ವೀರಾಜಪೇಟೆ, ಜು. ೨೫: ಕೊಲೆ ಆರೋಪದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳ ವಿರುದ್ಧ ಸಾಕ್ಷಾö್ಯಧಾರಗಳ ಕೊರತೆಯಿಂದ ವೀರಾಜಪೇಟೆ ಎರಡನೇ ಅಪರ ಜಿಲ್ಲಾ ನ್ಯಾಯಾಧೀಶರಾಧ ಸುಜಾತಾ ಅವರು ಪ್ರಕರಣವನ್ನು ಖುಲಾಸೆಗೊಳಿಸಿ ಆರೋಪಿಗಳನ್ನು ಬಿಡುಗಡೆಗೊಳಿಸಿದ್ದಾರೆ. ೨೯.೦೪.೨೦೧೯ ರಂದು ಬೆಕ್ಕೆಸೊಡ್ಲೂರು ಗ್ರಾಮದ ಪಣಿ ಎರವರ ಬಸವ, ಗಣೇಶ್, ಗುಂಡುಮಣಿ ಎಂಬವರು ಹಳೆಯ ದ್ವೇಷದಿಂದ ಪಣಿ ಎರವರ ನಾಗ ಎಂಬವರನ್ನು ಲಕ್ಷö್ಮಣ ತೀರ್ಥ ಹೊಳೆ ಬದಿಯಲ್ಲಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆರೋಪಿಗಳಿಗೆ ವಕೀಲರನ್ನು ನೇಮಿಸಲು ಸಾಧ್ಯವಿಲ್ಲದ ಕಾರಣ ತಾಲೂಕು ಕಾನೂನು ನೆರವು ಸಮಿತಿ ವಕೀಲರಾದ ಕೀತಿಯಂಡ ಪ್ರದ್ಯುಮ್ನಾ ಅವರನ್ನು ನೇಮಿಸಲಾಗಿತ್ತು. ಪ್ರಕರಣದ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷಾö್ಯಧಾರ ಇಲ್ಲದ ಕಾರಣ ಮೂವರನ್ನು ಖುಲಾಸೆಗೊಳಿಸಿ ಬಿಡುಗಡೆಗೊಳಿಸಿದ್ದಾರೆ.