ಮಡಿಕೇರಿ, ಜು. ೨೬: ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ಪಾಕ್ ಸೇನೆಯನ್ನು ಹೊಡೆÀದುರುಳಿಸಿ ಭಾರತವನ್ನು ರಕ್ಷಿಸಿದ ಯೋಧರನ್ನು ಜಿಲ್ಲೆಯ ವಿವಿಧೆಡೆ ಇಂದು ಸ್ಮರಿಸಲಾಯಿತು. ಕಾರ್ಗಿಲ್ ವಿಜಯ ದಿನಾಚರಣೆ ಅಂಗವಾಗಿ ಸಂಘ, ಸಂಸ್ಥೆಗಳಿAದ ಗೌರವಾರ್ಪಣೆ ನಡೆಯಿತು. ಸ್ಮಾರಕಗಳಿಗೆ ಹೂಗುಚ್ಛವಿಟ್ಟು ನಮನ ಸಲ್ಲಿಸಲಾಯಿತು.

ಸಚಿವರಿಂದ ಅಮರ್ ಜವಾನ್ ಸ್ಮಾರಕಕ್ಕೆ ಪುಪ್ಪನಮನ

ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅಮರ್ ಜವಾನ್ ಸ್ಮಾರಕಕ್ಕೆ ಪುಪ್ಪಾರ್ಚನೆ ಮಾಡಿ ಸರ್ಕಾರದ ಪರವಾಗಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್, ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಸದಸ್ಯ ರಾಜೇಶ್ ಯಲ್ಲಪ್ಪ, ರೋಟರಿ ವುಡ್ಸ್ ಅಧ್ಯಕ್ಷ ಕೆ. ವಸಂತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಚಿನ್ನಸ್ವಾಮಿ, ಹಲವಾರು ಗಣ್ಯರು ಅಮರ್ ಜವಾನ್ ಸ್ಮಾರಕಕ್ಕೆ ಧಾರಾಕಾರ ಮಳೆ ನಡುವೇ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಮಾಜಿ ಸೈನಿಕರಿಗೆ ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನ - ಡಾ. ಮಂಥರ್ ಗೌಡ

ಮಡಿಕೇರಿ : ಕೊಡಗು ಜಿಲ್ಲೆಯ ಮಾಜಿ ಸೈನಿಕರ ಪ್ರಮುಖ ಬೇಡಿಕೆಯಾಗಿರುವ ಮಡಿಕೇರಿಯಲ್ಲಿ ಸಮುದಾಯ ಭವನ ನಿರ್ಮಾಣ ಸಂಬAಧಿತ ಪ್ರಸ್ತಾಪವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಭರವಸೆ ನೀಡಿದರು.

ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ರೋಟರಿ ವುಡ್ಸ್ ವತಿಯಿಂದ ನೆಹರು ಯುವ ಕೇಂದ್ರ ಹಾಗೂ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಸಹಯೋಗ ದಲ್ಲಿ ಆಯೋಜಿತ ಕಾರ್ಗಿಲ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿವೃತ್ತ ವಾಯು ಸೇನಾಧಿಕಾರಿ ಕಿಗ್ಗಾಲು ಗಿರೀಶ್ ಅವರನ್ನು ಸನ್ಮಾನಿಸಿ ಮಂಥರ್ ಗೌಡ ಮಾತನಾಡಿದರು.

ಜಿಲ್ಲೆಯಲ್ಲಿ ೫೦೦೦ಕ್ಕೂ ಅಧಿಕ ನಿವೃತ್ತ ಯೋಧರಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ನಿವೃತ್ತ ಯೋಧರಿಗೆ ಅವರದ್ದೇ ಆದ ಸಮುದಾಯ ಭವನಗಳಿದೆ. ಆದರೆ ಬಹಳ ವರ್ಷಗಳಿಂದಲೂ ಮಾಜಿ ಸೈನಿಕರ ಮುಖ್ಯ ಬೇಡಿಕೆಯಾಗಿದ್ದ ಸಮುದಾಯ ಭವನದ ಅಗತ್ಯತೆ ಇಂದಿಗೂ ಈಡೇರಿಲ್ಲ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿರುವ ತಾನು ಜಿಲ್ಲಾಡಳಿತದ ಮೂಲಕ ಸೂಕ್ತ ನಿವೇಶನ ಗುರುತಿಸಿ ಸಮುದಾಯ ಭವನವನ್ನು ಮಾಜಿ ಸೈನಿಕರ ಸಂಘಕ್ಕೆ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಯೂ ಹೇಳಿದರು.

ಕಾರ್ಗಿಲ್ ವಿಜಯೋತ್ಸವದಂದು ಪ್ರತಿಯೋರ್ವರು ನಮ್ಮ ದೇಶದ ರಕ್ಷಣೆಗಾಗಿ ಪ್ರಾಣವನ್ನೂ ಲೆಕ್ಕಿಸದೇ ಹೋರಾಡುತ್ತಿರುವ ವೀರಯೋಧರನ್ನು ಸ್ಮರಿಸಬೇಕು. ಅಂತೆಯೇ ಕಾರ್ಗಿಲ್ ಸಮರದಲ್ಲಿ ಶತ್ರುಗಳ ವಿರುದ್ಧ ಹೋರಾಡಿ ಭಾರತದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾದ ವರನ್ನೂ ಸ್ಮರಿಸಿಕೊಳ್ಳಲೇಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಡಾ. ಮಂಥರ್ ಗೌಡ, ಸೇನೆಯಲ್ಲಿ ದೇಶ ರಕ್ಷಣೆಯ ಕರ್ತವ್ಯ ನಿರ್ವಹಿಸಿ ನಿವೃತ್ತರಾಗುವ ಸೈನಿಕರಿಗೆ ಅಗತ್ಯ ನೆರವು ನೀಡುವುದು ಕೂಡ ನಮ್ಮೆಲ್ಲರ ಜವಬ್ದಾರಿಯಾಗಬೇಕೆಂದು ಕರೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗಿರೀಶ್ ಕಿಗ್ಗಾಲು, ೨೪ ವರ್ಷಗಳ ಹಿಂದೆ ಪಾಕಿಸ್ತಾನಿ ಪಡೆಗಳ ವಿರುದ್ಧ ಕಾರ್ಗಿಲ್ ವಲಯದಲ್ಲಿ ಜರುಗಿದ ಸಮರದಲ್ಲಿ ಭಾರತದ ಎರಡು ಮಿಗ್ ಹಾಗೂ ಒಂದು ಹೆಲಿಕಾಪ್ಟರ್ ಪತನಗೊಂಡದ್ದಲ್ಲದೆ ೫೨೭ ಯೋಧರು ಹುತಾತ್ಮರಾದರು. ಶತ್ರುಪಾಳಯವಾದ ಪಾಕಿಸ್ತಾನದ ೧೫೦೦ಕ್ಕೂ ಸೈನಿಕರು ಮೃತರಾದರು. ಈ ಸಂಘರ್ಷಕ್ಕಾಗಿ ಭಾರತಕ್ಕೆ ೧೨೦೦ ಕೋಟಿ ರೂಪಾಯಿ ವೆಚ್ಚವಾಗಿತ್ತು ಎಂದು ತಿಳಿಸಿದರು.

ಕಾರ್ಗಿಲ್ ಸಮರದಲ್ಲಿ ಭಾರತದ ಗೆಲುವಿಗೆ ಕಾರಣರಾಗಿ ನಮ್ಮ ದೇಶದ ಭೂಮಿಯನ್ನು ಸಂರಕ್ಷಿಸಿದ ವೀರಯೋಧರನ್ನು ರೋಟರಿ ವುಡ್ಸ್ ಅಧ್ಯಕ್ಷ ಕೆ. ವಸಂತ್ ಕುಮಾರ್ ಹೆಮ್ಮೆಯಿಂದ ಸ್ಮರಿಸಿದರು. ರೋಟರಿ ವುಡ್ಸ್ ಕಾರ್ಯದರ್ಶಿ ಹರೀಶ್ ಕಿಗ್ಗಾಲು ವಂದಿಸಿದ ಕಾರ್ಯಕ್ರಮದಲ್ಲಿ ವೀಣಾಕ್ಷಿ ಸನ್ಮಾನಿತರ ಪರಿಚಯ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ನಗರಸ ಭಾಧ್ಯಕ್ಷೆ ಅನಿತಾ ಪೂವಯ್ಯ, ಸದಸ್ಯ ರಾಜೇಶ್ ಯಲ್ಲಪ್ಪ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ರೋಟರಿ ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್. ಸಂಪತ್ ಕುಮಾರ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎ.ಕೆ. ಜೀವನ್, ಕಾರ್ಯದರ್ಶಿ ಡಿ.ಐ. ಪುರುಷೋತ್ತಮ್, ನೆಹರು ಯುವ ಕೇಂದ್ರದ ಸುಕುಮಾರ್, ದೀಪ್ತಿ, ರಂಜಿತ, ರೋಟರಿ ಪ್ರಮುಖರಾದ ಅನಿಲ್ ಎಚ್.ಟಿ., ಬಿ.ಜಿ. ಅನಂತ ಶಯನ, ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಸುಮಿತ್ರಾ, ಕೊಡಗು ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರ ರೈ, ತಿಮ್ಮಯ್ಯ ಮ್ಯೂಸಿಯಂ ವ್ಯವಸ್ಥಾಪಕ ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಮತ್ತಿತರರು ಹಾಜರಿದ್ದರು. ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು.ಹಿಂದೂ ಜಾಗರಣಾ ವೇದಿಕೆ

ಮಡಿಕೇರಿ : ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಮಡಿಕೇರಿಯ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ನಡೆಯಿತು. ಈ ಪ್ರಯುಕ್ತ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಪರಿವರ್ತನಾ ಟ್ರಸ್ಟ್ (ರಿ) ಬೆಂಗಳೂರು ಹಾಗೂ ರಕ್ತನಿಧಿ ಘಟಕದ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು. ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಮೇಜರ್ ಬಿದ್ದಂಡ ನಂಜಪ್ಪ ಹಾಗೂ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕೆ.ಟಿ. ಉಲ್ಲಾಸ್ ಆಗಮಿಸಿದ್ದರು.

ಈ ಸಂದರ್ಭ ಮೇಜರ್ ಓ.ಎಸ್. ಚಿಂಗಪ್ಪ, ಹಿ. ಜಾ. ವೇ ಸಂಚಾಲಕ ಕುಕ್ಕೇರ ಅಜಿತ್, ಪ್ರಮುಖರಾದ ವಿನಯ್, ದುರ್ಗೇಶ್ ಭಜರಂಗಿ, ಚರಣ್, ಕುಮಾರ್, ದಾಮೋದರ ರಾಂ, ರಜಿ, ರವಿ ಕುಶಾಲಪ್ಪ, ರಾಬಿನ್ ದೇವಯ್ಯ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಸೇರಿದಂತೆ ನಗರಸಭಾ ಸದಸ್ಯರು, ಮಾಜಿ ಸೈನಿಕರು, ಕಾರ್ಯಕರ್ತರು ಸೇರಿ ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು.

ಶನಿವಾರಸಂತೆಯಲ್ಲಿ

ಮುಳ್ಳೂರು: ಕಾರ್ಗಿಲ್ ವಿಜಯೋತ್ಸವ ದಿನವನ್ನು ಶನಿವಾರಸಂತೆ ನಿವೃತ್ತ ಸೈನಿಕರು ಆಚರಿಸಿದರು.

ಶನಿವಾರಸಂತೆ ನಿವೃತ್ತ ಸೈನಿಕರ ಸಂಘದ ವತಿಯಿಂದ ಸಂಘದ ಕಚೇರಿಯ ಮುಂಭಾಗದಲ್ಲಿ ಅಳವಡಿಸಿದ ಭಾರತೀಯ ಸೈನಿಕ ಲಾಂಛನಕ್ಕೆ ನಿವೃತ್ತ ಸೈನಿಕರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ನಡೆದ ಸಭೆಯಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎ.ಎಸ್.ಮಹೇಶ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಕರು ದೇಶ ಸೇವೆ ಮಹತ್ವದ ಬಗ್ಗೆ ಅರಿತುಕೊಂಡರೆ ರಾಷ್ಟç ಪ್ರೇಮ ಬೆಳೆಯುತ್ತದೆ ಹಾಗೂ ಸೇನೆಗೆ ಸೇರಲು ಆಸಕ್ತಿ ವಹಿಸಬೇಕಿದೆ ಪೋಷಕರು ತಮ್ಮ ಮಕ್ಕಳನ್ನು ಸೇನೆಗೆ ಸೇರುವಂತೆ ಪ್ರೋತ್ಸಾಹಿಸುವಂತೆ ಕರೆ ನೀಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಎನ್.ಗಂಗಾಧರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಎಸ್.ಎನ್.ಪಾಂಡು, ಪದಾಧಿಕಾರಿಗಳಾದ ಕೆ.ಡಿ.ಚಂದ್ರಪ್ಪ , ತಿಮ್ಮಯ್ಯ, ಗಿರೀಶ್, ಪ್ರಸನ್ನ, ಆನಂದ್, ಸಂಘದ ಸದಸ್ಯರು ಪಾಲ್ಗೊಂಡಿದ್ದರು.ಕೂರ್ಗ್ ಪಬ್ಲಿಕ್ ವಿದ್ಯಾಸಂಸ್ಥೆ

ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಯುದ್ಧದಲ್ಲಿ ಮಡಿದ ವೀರರಿಗೆ ನಮನಗಳನ್ನು ಸಲ್ಲಿಸಲಾಯಿತು.

ಜಡಿ ಮಳೆ, ಶಾಲಾ-ಕಾಲೇಜುಗಳಿಗೆ ರಜೆಯ ಘೋಷಣೆಯ ಮಧ್ಯದಲ್ಲ್ಲೂ ವಸತಿ ಶಾಲೆಯ ಮಕ್ಕಳಿಂದ ಯೋಧರಿಗೆ, ಅವರ ದೇಶ ಸೇವೆಗೆ, ಹೆತ್ತವರ ಬಿಟ್ಟು ದೇಶಕ್ಕಾಗಿ ಬದುಕಿ ಬಾಳಿದವರಿಗೆ ದೇಶ ಪ್ರೇಮದ ನಮನವನ್ನು ಸಲ್ಲಿಸಲಾಯಿತು.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಯೋಧರಿಗೆ ಅವರ ದೇಶಾಭಿಮಾನಕ್ಕೆ ಒಂದು ನಿಮಿಷದ ಮೌನಾಚರಣೆಯನ್ನು ಮಾಡುವುದರ ಮೂಲಕ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ‘ಕಾರ್ಗಿಲ್ ವಿಜಯ್’ ಕುರಿತು ಮೂಡಿಬಂದ ಸಾಕ್ಷö್ಯಚಿತ್ರ ಪ್ರದರ್ಶಿಸಲಾಯಿತು.

ವೀರಾಜಪೇಟೆ

ವೀರಾಜಪೇಟೆ : ಕಾರ್ಗಿಲ್ ವಿಜಯ್ ದಿನದ ಅಂಗವಾಗಿ ವೀರಾಜಪೇಟೆ ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಯೋಧರ ಸ್ಮಾರಕ ಸ್ತಂಭಕ್ಕೆ ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಅವರ ನೇತೃತ್ವದಲ್ಲಿ ಪುಷ್ಪಗುಚ್ಛ ಇರಿಸಿ ಅಗಲಿದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನಂತರ ಮಾತನಾಡಿ ೧೯೯೯ರಲ್ಲಿ ಭಾರತದ ಗಡಿ ಭಾಗವಾದ ಕಾರ್ಗಿಲ್‌ನಲ್ಲಿ ಮೂರು ತಿಂಗಳು ಯುದ್ಧ ನಡೆದು ನಾವು ೫೨೩ ಸೈನಿಕರನ್ನು ಕಳೆದುಕೊಂಡಿದ್ದೇವೆ. ೧೩೫೬ ಜನರು ಗಾಯಗೊಂಡಿದ್ದಾರೆ. ಆದರು ನಮ್ಮ ಸೈನಿಕರು ಎದೆಗುಂದದೆ ನಮ್ಮ ದೇಶವನ್ನು ರಕ್ಷಣೆ ಮಾಡಿ ಕಾರ್ಗಿಲ್ ಪ್ರದೇಶವನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಜುಲೈ ೨೬ ರಂದು ಕಾರ್ಗಿಲ್ ವಿಜಯ್ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಉಪ ತಹಶೀಲ್ದಾರ್ ಪ್ರದೀಪ್‌ಕುಮಾರ್, ವೃತ್ತನಿರೀಕ್ಷಕ ಶಿವರುದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಕರ್ನಂಡ ಜಯ, ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನುಕುಮಾರ್, ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಸೂಫಿ, ಎಸ್.ಬಿ.ಐ. ವ್ಯವಸ್ಥಾಪಕಿ ಉಮಾ, ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಗಣೇಶ್, ವೀರಾಜಪೇಟೆ ಪ್ರೆಸ್‌ಕ್ಲಬ್ ಅಧ್ಯಕ್ಷ ಕೋಲತಂಡ ರಘುಮಾಚಯ್ಯ, ಇ.ಸಿ.ಎಚ್.ಎಸ್. ವ್ಯೆದ್ಯ ಲೆ. ಕರ್ನಲ್ ಲಕ್ಷಿö್ಮನಾರಾಯಣ್, ಕಳೆದ ಬಾರಿ ಹಿಮಪಾತದಲ್ಲಿ ಸಿಲುಕಿ ಮೃತಪಟ್ಟ ಅಲ್ತಫ್ ಕುಟುಂಬ ಹಾಗೂ ಮಾಜಿ ಸೈನಿಕರ ಸಹಕಾರ ಸಂಘದ ಕಾರ್ಯದರ್ಶಿ ಪುಗ್ಗೆರ ನಂದಾ, ಖಜಾಂಚಿ ತೋರೆರ ಪೂವಯ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸೋಮವಾರಪೇಟೆಯಲ್ಲಿ ಹುತಾತ್ಮ ಸೈನಿಕರ ಸ್ಮರಣೆ

ಸೋಮವಾರಪೇಟೆ : ಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ಮತ್ತು ಜೈ ಜವಾನ್ ಮಾಜೀ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಹಾಗೂ ಹುತಾತ್ಮ ಸೈನಿಕರ ಸ್ಮರಣೆ ಕಾರ್ಯಕ್ರಮ ನಡೆಯಿತು.

ಇಲ್ಲಿನ ಪುಟ್ಟಪ್ಪ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಮರ್ ಜವಾನ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಹುತಾತ್ಮ ಯೋಧರಿಗೆ ಮೌನಾಚರಣೆ ಮಾಡಿದರು. ಈ ಸಂದರ್ಭ ಮಾತನಾಡಿದ ಮಾಜೀ ಸೈನಿಕ ಕ್ಯಾಪ್ಟನ್ ಸುಬ್ರಮಣಿ ಅವರು, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನಗೈದ ಯೋಧರ ಸೇವೆಯನ್ನು ಸ್ಮರಿಸುವುದು ಪ್ರತಿಯೋರ್ವ ದೇಶವಾಸಿಯ ಕರ್ತವ್ಯ. ದೇಶಭಕ್ತಿಯೆಂಬುದು ಪ್ರತಿಯೋರ್ವರ ಮನಸ್ಸಿನಲ್ಲಿ ಅಂತರ್ಗತವಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಯುವ ವಾಗ್ಮಿ, ಸುಂಟಿಕೊಪ್ಪದ ಶ್ರೀಶಾ ಮಾತನಾಡಿದರು. ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಸುಭಾಷ್ ತಿಮ್ಮಯ್ಯ, ಮಾದಾಪುರ ಸುನಿಲ್, ಬೋಜೇಗೌಡ, ಎಂ.ಬಿ. ಉಮೇಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ಪ್ರಮುಖರಾದ ಮಹೇಶ್ ತಿಮ್ಮಯ್ಯ, ಹೆಚ್.ಕೆ. ಮಾದಪ್ಪ, ಬಿ.ಜೆ. ದೀಪಕ್, ಮಾಜೀ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಯೋಧ ಸ್ಮಾರಕ ನಿರ್ಮಾಣ: ಇಲ್ಲಿನ ಜೈ ಜವಾನ್ ಮಾಜೀ ಸೈನಿಕರ ಸಂಘದ ವತಿಯಿಂದ ಪತ್ರಿಕಾಭವನ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಈರಪ್ಪ ಮಾತನಾಡಿ, ದೇಶದ ಸೈನಿಕನಾಗಿ ಸೋಮವಾರಪೇಟೆ ಭಾಗದ ಸಾವಿರಾರು ಮಂದಿ ಸೇವೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಸೋಮವಾರಪೇಟೆಯಲ್ಲಿ ಯೋಧ ಸ್ಮಾರಕ ನಿರ್ಮಾಣ ಮಾಡುವ ಗುರಿಯನ್ನು ಸಂಘ ಹೊಂದಿದೆ ಎಂದರು.

ಸAಘದ ವತಿಯಿಂದ ಶೀಘ್ರದಲ್ಲಿಯೇ ಸಮುದಾಯ ಭವನ ಹಾಗೂ ಯೋಧ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಸ್ಮಾರಕ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಹಿAದೆ ಭಾರತೀಯ ಸೈನ್ಯಕ್ಕೆ ಕಷ್ಟದ ದಿನಗಳಿದ್ದವು. ಶತ್ರುವಿನ ಮೇಲೆ ಧಾಳಿ ನಡೆಸಲು ದೆಹಲಿಯಿಂದ ಆದೇಶಕ್ಕೆ ಕಾಯಬೇಕಾಗಿತ್ತು. ಅಂತೆಯೇ ರೈಫಲ್ ಬಳಕೆಗೂ ಅವಕಾಶ ಕೇಳಬೇಕಿತ್ತು. ಆದರೆ ಪ್ರಸ್ತುತ ಸೈನಿಕರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಇದರೊಂದಿಗೆ ಸೈನಿಕರಿಗೆ ಸವಲತ್ತುಗಳನ್ನು ಒದಗಿಸುತ್ತಿದೆ. ದೇಶದ ಗಡಿಗಳು ಭದ್ರವಾಗಿವೆ ಎಂದು ಅಭಿಪ್ರಾಯಿಸಿದರು.

ಪ್ರತಿಯೋರ್ವರೂ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದ ಅವರು, ಕಾರ್ಗಿಲ್ ಯುದ್ಧದ ವಿಜಯ ಎಷ್ಟು ಮುಖ್ಯವೋ ಹಾಗೆಯೇ ಕಾರ್ಗಿಲ್ ಯುದ್ಧದಲ್ಲಿ ಮಡಿದ ದೇಶದ ಸೈನಿಕರ ಕುಟುಂಬಗಳ ಹಿತಾಸಕ್ತಿ ಕಾಯುವುದೂ ಅಷ್ಟೇ ಮುಖ್ಯ. ದೇಶ ಸೇವೆಯಲ್ಲಿ ಜೀವನ ಸವೆಸಿದ, ಜೀವ ಕಳೆದುಕೊಂಡ ಸೈನಿಕರ ಸ್ಮರಣೆ ಅಗತ್ಯ. ಅವರ ಕುಟುಂಬಕ್ಕೆ ಸವಲತ್ತುಗಳನ್ನು ಒದಗಿಸುವಂತಾಗಬೇಕೆAದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಾಗ್ಮಿ ಶ್ರೀಶಾ, ಹಗಲೂ ರಾತ್ರಿ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ದೇಶ ರಕ್ಷಣೆಯ ಜವಾಬ್ದಾರಿ ಹೊತ್ತು ಗಡಿ ಕಾಯುವ ಸೈನಿಕರ ಸ್ಮರಣೆ ನಿತ್ಯ ನೂತನವಾಗಿರಬೇಕೆಂದರು.

ವೇದಿಕೆಯಲ್ಲಿ ಸಿಆರ್‌ಪಿಎಫ್‌ನ ನಿವೃತ್ತ ಡೆಪ್ಯೂಟಿ ಕಮಾಂಡರ್ ಮಂಜುನಾಥ್, ಸಂಘದ ಉಪಾಧ್ಯಕ್ಷ ಕ್ಯಾಪ್ಟನ್ ಸುಬ್ರಮಣಿ, ಕಾರ್ಯದರ್ಶಿ ಬಸಪ್ಪ, ಖಜಾಂಚಿ ಸುಕುಮಾರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಚೇರಂಗಾಲದಲ್ಲಿ

ಭಾಗಮAಡಲ: ಸಮಾಜ ಸೇವೆಯನ್ನು ಮಾಡುತ್ತ್ತಾ ದೇಶ ಸೇವೆ ಮಾಡಬಹುದು ಎಂದು ನಿವೃತ್ತ ಸೈನಿಕ ಕೋಪಟ್ಟಿಯ ಅಶೋಕ್ ಹೇಳಿದರು. ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ವತಿಯಿಂದ ಚೇರಂಗಾಲದ ಕಾವೇರಿ ಜನ್ಮಭೂಮಿ ಟ್ರಸ್ಟ್ನಲ್ಲಿ ಇರುವ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ ಅವರು, ಕೆಲವರಿಗೆ ದೇಶ ಸೇವೆ ಮಾಡುವಂತಹ ಮನಸ್ಸಿದ್ದು ಅಂತವರು ಸಾಮಾಜಿಕ ಕ್ಷೇತ್ರದಲ್ಲಿ ಇದ್ದುಕೊಂಡು ಸಮಾಜ ಸೇವೆ ಮಾಡಿದರೆ ದೇಶ ಸೇವೆ ಮಾಡಿದಂತೆ ಎಂದರು.

ಅಲ್ಲದೆ ಕಾರ್ಗಿಲ್ ಯುದ್ಧದ ಸನ್ನಿವೇಶವನ್ನು ಮೆಲುಕು ಹಾಕುತ್ತಾ ಅಲ್ಲಿನ ಪ್ರತಿಕೂಲ ವಾತಾವರಣ ಮತ್ತು ಶತ್ರು ರಾಷ್ಟçದ ಹುನ್ನಾರವನ್ನು ಹಿಮ್ಮೆಟಿಸಿದ ರೋಚಕತೆಯನ್ನು ತೆರೆದಿಟ್ಟರು.

ಸಭೆಯ ಅಧ್ಯಕ್ಷತೆಯನ್ನು ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್ ವಹಿಸಿದ್ದರು.

ಈ ಸಂದರ್ಭ ನಿವೃತ್ತ ಸೈನಿಕ ಕೋಳಿಬೈಲು ನಾರಾಯಣ, ನಿಡ್ಯಮಲೆ ನವೀನ್, ಕೆಟೋಳಿರ ದೀಪಕ್, ಹಾಲಿ ಸೈನಿಕ ಕೋಟೆರ ರಚನ್, ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್, ಒಕ್ಕೂಟದ ಕಾರ್ಯದರ್ಶಿ ಚಲನ್ ನಿಡ್ಯಮಲೆ. ಪಟ್ಟಮಾಡ ಸಂಜು, ಮತ್ತಾರಿ ರಾಜ, ಶಿಕ್ಷಕ ದಾಮೋದರ್, ಶಿವಪ್ಪ, ಕುದುಕುಳಿ ಅಶ್ವತ್, ಕುಯ್ಯಮುಡಿ ಸುನಿಲ್, ಬಾರಿಕೆ ದೀಪಕ್, ಕೂಡಕಂಡಿ ಚೇತನ್, ಕಾವೇರಿಮನೆ ಧರಣಿ, ಬಾರಿಕೆ ಶೈಲಜ ಪಾಲ್ಗೊಂಡಿದ್ದರು.

ಗೋಣಿಕೊಪ್ಪ ಕಾವೇರಿ ಕಾಲೇಜು

ಪೊನ್ನಂಪೇಟೆ : ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜು ವತಿಯಿಂದ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಜೋಡಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಈ ಸಂದರ್ಭ ಮಾತನಾಡಿದ ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಪ್ಪ ಕಾರ್ಗಿಲ್ ಕದನ ಗೆಲುವು ವಿಶ್ವಕ್ಕೆ ಭಾರತದ ತಾಕತ್ತನ್ನು ಪರಿಚಯಿಸುವುದರ ಜೊತೆಗೆ, ಯುವಕರಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿತು. ಯಾವ ರೀತಿಯಲ್ಲಿ ದೇಶದ ಹೊರಗಿನ ಶತ್ರುಗಳನ್ನು ನಮ್ಮ ಸೈನಿಕರು ಮಟ್ಟ ಹಾಕುತ್ತಿದ್ದಾರೋ ಅದೇ ರೀತಿ, ಇಂದಿನ ಯುವಕರ ಬದುಕನ್ನು ಹಾಳು ಮಾಡುತ್ತಿರುವ ಮಾದಕವಸ್ತು ಎಂಬ ಶತ್ರುವನ್ನು ಬಡಿದೋಡಿಸಿ, ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಯುವ ಜನತೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ಭಾರತದ ಗಡಿಯಲ್ಲಿ ಜೀವ ಮತ್ತು ಜೀವನವನ್ನು ಪಣಕ್ಕಿಟ್ಟು ಹಗಲಿರುಳೆನ್ನೆದೆ ಶ್ರಮಿಸುತ್ತಿರುವ ನಮ್ಮ ದೇಶದ ಯೋಧರಿಂದಾಗಿ ನಾವು ಇಂದು ಸುರಕ್ಷಿತರಾಗಿದ್ದೇವೆ. ದೇಶ ರಕ್ಷಣೆಗಾಗಿ ಹುತಾತ್ಮರಾದ ಪ್ರತಿಯೊಬ್ಬ ಯೋಧರಿಗೂ ನಮಿಸುತ್ತಾ, ಇಂದೂ ಕೂಡ ದೇಶದ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ಯೋಧರಿಗೆ ನಾವು ಚಿರಋಣಿಯಾಗಿರಬೇಕು ಎಂದರು. ಈ ಸಂದರ್ಭ ಕಾವೇರಿ ಕಾಲೇಜು ಕಚೇರಿ ಅಧೀಕ್ಷಕಿ ಟಿ.ಕೆ. ಲತಾ, ಪ್ರ.ದ.ಸ. ಆಲ್ವಿನ್ ಸಿಕ್ವೇರ, ಆಡಳಿತಾತ್ಮಕ ಸಿಬ್ಬಂದಿಗಳಾದ ಮಿನ್ನಂಡ ಜೋಯಪ್ಪ, ಎಂ.ಸಿ. ಕುಮಾರಿ, ಕಾವೇರಿ ಅಣ್ಣಯ್ಯ, ಸರಿತಾ, ಸೌಮ್ಯ, ಪುಷ್ಪಲತಾ, ಜಗದೀಶ್, ಮಣಿಕಂಠ, ಡಿಕ್ಕಿ ಹಾಗೂ ಪದವಿ ವಿದ್ಯಾರ್ಥಿಗಳು ಹಾಜರಿದ್ದರು.