ ಅಭಿವೃದ್ಧಿ ಮತ್ತು ಸಾರ್ವಜನಿಕ ಕಾರ್ಯಗಳಿಗೆ ಯಾವಾಗಲೂ ಕೈಜೋಡಿಸಲು ಸಿದ್ಧನಿದ್ದೇನೆ ಎಂದರು.

ರೋಟರಿ ಸಂಸ್ಥೆಯು ಸಾಮಾಜಿಕ ಜವಾಬ್ದಾರಿ ತೆಗೆದುಕೊಂಡು ಸಮಾಜ ವನ್ನು ಅಭಿವೃದ್ಧಿಪಡಿಸುವುದರಿಂದ ಜನಪ್ರತಿನಿಧಿಗಳಿಗೂ ಸಮಾಜ ಸೇವೆಯ ಜವಾಬ್ದಾರಿತನ ಹೆಚ್ಚಾಗುತ್ತದೆ ಎಂದ ಅವರು, ರೋಟರಿ ಸಂಸ್ಥೆಯು ಸಮಾಜ ಸೇವೆಯ ಜೊತೆಯಲ್ಲಿ ಜನರ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಬಡಜನರಿಗೆ ಆರೋಗ್ಯ ಸೇವೆ ನೀಡುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ರೋಟರಿ ವಲಯ-೬ರ ಪೂರ್ವ ಜಿಲ್ಲಾ ಸಹಾಯಕ ರಾಜ್ಯಪಾಲ ಎಂ.ಡಿ. ಲಿಖಿತ್ ಮಾತನಾಡಿದರು. ರೋಟರಿ ಮಲ್ಲೇಶ್ವರ ಪೂರ್ವಾಧ್ಯಕ್ಷ ಹೆಚ್.ಈ. ತಮ್ಮಯ್ಯ ಅಧ್ಯಕ್ಷತೆೆ ವಹಿಸಿದ್ದÀ ಸಭೆಯಲ್ಲಿ ರೋಟರಿ ವಲಯ-೬ ರೋಟರಿ ಪೂರ್ವ ಜಿಲ್ಲಾ ರಾಜ್ಯಪಾಲ ಎಂ. ರಂಗನಾಥ್ ಭಟ್, ರೋಟರಿ ಪ್ರಮುಖ ಪಿ.ಕೆ. ರವಿ, ರೋಟರಿ ಮಲ್ಲೇಶ್ವರ ನೂತನ ಅಧ್ಯಕ್ಷ ಹೆಚ್.ಆರ್. ಉದಯ್‌ಕುಮಾರ್ ಮಾತನಾಡಿದರು. ಸಮಾರಂಭದಲ್ಲಿ ರೋಟರಿ ವಲಯ ಸೇನಾನಿ ಹೆಚ್.ಎಂ. ದಿವಾಕರ್, ರೋಟರಿ ಪ್ರಮುಖ ರಂಗಸ್ವಾಮಿ, ರೋಟರಿ ಮಲ್ಲೇಶ್ವರ ಪೂರ್ವಾಧ್ಯಕ್ಷ ಎಂ.ಟಿ. ಬೇಬಿ ಹಾಗೂ ರೋಟರಿ ಸದಸ್ಯರು ಹಾಜರಿದ್ದರು.