ವೀರಾಜಪೇಟೆ, ಜು. ೨೩: ವೀರಾಜಪೇಟೆಯ ಬಾಳುಗೋಡು ವಿನಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಶಾಲಾ ಸಂಸತ್ತು ಹಾಗೂ ಎಟಿಎಲ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಜಿಲ್ಲಾ ಸಮನ್ವಯಾಧಿಕಾರಿ ಪ್ರಕಾಶ್ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಷಡಕ್ಷರಿ ಅವರು ಶಾಲಾ ಸಂಸತ್ತು ಹಾಗೂ ಲ್ಯಾಬ್‌ನ ಉದ್ಘಾಟನೆ ನೆರವೇರಿಸಿದರು.

ವಿಶೇಷ ಅತಿಥಿಗಳಾಗಿ ಆಗಮಿಸಿದ ಅಂಬೇಡ್ಕರ್ ವಸತಿ ಶಾಲೆ ತೋಳೂರುಶೆಟ್ಟಳ್ಳಿ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ, ಉಪನ್ಯಾಸಕ ಚೇತನ್, ಗೋಣಿಕೊಪ್ಪ ಪ್ರೌಢಶಾಲಾ ಶಿಕ್ಷಕ ಶಿವರಾಂ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣದ ಅಗತ್ಯತೆ ಮತ್ತು ಅನಿವಾರ್ಯತೆಯ ಕುರಿತು ಅರಿವನ್ನು ಮೂಡಿಸಿದರು.

ಇದೇ ಸಂದರ್ಭ ಪ್ರಥಮ ಪಿಯುಸಿ ಹಾಗೂ ಆರನೇ ತರಗತಿಗೆ ಪ್ರವೇಶ ಪಡೆದ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಾಲೆ ಮತ್ತು ಕಾಲೇಜು ವಿಭಾಗದಲ್ಲಿ ಶೇ. ೧೦೦ ರಷ್ಟು ಫಲಿತಾಂಶವನ್ನು ಗಳಿಸಲು ಶ್ರಮಿಸಿದ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲ ಡಾ. ದಿಲನ್ ಐ.ಎಂ. ವಹಿಸಿದ್ದರು. ಶಿಕ್ಷಕರಾದ ಸಾರಿಕಾ, ಆಂಗ್ಲ ಉಪನ್ಯಾಸಕಿ ಚೈತ್ರ ಸೇರಿದಂತೆ ವಸತಿ ಶಾಲಾ ಕಾಲೇಜಿನ ಶಿಕ್ಷಕ ಹಾಗೂ ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು, ಕಚೇರಿ ಸಿಬ್ಬಂದಿಗಳು ಹಾಜರಿದ್ದರು.