ಮಡಿಕೇರಿ, ಜು. ೨೫: ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ವತಿಯಿಂದ ಕಾರ್ಗಿಲ್ ವಿಜಯ ದಿನಾಚರಣೆ ಮತ್ತು ಯೋಧ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ತಾ.೨೬ ರಂದು (ಇಂದು) ಸಂಜೆ ೪.೧೫ ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿನ ಅಮರ್ ಜವಾನ್ ಸ್ಮಾರಕದಲ್ಲಿ ಹುತಾತ್ಮ ಸೈನಿಕರಿಗೆ ಪುಪ್ಪಾರ್ಚನೆಯ ಗೌರವ ನಮನ ಸಲ್ಲಿಸಿ ನಂತರ ಮಡಿಕೇರಿಯ ನಿವೃತ್ತ ಸೇನಾಯೋಧ ಉಗ್ರಾಣಿ ಮಾದಯ್ಯ ಅವರಿಗೆ ಸನ್ಮಾನ ನೆರವೇರಿಸಲಾಗುತ್ತದೆ.