ಶೇಖರ್ ಶೆಟ್ಟಿ

ಶನಿವಾರಸಂತೆ, ಜು. ೨೩: ರೋಟರಿ ಸಂಸ್ಥೆಯ ಅಂರ‍್ರಾಷ್ಟಿçÃಯ ಅಧ್ಯಕ್ಷರು ಜಗತ್ತಿನಲ್ಲಿ ಭರವಸೆ ಮೂಡಿಸುವ ಧ್ಯೇಯವಾಕ್ಯದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿರುವ ಹಿನ್ನೆಲೆ ರೋಟರಿ ಸಮಾಜದಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಲಿದೆ ಎಂದು ರೋಟರಿ ತರಬೇತುದಾರ ಬಿ. ಶೇಖರ್ ಶೆಟ್ಟಿ ಹೇಳಿದರು.

ಶÀನಿವಾರಸಂತೆಯ ರೆಸಾರ್ಟ್ ಒಂದರಲ್ಲಿ ನಡೆದ ಸಮೀಪದ ಕೊಡ್ಲಿಪೇಟೆ ರೋಟರಿ ಸಂಸ್ಥೆಯ ೨೦೨೩-೨೪ನೇ ಸಾಲಿನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿ ಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣಾಧಿಕಾರಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ರೋಟರಿ ಸಂಸ್ಥೆಯಲ್ಲಿ ೩೦ ವರ್ಷಗಳ ಅನುಭವದಲ್ಲಿ ನಾನು ಕಂಡುಕೊAಡ ಸತ್ಯ, ಸತ್ವ, ಸ್ನೇಹ, ಒಡನಾಟ, ಸಂತೋಷ ಬೇರೆಲ್ಲೂ ಸಿಗುವುದಿಲ್ಲ. ಇದು ವೈಯಕ್ತಿಕ ಅನುಭವವಾಗಿದ್ದು ಈಗ ರೋಟ ರಿಯೇ ನನಗೆ ಕುಟುಂಬವಾಗಿದೆ ಎಂದು ಅನಿಸಿಕೆ ಹಂಚಿಕೊAಡ ಅವರು, ಮುಂದಿನ ಸಾಲಿನಲ್ಲಿ ಸದಸ್ಯರ ಸಂಖ್ಯೆ ಹೆಚ್ಚು ಮಾಡುವಂತೆ ಕರೆ ನೀಡಿದರು. ಸೋಮವಾರಪೇಟೆಯ ರೋಟರಿ ವಲಯ ಉಪ ರಾಜ್ಯಪಾಲ ಲಿಖಿತ್ ಮಾತನಾಡಿ, ಸಂಸ್ಥೆಯ ಅಂತ ರ‍್ರಾಷ್ಟಿçÃಯ ಅಧ್ಯಕ್ಷರ ಘೋಷಣೆಯಂತೆ ಅವರವರ ಊರುಗಳಲ್ಲಿ ರೋಟರಿ ಸಂಸ್ಥೆಯವರು ಜನರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಬೇಕು. ಶಿಕ್ಷಣ, ಕುಡಿಯುವ ನೀರು, ಪರಿಸರ ಸಂರಕ್ಷಣೆ, ಇತ್ಯಾದಿ ೭ ಗಮನಾರ್ಹ ವಾದ ಯೋಜನೆಗಳು ಹಾಗೂ ಅಂಗನವಾಡಿಗಳಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಕಾರ್ಯಕ್ರಮಗಳನ್ನು ಮುಂದಿನ ಸಾಲಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷ ಅಮೃತ್ ಕುಮಾರ್ ಮಾತನಾಡಿ, ಸಂಸ್ಥೆಯ ಸದಸ್ಯರುಗಳು ವಿಶ್ವಾಸವಿಟ್ಟು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವೆ. ವರ್ಷದೊಳಗೆ ಮುಖ್ಯವಾಗಿ ಅಂಗನವಾಡಿ ಮತ್ತು ಮಳೆ ನೀರು ಕೊಯ್ಲು ಕಾರ್ಯಕ್ರಮಕ್ಕೆ ಆದ್ಯತೆ ನೀಡಿ, ಜತೆಗೆ ವನಸಿರಿ, ವಿದ್ಯಾಸಿರಿ, ಆರೋಗ್ಯ ಸಿರಿ, ಜಲಸಿರಿಯಂತಹ ಸಮಾಜ ಮುಖಿ ಕಾರ್ಯಗಳನ್ನು ನಿರ್ದೇಶಕರ, ಸದಸ್ಯರ ಸಹಕಾರದೊಂದಿಗೆ ಮಾಡಲಾಗುವುದು ಎಂದರು.

೨೦೨೩-೨೪ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಮೃತ್ ಕುಮಾರ್, ಕಾರ್ಯದರ್ಶಿಯಾಗಿ ಭಾನುಪ್ರಕಾಶ್ ಹಾಗೂ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷ ಬಿ.ಕೆ. ಯತೀಶ್, ನಿರ್ಗಮಿತ ಕಾರ್ಯದರ್ಶಿ ಪ್ರಕಾಶ್ ಪ್ರಭು ವಾರ್ಷಿಕ ವರದಿಯನ್ನು ಮಂಡಿಸಿದರು.

ವಲಯ ಸೇನಾನಿ ಹೆಚ್.ಎಂ. ದಿವಾಕರ್, ಹೇಮಾವತಿ ರೋಟರಿ ಉಪಾಧ್ಯಕ್ಷ ಯು.ಹೆಚ್. ಉಮೇಶ್, ಪದಾಧಿಕಾರಿಗಳು, ಸದಸ್ಯರು, ಕುಟುಂಬ ವರ್ಗದವರು, ವಿವಿಧೆಡೆ ಯಿಂದ ಆಗಮಿಸಿದ್ದ ರೋಟರಿ ಪ್ರಮುಖರಾದ ಸತ್ಯನಾರಾಯಣ್, ಜವರೇಗೌಡ, ತಿಲಕ್, ರವಿ, ನಾಗೇಶ್, ಸುಂದರ್, ವಿಶ್ವಾಸ್ ಶೆಣೈ, ಆನಂದ್ ಶೆಟ್ಟಿ, ಚಂದ್ರಕಾAತ್ ಉಪಸ್ಥಿತರಿದ್ದರು.