ಕೂಡಿಗೆ, ಜು. ೨೩: ಹಾರಂಗಿ ಅಣೆಕಟ್ಟೆಗೆ ಒಳಹರಿವಿನ ನೀರಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯಿಂದ ನದಿಗೆ ಈಗಾಗಲೇ ೨೦ ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಲಾಗಿದೆ. ಹೊರ ಹರಿವು ಕೂಡ ಹೆಚ್ಚಾಗಿದ್ದು, ಅಣೆಕಟ್ಟೆ ಮುಂಭಾಗದ ಸೇತುವೆ ಮುಳುಗಡೆಯಾಗಿ ಹಾರಂಗಿ-ಯಡವನಾಡು-ಸೋಮವಾರಪೇಟೆ ಸಂಪರ್ಕ ಕಡಿತಗೊಂಡಿದೆ.