ಸುಂಟಿಕೊಪ್ಪ, ಜು. ೨೩: ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಮಾದರಿ ಶಾಲೆಯ ವಿದ್ಯಾರ್ಥಿಗಳಿಗೆ ಎನ್‌ಡಿಆರ್‌ಎಫ್ ರಾಷ್ಟಿçÃಯ ವಿಪತ್ತು ನಿರ್ವಹಣಾ ಸಮಿತಿ ವತಿಯಿಂದ ವಿಪತ್ತು ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಪ್ರಾತ್ಯಕ್ಷತೆಯನ್ನು ಏರ್ಪಡಿಸಲಾಗಿತ್ತು.

ರಾಷ್ಟಿçÃಯ ವಿಪತ್ತು ನಿರ್ವಹಣಾ ಸದಸ್ಯರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಎಲ್ಲೇ ಪ್ರವಾಹ, ಭೂಕುಸಿತ, ನೆರೆ, ಕಟ್ಟಡ ಕುಸಿತ ಸಂಭವಿಸಿದಾಗ ಪ್ರಾಣಹಾನಿ ಅನಾಹುತ ತಪ್ಪಿಸಲು ಈ ತಂಡ ಯಾವ ರೀತಿ ಕಾರ್ಯೋನ್ಮುಖವಾಗುತ್ತದೆ ಎಂಬ ಬಗ್ಗೆ ಎನ್‌ಡಿಆರ್‌ಎಫ್‌ನ ವಿಜಯವಾಡ ತಂಡದ ಇನ್ಸ್ಪೆಕ್ಟರ್ ಶಾಂತಿಲಾಯ್ ಅವರು ಮಾಹಿತಿ ನೀಡಿದರು.

ಈ ಸಂದರ್ಭ ಸುಂಟಿಕೊಪ್ಪ ನೀಡಲಾಗುತ್ತದೆ. ಎಲ್ಲೇ ಪ್ರವಾಹ, ಭೂಕುಸಿತ, ನೆರೆ, ಕಟ್ಟಡ ಕುಸಿತ ಸಂಭವಿಸಿದಾಗ ಪ್ರಾಣಹಾನಿ ಅನಾಹುತ ತಪ್ಪಿಸಲು ಈ ತಂಡ ಯಾವ ರೀತಿ ಕಾರ್ಯೋನ್ಮುಖವಾಗುತ್ತದೆ ಎಂಬ ಬಗ್ಗೆ ಎನ್‌ಡಿಆರ್‌ಎಫ್‌ನ ವಿಜಯವಾಡ ತಂಡದ ಇನ್ಸ್ಪೆಕ್ಟರ್ ಶಾಂತಿಲಾಯ್ ಅವರು ಮಾಹಿತಿ ನೀಡಿದರು.

ಈ ಸಂದರ್ಭ ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್‌ಖಾನ್, ಸರಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ಬಾಲಕೃಷ್ಣ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ, ಮಾಜಿ ಗ್ರಾ.ಪಂ.ಸದಸ್ಯೆ ರಹೆನಾ ಸುಲ್ತಾನ್, ಪ್ರೌಢಶಾಲೆಯ ಶಿಕ್ಷಕ ಪ್ರಕಾಶ್ ಹಾಗೂ ಸಹ ಶಿಕ್ಷಕ ಶಿಕ್ಷಕಿಯರು ಮತ್ತು ಎನ್‌ಡಿಆರ್‌ಎಫ್ ತಂಡದವರು ಇದ್ದರು.