ಮಡಿಕೇರಿ, ಜು. ೨೫: ಮಡಿಕೇರಿಯ ಹಳೆ ಸಿದ್ದಾಪುರ ರಸ್ತೆಯಲ್ಲಿರುವ ನಗರಸಭಾ ಉದ್ಯಾನವನದಲ್ಲಿನ ಮರವು ಗಾಳಿ - ಮಳೆಗೆ ರಸ್ತೆಯತ್ತ ಭಾಗಿದೆ. ಜಿಲ್ಲೆಯಲ್ಲಿ ಮಳೆಯ ರಭಸ ಹೆಚ್ಚಿದ್ದು, ಈ ಮರವು ಬೀಳುವ ಅಪಾಯದಲ್ಲಿವೆ. ಇದು ಬಿದ್ದರೆ ನೇರವಾಗಿ ವಿದ್ಯುತ್ ಕಂಬ - ತಂತಿಗಳ ಮೇಲೆಯೇ ಬೀಳುವ ಅಪಾಯವಿದೆ. ತಕ್ಷಣವೇ ಮರ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಸಂಬAಧ ನಗರಸಭೆ, ಅರಣ್ಯ ಇಲಾಖೆಗೆ ಸ್ಥಳೀಯರಾದ ಸಿ.ಕೆ. ಮೇದಪ್ಪ ಅವರು ಮನವಿ ಪತ್ರ ಸಲ್ಲಿಸಿದ್ದಾರೆ.