ಕಡಂಗ, ಜು. ೨೫: ಸಿದ್ದಾಪುರ ವರಕ್ಕಲ್ ಸಮಸ್ತ ಭವನದಲ್ಲಿ ಎಸ್.ವೈ.ಎಸ್. ಕೊಡಗು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಡೆದ ಮುಹರಂ ಸಂಗಮ ಹಾಗೂ ಹಿಜರಿಯ ಸಂದೇಶ ಕಾರ್ಯಕ್ರಮ ದಲ್ಲಿ ನೂತನ ಎಸ್.ವೈ.ಎಸ್ ಆಮಿಲ ಕೊಡಗು ಜಿಲ್ಲಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಒಟ್ಟು ೭೦ ಸದಸ್ಯರನ್ನು ಒಳಗೊಂಡ ಆಮಿಲ ಸಮಿತಿಗೆ ೨೧ ಕಾರ್ಯನಿರ್ವಾಹಕ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ನೂತನ ಅಧ್ಯಕ್ಷರಾಗಿ ಹಾರಿಸ್ ಕಡಂಗ, ಪ್ರಧಾನ ಕಾರ್ಯದರ್ಶಿ ಗಳಾಗಿ ಶರೀಫ್ ವೀರಾಜಪೇಟೆ, ಜಿಲ್ಲಾ ವೀಕ್ಷಕರಾಗಿ ಮುಹಮ್ಮದ್ ಹಾಜಿ ಪೊನ್ನಂಪೇಟೆ, ಕೋಶಾಧಿಕಾರಿ ಯಾಗಿ ಅಬ್ದುಲ್ ರೆಹಮಾನ್ ಗೋಣಿಕೊಪ್ಪ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ರೆಹಮಾನ್ ಕೊಡ್ಲಿಪೇಟೆ ಹಾಗೂ ಸಯ್ಯದ್ ಸಲಾಂ ತಂಙಳ್ ಕುಶಾಲನಗರ, ಸಹ ಕಾರ್ಯದರ್ಶಿ ಗಳಾಗಿ ರಝಾಕ್ ತಿತಿಮತಿ ಹಾಗೂ ಹನೀಫ್ ಬಾಳೆಲೆ ಮತ್ತು ಸದಸ್ಯರುಗಳಾಗಿ ಎಂ.ಸಿ. ಅಶ್ರಫ್ ಮೌಲವಿ ಕೂಡಿಗೆ, ಹಾಫಿಳ್ ಹಾರಿಸ್ ಮುಸ್ಲಿಯಾರ್ ಅಯ್ಯಂಗೇರಿ, ಮುಹಮ್ಮದ್ ಅಝ್ಹರಿ ಎಮ್ಮೆಮಾಡು, ಸುಲೈಮಾನ್ ಸಿದ್ದಾಪುರ, ರಶೀದ್ ಪೆರುಂಬಾಡಿ, ಶರೀಫ್ ಶನಿವಾರ ಸಂತೆ, ಮಸೂದ್ ಸಿದ್ದಾಪುರ, ಜಂಶೀದ್ ಕಲ್ಲುಬಾಣೆ, ಅಶ್ರಫ್ ನಲುವತ್ತೆಕ್ರೆ, ಇಬ್ರಾಹಿಂ ಸುಂಟಿಕೊಪ್ಪ, ಸ್ವಾದಿಕ್ ಕುಂಜಿಲ. ಸಲಾಂ ಎಡಪಾಲ ಹಾಗೂ ತ್ವಾಹಾ ನೆಲ್ಲಿಹುದಿಕೇರಿ ಆಯ್ಕೆಗೊಂಡರು. ಜಿಲ್ಲಾ ಎಸ್.ವೈ. ಎಸ್. ಅಧ್ಯಕ್ಷ ಸಿ.ಪಿ.ಎಂ. ಬಷೀರ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಹಾಗೂ ಕೇಂದ್ರ ಮುಶಾವರ ಸದಸ್ಯ ಶೈಖುನಾ ಎಂ.ಎA. ಅಬ್ದುಲ್ಲಾ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂ.ವೈ. ಅಶ್ರಫ್ ಫೈಝಿ ವಿಷಯ ಮಂಡನೆ ನಡೆಸಿ, ಉಸ್ಮಾನ್ ಫೈಝಿ ಉಸ್ತಾದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸ್ವಾತಂತ್ರೊö್ಯÃತ್ಸವದ ಪ್ರಯುಕ್ತ ಕೊಡಗು ಜಿಲ್ಲಾ ಎಸ್.ವೈ.ಎಸ್. ಸಮಿತಿಯ ನೇತೃತ್ವದಲ್ಲಿ ನೆಲ್ಲಿಹುದಿಕೇರಿ ಶಾದಿ ಮಹಲ್‌ನಲ್ಲಿ ನಡೆಯಲಿರುವ ರಾಷ್ಟç ರಕ್ಷಾ ಸಂಗಮದ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು. ಎಸ್.ವೈ.ಎಸ್. ಆಮಿಲ ಕೊಡಗು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವೀರಾಜಪೇಟೆಯಲ್ಲಿ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.