ಕರಿಕೆ, ಜು. ೨೬: ಇಲ್ಲಿಗೆ ಸಮೀಪದ ಚೆತ್ತುಕಾಯ ಆಲತ್ತಿ ಕಡವು ಎಂಬಲ್ಲಿ ಕಾಡಾನೆ ಹಿಂಡು ತೋಟಕ್ಕೆ ದಾಳಿ ಮಾಡಿ ಫಸಲು ನಾಶಪಡಿಸಿವೆ.
ನಿವಾಸಿ ಶಂಕರ ಸರಳಾಯ ಎಂಬವರ ನಲವತ್ತಕ್ಕೂ ಅಧಿಕ ಫಸಲು ನೀಡುವ ಅಡಿಕೆ ಹಾಗೂ ನೂರಕ್ಕೂ ಅಧಿಕ ವಿವಿಧ ಜಾತಿಯ ಬಾಳೆ ಗಿಡಗಳನ್ನು ತಿಂದು, ಮುರಿದು ಎಂಬತ್ತು ಸಾವಿರ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ವಾರದಿಂದ ಆನೆ ದಾಳಿ ನಿರಂತರ ನಡೆಯುತ್ತಿದ್ದು, ಗ್ರಾಮಸ್ಥರು ತಮ್ಮ ಕೃಷಿ ಬೆಳೆಗಳನ್ನು ಕಳೆದುಕೊಂಡು ಕಂಗಲಾಗಿದ್ದಾರೆ.