ನಾಪೋಕ್ಲು, ಜು. ೨೬: ಪೊಲೀಸರೆಂದರೆ ಮಾರುದ್ದ ನಿಲ್ಲುವವರೇ ಹೆಚ್ಚು. ಅವರ ಸಹವಾಸವೇ ಬೇಡ ಎನ್ನುವ ಮಾತುಗಳು ಜನವಲಯದಲ್ಲಿ ಕೇಳಿ ಬರುವ ಮಾತುಗಳು. ಬೆರಳೆಣಿಕೆಯ ಜನ ಮಾಡುವ ಕೆಲವು ಅಚಾತುರ್ಯಗಳಿಂದ ಇಡೀ ಪೊಲೀಸ್ ಇಲಾಖೆಯೇ ತಲೆತಗ್ಗಿಸುವ ಪರಿಸ್ಥಿತಿ ಒಮ್ಮೊಮ್ಮೆ ಸೃಷ್ಟಿಯಾಗುತ್ತಿದೆ. ಇದು ಪೊಲೀಸ್ ಇಲಾಖೆ ಮಾತ್ರವಲ್ಲ. ಎಲ್ಲಾ ಸರಕಾರಿ ಇಲಾಖೆಗಳಲ್ಲಿಯೂ ನಡೆಯುತ್ತಿರುವ ಸಾಮಾನ್ಯ ಸಂಗತಿ. ಹಾಗೆಯೇ ಎಲ್ಲಾ ಇಲಾಖೆಗಳಲ್ಲಿಯೂ ಮಾನವೀಯತೆ ಇರುವವರೂ ಇದ್ದಾರೆ ಎನ್ನುವದು ಮಾತ್ರ ಸತ್ಯ.
ಇದಕ್ಕೆ ಉದಾಹರಣೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್. ಮಳೆಗಾಲದ ನೆರೆ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಡವರನ್ನು ಗುರುತಿಸಿ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ತನ್ನ ಸ್ವಂತ ಖರ್ಚಿನಲ್ಲಿ ಮನೆಗೆ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಂಜುನಾಥ್ ಅವರು ಸಮಾಜ ಸೇವೆಯೊಂದಿಗೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ೨೪ ಗ್ರಾಮಗಳನ್ನು ಮಾದಕವಸ್ತು ಮುಕ್ತ ಗ್ರಾಮಗಳನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಇದಕ್ಕಾಗಿ ತಮ್ಮ ಸಿಬ್ಬಂದಿಯೊAದಿಗೆ ಹಗಲಿರುಳು ಗಸ್ತು ತಿರುಗು ತ್ತಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ ಎಲ್ಲಾದರೂ ಗಾಂಜಾ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಮಾರಾಟ ಮತ್ತು ಸಂಗ್ರಹ ಕಂಡು ಬಂದರೆ ದಿನದ ೨೪ ಗಂಟೆಗಳಲ್ಲಿಯೂ ನನ್ನನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.