ಕರಿಕೆ, ಜು. ೨೩: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಎಂಬಲ್ಲಿ ಕಾಡಾನೆ ತೋಟಕ್ಕೆ ದಾಳಿ ಮಾಡಿ ನಷ್ಟ ಉಂಟುಮಾಡಿದೆ. ಕಟ್ಟಕೋಡಿ ಕುಶಾಲಪ್ಪ ಗೌಡ ಎಂಬವರ ಅಡಿಕೆ ಹಾಗೂ ವಿವಿಧ ಜಾತಿಯ ಬಾಳೆ ಗಿಡಗಳನ್ನು ತುಳಿದು ನಾಶ ಮಾಡಿದ್ದು, ಸುಮಾರು ಆರು ಸಾವಿರದಷ್ಟು ನಷ್ಟ ಸಂಭವಿಸಿದೆ. ಅಲ್ಲದೇ ಪಕ್ಕದ ಸುಬ್ರಮಣ್ಯ (ಮಣಿ) ಎಂಬವರ ತೋಟಕ್ಕೂ ಲಗ್ಗೆ ಇಟ್ಟು ಸಾವಿರಾರು ರೂಪಾಯಿಯ ಅಡಿಕೆ, ಬಾಳೆ ಬೆಳೆಗಳನ್ನು ನಾಶ ಮಾಡಿದೆ.