ಕೋವರ್ ಕೊಲ್ಲಿ ಇಂದ್ರೇಶ್
ಬೆAಗಳೂರು, ಜು. ೨೭: ಬಿಜೆಪಿ ಯುವ ಮೋರ್ಚಾದ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ವಿಚಾರಣೆ ವೇಳೆ ಆರೋಪಿಗಳಿಗೆ ಕಿರುಕುಳ ನೀಡಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ ಎಂಬ ಆರೋಪ ಸಂಬAಧ ಎಫ್ಎಸ್ಎಲ್ ಮತ್ತು ಎನ್ಐಎ ಕಚೇರಿಯಲ್ಲಿನ ೨೦೨೨ರ ನವೆಂಬರ್ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದರೆ ಅದನ್ನು ವಿಶೇಷ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಹೈಕೋರ್ಟ್ ಆದೇಶಿಸಿದೆ.
ಈ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಶಿಯಾಬ್ ಸಲ್ಲಿಸಿದ್ದ ದೂರು ಅರ್ಜಿಯನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜಿ. ಬಸವರಾಜ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಎಫ್ಎಸ್ಎಲ್ನಲ್ಲಿ ಎನ್ಐಎ ಅಧಿಕಾರಿಗಳು ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಹಿಂಸಿಸುತ್ತಿದ್ದಾರೆ ಎಂದು ಆರೋಪಿ ಮೊಹಮ್ಮದ್ ಜಬೀರ್ ಆರೋಪಿಸಿ ಆತನು ಸಿಸಿಟಿವಿ ದೃಶ್ಯಾವಳಿ ಮತ್ತು ಎನ್ಐಎ ಅಧಿಕಾರಿಗಳ ಕರೆ ವಿವರಗಳ ದಾಖಲೆಗಳನ್ನು ನೀಡುವಂತೆ ಎನ್ಐಎ ವಿಶೇಷ ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದ. ನವೆಂಬರ್ ೨೦೨೨ ರಲ್ಲಿ ನಿರ್ದಿಷ್ಟ ದಿನಾಂಕಗಳಲ್ಲಿ ಕಚೇರಿ ಮತ್ತು ಎನ್ಐಎ ಕಚೇರಿಯಲ್ಲಿ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡುವಂತೆ ಎನ್ಐಎ ಹಿಂಸೆ ನೀಡಿತ್ತು ಎಂದು ಆರೋಪಿಸಿದ್ದ.
ಆದರೆ ವಿಶೇಷ ನ್ಯಾಯಾಲಯವು ಅವನ ಮನವಿಯನ್ನು ತಿರಸ್ಕರಿಸಿ, ಎನ್ಐಎ ಅಧಿಕಾರಿಗಳು ಜಬೀರ್ಗೆ ಹಿಂಸೆ ನೀಡಿರುವುದು ‘ಆಧಾರರಹಿತ ಮತ್ತು ಸುಳ್ಳು' ಎಂದು ಹೇಳಿದೆ. ಏಕೆಂದರೆ ಈ ಹಿಂದೆ ಅನೇಕ ಬಾರಿ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಕೇಳಿದಾಗಲೂ ಆತ ಅಂತಹ ಆರೋಪ ಮಾಡಿರಲಿಲ್ಲ ಎಂದು ಹೇಳಿದೆ.
ಜಬೀರ್ ತನ್ನ ಹೇಳಿಕೆಯನ್ನು ದಾಖಲಿಸಲು ಸಿದ್ಧನಿದ್ದಾನೆ ಎಂದು ಸ್ಪಷ್ಟಪಡಿಸಿದ ನಂತರ ಅಖPಯ ಸೆಕ್ಷನ್ ೧೬೪ ರ ಅಡಿಯಲ್ಲಿ ಸ್ವಯಂಪ್ರೇರಿತ ಹೇಳಿಕೆಯನ್ನು ನೀಡಿದ್ದಾನೆ ಮತ್ತು ಮ್ಯಾಜಿಸ್ಟೆçÃಟ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾಗ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ವಿಶೇಷ ನ್ಯಾಯಾಲಯವು ಗಮನಿಸಿದೆ. ಎನ್ಐಎ ವಶದಲ್ಲಿರುವಾಗ ಮೂರು ತಿಂಗಳ ನಂತರ, ಅಂದರೆ ಫೆಬ್ರವರಿ ೨೦೨೩ ರಲ್ಲಿ ಬೆಂಗಳೂರಿನ ಜೈಲಿನಿಂದ ಮತ್ತೊಂದು ಜೈಲಿಗೆ ಸ್ಥಳಾಂತರಿಸುವಾಗ ಎನ್ಐಎ ಅಧಿಕಾರಿಗಳು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಜಬೀರ್ ಆರೋಪಿಸಿದ್ದಾನೆ ಎಂದು ವಿಶೇಷ ನ್ಯಾಯಾಲಯವು ಗಮನಿಸಿದೆ. ಆದರೆ ೧೮೭೨ ರ ಭಾರತೀಯ ಸಾಕ್ಷö್ಯ ಕಾಯ್ದೆಯ ಸೆಕ್ಷನ್ ೧೨೪ ಮತ್ತು ೧೨೬ ರ ಅಡಿಯಲ್ಲಿ ಎನ್ಐಎ ಅಧಿಕಾರಿಗಳ ಕರೆ ವಿವರ ದಾಖಲೆಗಳನ್ನು ಒದಗಿಸಲು ಆರೋಪಿ ಮಾಡಿದ್ದ ಮನವಿಯನ್ನು ಪೀಠವು ತಿರಸ್ಕರಿಸಿತು, ಏಕೆಂದರೆ ಎನ್ಐಎ ಅಧಿಕಾರಿಗಳ ನಡುವಿನ ದೂರವಾಣಿ ಸಂಭಾಷಣೆಗಳು ಗೌಪ್ಯತೆಯ ಬಗ್ಗೆ ಅಧಿಕೃತ ಸಂವಹನಗಳನ್ನು ಹೊಂದಿರಬಹುದು ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಎನ್ಐಎ ಕಚೇರಿಯಲ್ಲಿ ನೈಟ್ ವಿಷನ್ ಕ್ಯಾಮೆರಾಗಳು ಮತ್ತು ಮೂರು ತಿಂಗಳ ಕಾಲ ದೃಶ್ಯಗಳನ್ನು ಸಂಗ್ರಹಿಸುವ ಸೌಲಭ್ಯವಿದೆ ಎಂದು ಆರೋಪಿ ತನ್ನ ಮೇಲ್ಮನವಿ ಅರ್ಜಿಯಲ್ಲಿ ಹೇಳಿದ್ದ. ಈ ದೃಶ್ಯಾವಳಿಗಳು ಈಗ ಲಭ್ಯವಾಗದಿರಬಹುದು ಎಂದು ಎನ್ಐಎ ಹೇಳಿದೆ.