ವೀರಾಜಪೇಟೆ, ಜು. ೨೫: ೧೯೭೭ ರಿಂದ ೧೯೮೯ ರವರೆಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನ ಹೊಂದಿದ ಕೆದಮುಳ್ಳೂರು ಗ್ರಾಮದ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದ ಪಾಲೆಕಂಡ ಬೋಪಣ್ಣ ಅವರ ನಿಧನಕ್ಕೆ ವೀರಾಜಪೇಟೆ ವಕೀಲರ ಸಂಘದ ವತಿಯಿಂದ ಸಂತಾಪ ಸಭೆ ನಡೆಸಿದರು.

ಇದೇ ಸಂದರ್ಭದಲ್ಲಿ ಎರಡನೇ ಅಪರ ಜಿಲ್ಲಾ ನ್ಯಾಯಾಧೀಶೆ ಸುಜಾತಾ, ಹಿರಿಯ ಸಿವಿಲ್ ನ್ಯಾಯಾಧೀಶ ನಾಗಿನ್ ರೆಡ್ಡಿ, ಕಿರಿಯ ನ್ಯಾಯಾಧೀಶರಾದ ಪ್ರದೀಪ್ ಪೂತೇದಾರ್, ಸಂತೋಷ್ ಕೊಠಾರಿ, ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಕೊಕ್ಕಂಡ ಅಪ್ಪಣ್ಣ ಹಾಗೂ ಇತರರು ಉಪಸ್ಥಿತರಿದ್ದರು. ಹಿರಿಯ ವಕೀಲರುಗಳಾದ ಕೆ.ಎಂ. ಮಾದಪ್ಪ, ಐ.ಆರ್. ಪ್ರಮೋದ್, ಬಿ.ಸಿ. ಸುಬ್ಬಯ್ಯ ಅವರುಗಳು ಬೋಪಣ್ಣ ಅವರ ವಿಚಾರವಾಗಿ ಮಾತನಾಡಿದರು.