ಸೋಮವಾರಪೇಟೆ, ಜು.೨೩: ಸೋಮವಾರಪೇಟೆ ತಾಲೂ ಕಿನಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ದಿನದ ೨೪ ಗಂಟೆಯೂ ಎಡೆಬಿಡದೆ ಮಳೆ ಯಾಗುತ್ತಿದ್ದು, ಜನ ಜೀವನ ಅಸ್ತ ವ್ಯಸ್ಥಗೊಂಡಿದೆ. ಮಳೆಯೊಂದಿಗೆ ಭಾರೀ ಗಾಳಿಯೂ ಬೀಸುತ್ತಿದೆ.

ಮಳೆ-ಗಾಳಿಯಿಂದಾಗಿ ಅಲ್ಲಲ್ಲಿ ಮರಗಳು, ಮರದ ರೆಂಬೆಕೊAಬೆಗಳು ಮುರಿದು ಬೀಳುತ್ತಿವೆ. ವಿದ್ಯುತ್ ತಂತಿಗಳ ಮೇಲೆ ಮರ ಬೀಳುತ್ತಿರುವುದರಿಂದ ತಂತಿಗಳ ಸಹಿತ ವಿದ್ಯುತ್ ಕಂಬಗಳು ಧರಾಶಾಹಿಯಾಗುತ್ತಿರುವ ಪರಿಣಾಮ, ಹಲವಷ್ಟು ಗ್ರಾಮಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುತ್ತಿವೆ.

ಗದ್ದೆ ಕೃಷಿ ಪ್ರಗತಿಯಲ್ಲಿದ್ದು, ರೈತಾಪಿ ವರ್ಗ ಬಿಡುವಿಲ್ಲದ ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿದೆ. ತಾಲೂಕಿನ ದಟ್ಟ ಮಲೆನಾಡು ಪ್ರದೇಶವಾಗಿರುವ ಪುಷ್ಪಗಿರಿ ತಪ್ಪಲಿನ ಗ್ರಾಮಗಳು ಅಕ್ಷರಶಃ ಮಳೆನಾಡಿನಂತಾಗಿವೆ. ಪುಷ್ಪಗಿರಿ ಬೆಟ್ಟದ ತಟದಲ್ಲಿರುವ ಗ್ರಾಮಗಳಲ್ಲಿ ದಿನದ ೨೪ ಗಂಟೆಯೂ ಮಳೆ ಸುರಿಯುತ್ತಿದೆ.

ಶಾಂತಳ್ಳಿ ಹೋಬಳಿಯಾದ್ಯಂತ ದಾಖಲೆಯ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಕುಡಿಗಾಣ ಗ್ರಾಮ ಮಳೆಯಲ್ಲಿ ಮುಳುಗಿದೆ. ಕುಡಿಗಾಣ ಹೊಳೆ ತುಂಬಿ ಹರಿಯುತ್ತಿದ್ದು, ಹಳೆಯ ಸೇತುವೆಯು ಮುಳುಗಡೆಯಾಗಿದೆ. ನೂತನ ಸೇತುವೆ ನಿರ್ಮಾಣಗೊಂಡಿರುವ ಹಿನ್ನೆಲೆ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಒಂದು ವೇಳೆ ನೂತನ ಸೇತುವೆ ನಿರ್ಮಾಣಗೊಳ್ಳದೇ ಇದ್ದಿದ್ದರೆ ಮಳೆಗಾಲದಲ್ಲಿ ಹೊರಗಿನ ಪ್ರಪಂಚದ ಸಂಪರ್ಕವನ್ನು ಕಡಿತಗೊಳಿಸಿಕೊಳ್ಳಬೇಕಿತ್ತು ಎಂದು ಗ್ರಾಮಸ್ಥರಾದ ಸುಧಿನ್ ತಿಳಿಸಿದ್ದಾರೆ. ಕುಡಿಗಾಣ ಸೇತುವೆ ತುಂಬಿ ಹರಿಯುತ್ತಿರುವುದರಿಂದ ಅಕ್ಕಪಕ್ಕದ ಗದ್ದೆಗಳಿಗೆ ನೀರು ನುಗ್ಗಿ ಕೃಷಿ ಕಾರ್ಯ ಸ್ಥಗಿತಗೊಂಡಿದೆ ಎಂದು ಅಲ್ಲಿನ ನಿವಾಸಿ ಎಂ.ಟಿ. ದಿನೇಶ್ ತಿಳಿಸಿದ್ದಾರೆ. ಉಳಿದಂತೆ ಕೊತ್ನಳ್ಳಿ, ಬೀದಳ್ಳಿ, ಕುಮಾರಳ್ಳಿ, ಹೆಗ್ಗಡಮನೆ, ಮಲ್ಲಳ್ಳಿ, ಹಂಚಿನಳ್ಳಿ, ಬೆಟ್ಟದಳ್ಳಿ, ಶಾಂತಳ್ಳಿ, ಸೂರ್ಲಬ್ಬಿ, ಕುಂಬಾರಗಡಿಗೆ, ಮಂಕ್ಯ, ಗರ್ವಾಲೆ, ಕುಂದಳ್ಳಿ, ಹರಗ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆ-ಗಾಳಿಯಿಂದಾಗಿ ಹಾನಿಯಾದ ಘಟನೆಗಳು ವರದಿಯಾಗುತ್ತಿವೆ. ಮರಗಳು ನೆಲಕ್ಕುರುಳುತ್ತಿದ್ದರೆ, ಅಲ್ಲಲ್ಲಿ ಬರೆಬಕುಸಿತ ಉಂಟಾಗುತ್ತಿವೆ.

ನದಿ ತೊರೆಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ತಾಲೂಕಿನ ಮಾದಾಪುರ-ಸುಂಟಿಕೊಪ್ಪ ಮಾರ್ಗ ಮಧ್ಯದ ಪನ್ಯದಲ್ಲಿ ಇಂದು ಬೆಳಗ್ಗೆ ವಿದ್ಯುತ್ ಕಂಬ ಮಳೆ -ಗಾಳಿಗೆ ಬಿದ್ದು ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಅಂತೆಯೇ ವಿದ್ಯುತ್ ಸಂಪರ್ಕಕ್ಕೂ ತಡೆಯಾಗಿತ್ತು. ಗರ್ವಾಲೆ ಗ್ರಾಮ ಸಂಪರ್ಕ ರಸ್ತೆಯ ಕಾರೇಕಾಡ್ ಕಲ್ಮಂಟಿ ಜಂಕ್ಷನ್‌ನಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ಧರಾಶಾಹಿಯಾಗಿ ಸಂಚಾರ ಸ್ಥಗಿತಗೊಂಡಿತ್ತು. ನಂತರ ಸೆಸ್ಕ್ ಸಿಬ್ಬಂದಿ, ಸ್ಥಳೀಯರು ಮರವನ್ನು ತೆರವುಗೊಳಿಸಿದರು.

ಮಾದಾಪುರದ ಅಂಗನವಾಡಿ ಶಿಕ್ಷಕಿ ವತ್ಸಲಾ ಅವರಿಗೆ ಸೇರಿದ ವಾಸದ ಮನೆಯ ಒಂದು ಪಾರ್ಶ್ವ ಅತೀ ಶೀತಕ್ಕೆ ಕುಸಿದು ಬಿದ್ದಿದೆ. ಮನೆಯ ಅಡುಗೆ ಕೋಣೆ ಕುಸಿದಿದ್ದು, ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಮಾದಾಪುರ ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಸಿಲ್ವರ್ ಮರ ಬಿದ್ದಿದ್ದು, ನಂತರ ತೆರವುಗೊಳಿಸಲಾಯಿತು.

ಸೋಮವಾರಪೇಟೆ ಪಟ್ಟಣ ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಸಿಲ್ವರ್ ಮರ ಬಿದ್ದಿದ್ದು, ನಂತರ ತೆರವುಗೊಳಿಸಲಾಯಿತು.

ಸೋಮವಾರಪೇಟೆ ಪಟ್ಟಣ