ಚೆಟ್ಟಳ್ಳಿ, ಜು. ೨೬: ನಿರಂತರ ವಿದ್ಯುತ್ ಸಮಸ್ಯೆಯಿಂದ ತೊಂದರೆ ಯಾಗುತ್ತಿರುವ ಚೆಟ್ಟಳ್ಳಿಯಲ್ಲಿ ವಿದ್ಯುತ್ ವಿತರಣಾ ಕೇಂದ್ರವನ್ನು ಸ್ಥಾಪಿಸುವ ಮೂಲಕ ಹಲವು ವರ್ಷಗಳ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡಬೇಕೆಂದು ಸ್ಥಳಿಯ ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸAಸ್ಥೆಗಳು ಮಡಿಕೇರಿ ಕೇತ್ರದ ಶಾಸಕ ಡಾ. ಮಂಥರ್ ಗೌಡ ಅವರಿಗೆ ಹಾಗೂ ವಿದ್ಯುತ್ ಇಲಾಖೆಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಚೆಟ್ಟಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸುಮಾರು ೨೦ ಸಾವಿರಕ್ಕೂ ಅಧಿಕ ಜನರು ವಾಸವಿದ್ದು ಚೆಟ್ಟಳ್ಳಿ, ವಾಲ್ನೂರು ವ್ಯಾಪ್ತಿ ಹಾಗೂ ನೆಲ್ಲಿಹುದಿಕೇರಿಯಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಇದರ ಪರಿಣಾಮ ವಿದ್ಯುತ್ ಅವಶ್ಯಕತೆ ಇರುತ್ತದೆ. ಚೆಟ್ಟಳ್ಳಿ ವ್ಯಾಪ್ತಿಗೆ ಸುಮಾರು ೧೫-೨೦ ಕಿ.ಮೀ. ದೂರದ ಸುಂಟಿಕೊಪ್ಪದ ವಿದ್ಯುತ್ ಸಂಪರ್ಕ ಕೇಂದ್ರದಿAದ ವಿದ್ಯುತ್ ಸರಬರಾಜಾಗುತ್ತಿದೆ. ೧೧ಕೆ.ವಿ ಮಾರ್ಗವು ಮೊದಲನೇ ಕಂಬದಿAದ ಕೊನೆಯ ಟಿ.ಸಿ (ಪರಿವರ್ತಕ) ವರೆಗೂ ಅರಣ್ಯ ಹಾಗೂ ತೋಟಗಳಲ್ಲೇ ಹಾದು ಹೋಗುತ್ತದೆ. ಪ್ರತೀ ವರ್ಷ ಮಳೆಗಾಲದಲ್ಲಿ ಅತಿ ಹೆಚ್ಚು ಮರಗಳು ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಬೀಳುವುದರಿಂದ ವಿದ್ಯುತ್ ಸಮಸ್ಯೆಗಳು ನಿರಂತರವಾಗಿ ಉಂಟಾಗುತ್ತವೆ. ಇಲಾಖಾ ಸಿಬ್ಬಂದಿಗಳು ಹರಸಾಹಸಪಟ್ಟರೂ ವಿದ್ಯುತ್ ಸಮಸ್ಯೆಗೆ ಪರಹಾರವಾಗುವುದಿಲ್ಲ. ಇದರಿಂದ ನಿರಂತರ ವಿದ್ಯುತ್ ಸಮಸ್ಯೆ, ಬ್ಯಾಂಕ್ ವ್ಯವಹಾರಕ್ಕೆ ತೊಂದರೆ, ನೀರಿನ ಸರಬರಾಜಿಗೆ ತೊಂದರೆ ಅನುಭವಿಸುವಂತಾಗಿದೆ.
ವಿದ್ಯುತ್ ಇಲಾಖೆ ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಒಂದು ವಿದ್ಯುತ್ ವಿತರಣಾ ಕೇಂದ್ರವನ್ನು ಸ್ಥಾಪಿಸುವುದರ ಮೂಲಕ ಚೆಟ್ಟಳ್ಳಿ, ವಾಲ್ನೂರು-ತ್ಯಾಗತ್ತೂರು, ನೆಲ್ಲಿಹುದಿಕೇರಿ ಹಾಗೂ ಸುತ್ತಲ ಸುಮಾರು ೨೮ ಹಳ್ಳಿಗಳ ನಿರಂತರ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರದ ಜೊತೆಗೆ ವಾಣಿಜ್ಯ ಬೆಳವಣಿಗೆ ಹಾಗೂ ಗ್ರಾಮೀಣ ಮಟ್ಟದ ಸಣ್ಣ ಕೈಗಾರಿಕಾ ತಯಾರಿಕೆ ಹಾಗೂ ಮೂಲಭೂತ ಸೌಕರ್ಯ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ದೊರೆಯಲಿದೆಂದು ಗ್ರಾಮಸ್ಥರ ಹಾಗೂ ವಿವಿಧ ಸಂಘ-ಸAಸ್ಥೆಗಳ ಒತ್ತಾಯವಾಗಿದೆ.
- ಕರುಣ್ ಕಾಳಯ್ಯ