ವೀರಾಜಪೇಟೆ, ಜು. ೨೨: ವೀರಾಜಪೇಟೆ ಅರಣ್ಯ ವಲಯದ ಅಮ್ಮತ್ತಿ ಶಾಖೆ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಯಡೂರು, ಹಚ್ಚಿನಾಡು, ಹಾಲುಗುಂದ, ಕಣ್ಣಂಗಾಲ, ಪುಲಿಯೇರಿ, ಗುಹ್ಯ, ಇಂಜಿಲಗೆರೆ, ಸಿದ್ದಾಪುರ ಸುತ್ತಮುತ್ತ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ತಾ. ೨೪ ರಿಂದ ೨೫ ರವರೆಗೆ ನಡೆಯಲಿದ್ದು, ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರು, ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಎಚ್ಚರಿಕೆಯಿಂದ ಇರಬೇಕೆಂದು ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕೆ.ಎಂ. ದೇವಯ್ಯ ತಿಳಿಸಿದ್ದಾರೆ.