ಪೊನ್ನAಪೇಟೆ, ಜು. ೨೫: ಆರಂಭಿಕ ಹಂತದಲ್ಲಿ ಪಡೆಯುವ ಶಿಕ್ಷಣ ಮನುಷ್ಯನ ಬದುಕು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ವ್ಯಕ್ತಿಯ ಮೌಲ್ಯಾಧಾರಿತ ಬದುಕು ಪರಿಪೂರ್ಣ ವಾಗಲು ಶಿಸ್ತು ಅತಿ ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ವಿದ್ಯಾರ್ಥಿ ಜೀವನದಿಂದಲೇ ಶಿಸ್ತನ್ನು ರೂಢಿಸಿ ಕೊಳ್ಳಬೇಕು ಎಂದು ಹಿರಿಯ ಶಿಕ್ಷಣ ತಜ್ಞ, ಗೋಣಿಕೊಪ್ಪಲು ಕಾಪ್ಸ್ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಎಂ.ಡಿ. ನಂಜುAಡ ಹೇಳಿದರು.
ಗೋಣಿಕೊಪ್ಪಲಿನ ಕಾಪ್ಸ್ ಸಭಾಂಗಣದಲ್ಲಿ ನಡೆದ ೨೦೨೩-೨೪ನೇ ಸಾಲಿನ ಶಾಲಾ ಶೈಕ್ಷಣಿಕ ಸಂಘದ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಸ್ತಿನ ಅಡಿಪಾಯದಲ್ಲೇ ವಿದ್ಯಾರ್ಥಿಗಳ ಜೀವನ ರೂಪು ಗೊಳ್ಳಬೇಕು. ಶಿಸ್ತಿನ ಹಾದಿ ತಪ್ಪಿದರೆ ಭವಿಷ್ಯದಲ್ಲಿ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ದಾರಿ ತಪ್ಪದಂತೆ ಎಚ್ಚರವಹಿಸುವ ಹೊಣೆಗಾರಿಕೆ ಶಿಕ್ಷಕರ ಮೇಲೆ ಎಷ್ಟಿದೆಯೋ ಅಷ್ಟೇ ಪೋಷಕರ ಮೇಲೂ ಇದೆ ಎಂಬುದನ್ನು ಮರೆಯಬಾರದು ಎಂದು ಪ್ರೊ. ನಂಜುAಡ ಅವರು ಒತ್ತಿ ಹೇಳಿದರು.
ಯಾವುದೇ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಭವಿಷ್ಯದ ಕುರಿತು ಕನಸುಗಳಿರಬೇಕು. ಕನಸು ಕಾಣುವು ದರಿಂದ ಗುರಿ ಮುಟ್ಟುವ ಹಾದಿ ಸುಗಮವಾಗಲಿದೆ. ತಮ್ಮ ಮಕ್ಕಳು ಮುಂದೆ ಕೈತುಂಬ ಸಂಬಳ ಪಡೆಯಲಿ ಎಂಬ ಏಕೈಕ ಉದ್ದೇಶದಿಂದ ಶಿಕ್ಷಣ ಕೊಡಿಸುವ ಪೋಷಕರ ಮನೋಸ್ಥಿತಿ ಬದಲಾಗಬೇಕು. ಆದರ್ಶ ಸಮಾಜ ನಿರ್ಮಾಣದ ಗುರಿಯೂ ಪೋಷಕರು ಹೊಂದಿರಬೇಕು ಎಂದು ಕಿವಿಮಾತು ಹೇಳಿದ ಅವರು, ಮನೆಯೇ ಮಗುವಿನ ಮೊದಲ ಪಾಠಶಾಲೆಯಾಗಿ ರುವುದರಿಂದ ಸುಭದ್ರ ಸಮಾಜದ ಮತ್ತು ಸಂಸ್ಕಾರಯುತ ವ್ಯಕ್ತಿತ್ವದ ಪರಿಕಲ್ಪನೆಯನ್ನು ಪೋಷಕರು ಆರಂಭದಿAದಲೇ ಮಕ್ಕಳಲ್ಲಿ ಮೂಡಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ಮಾತನಾಡಿ, ಕಠಿಣ ಪರಿಶ್ರಮ ಮತ್ತು ಸಮಯ ಪರಿಪಾಲನೆ ಸಾಧನೆಯ ಹಾದಿಗೆ ದಾರಿದೀಪವಾಗಿದೆ. ವಿದ್ಯಾರ್ಥಿಗಳಾಗಿರುವಾಗಲೇ ಉತ್ತಮ ನಾಯಕರಾಗುವ ಎಲ್ಲಾ ಕೌಶಲ್ಯಗಳನ್ನು ಅಳವಡಿಸಿಕೊಂಡು ಭವಿಷ್ಯದ ಭಾರತದ ಉನ್ನತಿಗೆ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ಆದ ಕೊಡುಗೆಗಳನ್ನು ನೀಡುವಂತಾಗಬೇಕು ಎಂದು ಹೇಳಿದರು.
ಕಾಪ್ಸ್ ಪ್ರಾಂಶುಪಾಲ ಎಂ. ರಾಮಚಂದ್ರನ್ ಅವರು ಶೈಕ್ಷಣಿಕ ಸಂಘದ ಪದಾಧಿಕಾರಿಗಳ ಪದ ಸ್ವೀಕಾರದ ಪ್ರತೀಕವಾಗಿ ಶಾಲಾಧ್ವಜ ಮತ್ತು ನಾಯಕತ್ವದ ದಂಡವನ್ನು ವಿದ್ಯಾರ್ಥಿ ನಾಯಕ ಆರ್ನವ್ ರೈ ಮತ್ತು ವಿದ್ಯಾರ್ಥಿನಿ ನಾಯಕಿ ಎಲ್. ತನುಶ್ರಿಗೆ ಹಸ್ತಾಂತರಿಸಿ ನಿರ್ವಹಿಸಬೇಕಾದ ಹೊಣೆಗಾರಿಕೆಯ ಬಗ್ಗೆ ಮಾತನಾಡಿದರು. ಇದಕ್ಕೂ ಮೊದಲು ಶಾಲಾ ಶೈಕ್ಷಣಿಕ ಸಂಘಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು, ಸಾವಿರಾರು ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.