ಮಡಿಕೇರಿ, ಜು. ೨೨: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣೆ ಮತ್ತು ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ.
‘ಮುಂಗಾರಿನ ಸಂಭ್ರಮ' ಎಂಬ ವಿಷಯ ವಸ್ತು ನೀಡಲಾಗಿದ್ದು, ರೀಲ್ಸ್ ಅವಧಿ ಒಂದು ನಿಮಿಷ ಮೀರುವಂತಿಲ್ಲ. ಒಬ್ಬರು ಎಷ್ಟು ರೀಲ್ಸ್ ಬೇಕಾದರೂ ಕಳುಹಿಸಬಹುದಾಗಿದೆ. ಪ್ರಥಮ ಬಹುಮಾನ ರೂ. ೩೦೦೦, ದ್ವಿತೀಯ ರೂ. ೨೦೦೦, ತೃತೀಯ ರೂ. ೧೦೦೦ ನೀಡಲಾಗುತ್ತದೆ.
ರೀಲ್ಸ್ ವೀಡಿಯೋ ಲಂಬ (veಡಿಣiಛಿಚಿಟ) ಆಕಾರದಲ್ಲಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರು ವಯಸ್ಸು ಊರಿನ ವಿವರಗಳ ಸಮೇತ ೮೩೧೦೮೨೬೯೭೯ ನಂಬರ್ಗೆ ವಾಟ್ಸ್ಆ್ಯಪ್ ಮಾಡಬೇಕು.
ರೀಲ್ಸ್ ಕಳುಹಿಸಲು ಆಗಸ್ಟ್ ೧೦ ಕೊನೆಯ ದಿನವಾಗಿರುತ್ತದೆ. ರೀಲ್ಸ್ ಅನ್ನು ೮೩೧೦೮೨೬೯೭೯ಗೆ ವಾಟ್ಸ್ ಮಾಡಬಹುದು. ಅಥವಾ ಞoಜಚಿguಠಿಡಿessಛಿಟub.ಜಡಿushಥಿಚಿm@gmಚಿiಟ.ಛಿom ಗೆ ಇ-ಮೇಲ್ ಮಾಡಬಹುದು.
ರೀಲ್ಸ್ಗಳ ಪ್ರದರ್ಶನ ಮತ್ತು ಬಹುಮಾನ ವಿತರಣಾ ಸಮಾರಂಭ ವಿಶ್ವ ಛಾಯಾಗ್ರಹಣ ದಿನವಾದ ಆಗಸ್ಟ್ ೧೯ ರಂದು ಮಡಿಕೇರಿಯ ನೂತನ ಗಾಂಧಿ ಭವನ ಸಭಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಸಾಂಸ್ಕೃತಿಕ ಸಮಿತಿ ಸಂಚಾಲಕ ಐಮಂಡ ಗೋಪಾಲ್ ಸೋಮಯ್ಯ-೮೧೯೭೬೦೨೦೫೧ ಅಥವಾ ಕಾರ್ಯಕ್ರಮ ಸಂಚಾಲಕ ಮಂದನೆರವAಡ ಯುಗ ದೇವಯ್ಯ ೯೭೩೧೧೫೨೫೩೭ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.